Bhairathi Ranagal: ಶಿವಣ್ಣ ನಟನೆಯ ‘ಭೈರತಿ ರಣಗಲ್’ ಚಿತ್ರದ ಪ್ಯಾನ್ ಇಂಡಿಯಾ ಪೋಸ್ಟರ್ ಔಟ್

Public TV
2 Min Read
Bhairathi Ranagal shivarajkumar

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (ShivaRajkumar) ಅವರು ಹಿಟ್‌ ಮೇಲೆ ಹಿಟ್‌ ಸಿನಿಮಾಗಳನ್ನು ಕೊಡುತ್ತಿದ್ದಾರೆ. ಸಾಲು ಸಾಲು ಚಿತ್ರಗಳ ಮೂಲಕ ಶಿವಣ್ಣ ಸುದ್ದಿಯಲ್ಲಿದ್ದಾರೆ. ‌ಸದ್ಯ ಭೈರತಿ ರಣಗಲ್ (Bhairathi Ranagal) ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಪ್ಯಾನ್ ಇಂಡಿಯಾ ಸಿನಿಮಾವಾಗಿ ತೆರೆಗೆ ಬರಲಿದೆ.

2017ರಲ್ಲಿ ‘ಮಫ್ತಿ’ ಸಿನಿಮಾದಲ್ಲಿ ಶಿವಣ್ಣ ನಿರ್ವಹಿಸಿದ್ದ ಭೈರತಿ ರಣಗಲ್ ಪಾತ್ರ ಸೂರ್ ಹಿಟ್ ಆಗಿತ್ತು. ಆ ಸಿನಿಮಾಕ್ಕೆ ಗೆಲ್ಲುವ ಶಕ್ತಿ ತಂದುಕೊಟ್ಟಿದ್ದೇ ಶಿವಣ್ಣನ ಪಾತ್ರ. ಈಗ ಅದೇ ಪಾತ್ರವನ್ನು ಪ್ರಧಾನವಾಗಿರಿಸಿಕೊಂಡು ಸಿನಿಮಾ ತೆರೆಗೆ ಬರುತ್ತಿದ್ದು, ಪಾತ್ರದ ಹೆಸರಾದ ಭೈರತಿ ರಣಗಲ್ ಅನ್ನು ಸಿನಿಮಾಕ್ಕೂ ಇಡಲಾಗಿದೆ. ಇದನ್ನೂ ಓದಿ: ತಮಿಳಿನ ಈ ಹೀರೋಗೆ 100 ಕೋಟಿ ವೆಚ್ಚದಲ್ಲಿ ಚಿತ್ರ ನಿರ್ಮಾಣ ಮಾಡ್ತಾರೆ ಕಮಲ್ ಹಾಸನ್

ಈ ಚಿತ್ರದ ಪೋಸ್ಟರ್ ಅನ್ನು ಭಾನುವಾರ ಶಿವರಾಜ್ ಕುಮಾರ್ ಬಿಡುಗಡೆ ಮಾಡಿದ್ದಾರೆ. ಮಫ್ತಿ ಸಿನಿಮಾದಲ್ಲಿ ಭೈರತಿ ರಣಗಲ್ ಕಾಸ್ಟ್ಯೂಮ್ ಆದ ಕಪ್ಪು ಶರ್ಟ್, ಪಂಚೆಯನ್ನು ತೊಟ್ಟು ಕಟ್ಟಿಗೆಯ ಕುರ್ಚಿಯ ಮೇಲೆ ಶಿವಣ್ಣ ಕೂತಿರುವ ಪೋಸ್ಟರ್ ಗಮನ ಸೆಳೆಯುತ್ತಿದೆ. ಪೋಸ್ಟರ್ ಹಂಚಿಕೊಂಡಿರುವ ಶಿವಣ್ಣ ‘ಭೈರತಿ ರಣಗಲ್’ ಯುಗ ಆರಂಭವಾಗಿದ್ದು ಹೇಗೆಂದು ನೋಡಲು ಸಿದ್ಧರಾಗಿ ಎಂದು ಬರೆದುಕೊಂಡಿದ್ದಾರೆ.

dr.shivarajkumar 72270031 147069203325635 7290310346460925253 n

‘ಮಫ್ತಿ’ ಸಿನಿಮಾ ನಿರ್ದೇಶನ ಮಾಡಿದ್ದ ನರ್ತನ್ ಅವರೇ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಪೋಸ್ಟರ್ ಅನ್ನು ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಮಫ್ತಿ ಸಿನಿಮಾ ಬಿಡುಗಡೆ ಆಗಿ ಹಿಟ್ ಆದಾಗಲೇ ನಿರ್ದೇಶಕ ನರ್ತನ್, ತಾವು ರಣಗಲ್ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಆದರೆ ಬೇರೆ ಸಿನಿಮಾಗಳಿಗಾಗಿ ಕತೆ ಹೆಣೆಯುವಲ್ಲಿ ಬ್ಯುಸಿಯಾದ ನರ್ತನ್ ಈಗ ಸಿನಿಮಾ ಘೋಷಿಸಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿ ಗಂಗವ್ವಗೆ ಮನೆ ಕಟ್ಟಲು ಸಹಾಯ ಮಾಡಿದ ನಟ ನಾಗಾರ್ಜುನ

ಶಿವರಾಜ್ ಕುಮಾರ್ ಅವರ ಹೋಂ ಬ್ಯಾನರ್ ಗೀತಾ ಪಿಕ್ಚರ್ಸ್​ಗೆ ಇದು ಎರಡನೇ ಸಿನಿಮಾ ಆಗಿದ್ದು, ಮೊದಲ ಸಿನಿಮಾ ‘ವೇದ’ ಮೂಲಕ ಹಿಟ್ ನೀಡಿರುವ ನಿರ್ಮಾಪಕಿ ಗೀತಾ ಅವರು ಭೈರತಿ ರಣಗಲ್ ಸಿನಿಮಾಗೂ ಸಾಥ್ ನೀಡುತ್ತಿದ್ದಾರೆ. ಸದ್ಯದಲ್ಲಿಯೇ ಈ ಸಿನಿಮಾದ ಚಿತ್ರೀಕರಣ ಆರಂಭ ಮಾಡಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *