ದೊಡ್ಮನೆಯ ಪರಂಪರೆಯನ್ನ ಮುಂದುವರೆಸಲು ಬಂದಿದ್ದಾರೆ ‘ಯುವ’. ಚಾಲನೆ ಸಿಕ್ಕಾಗಿದೆ. ರಾಜ್‌ಪರಂಪರೆಯ ತವರೂರಲ್ಲೇ ಕಹಳೆ ಮೊಳಗಿದೆ. ನನ್ನಿಡೀ ಜೀವನ ಬಣ್ಣಕ್ಕೆ ಮೀಸಲು ಎಂದು ‘ಯುವ’ ಪ್ರತಿಜ್ಞೆಯನ್ನೂ ಮಾಡಾಗಿದೆ. ಇದು ಆರಂಭ ಅಷ್ಟೇ. ಆರಂಭದಲ್ಲೇ ದೊಡ್ಡದೊಂದು ಸಂಚಲನ ಸೃಷ್ಟಿಯಾಗಿದೆ. ಸುನಾಮಿ ಸುಂಟರಗಾಳಿ ಸಲಾಂ ಹೊಡೆದು ಯುವ ಮುಂದೆ ಬಾಗುವ ಸೂಚನೆಯೂ ಕಂಡು ಬರುತ್ತಿದೆ. ಶಿವಣ್ಣ (Shivarajkumar) ಜೊತೆ ಯುವ ಮಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ.
Advertisement
ಯುವ ದೊಡ್ಮನೆಗೆ ನಯಾ ಸಾಮ್ರಾಜ್ಯಾಧೀಶ. ಮೊದಲ ಚಿತ್ರಕ್ಕೇ ಎಲ್ಲಿಂದ ಬಂತು ಈ ಶಕ್ತಿ. ಎಂದು ನೋಡಿದರೆ ಕಾಣುವುದೇ ಅಣ್ಣಾವ್ರು ಹಾಗೂ ಅಪ್ಪು ಮುಖ. ಕಲಾವಿದರಾಗಿ ನಾಡು ನುಡಿಗೆ ತಮ್ಮದೇ ಆದ ಕೊಡುಗೆ ಕೊಟ್ಟ ಇತಿಹಾಸ ಇವರಿಗಿದೆ. ಹೆಣ್ಣು ಹೊನ್ನು ಮಣ್ಣಿಗೆ ಗೌರವ ಕೊಡುವ ಪರಂಪರೆ ಇವರದ್ದು. ಇದೇ ಕಾರಣಕ್ಕೆ, ರಾಜ್‌ಕುಮಾರ್ ಎಂಬ ಹೆಸರು ಬರೀ ಹೆಸರಲ್ಲ ವ್ಯಕ್ತಿತ್ವ. ಅದೇ ವ್ಯಕ್ತಿತ್ವವನ್ನ ಉಳಿಸಿ ಬೆಳೆಸಿ ಪಾಲಿಸಿದವರು ಅಪ್ಪು. ಅದೇ ದಾರಿಯಲ್ಲೇ ಸಾಗುತ್ತೇನೆ ಎಂದು ಎದ್ದು ಬಂದಿದೆ ದೊಡ್ಮನೆಯ ಮರಿಹುಲಿ. ಅದಕ್ಕೆ ಹೆಸರೇ ಯುವರಾಜ್‌ಕುಮಾರ್.
Advertisement
Advertisement
ಅಪ್ಪುವನ್ನ ಕಳೆದುಕೊಂಡ ನೋವು ಬರೀ ನೋವಲ್ಲ ಅದು ಆರದ ಗಾಯ. ಗಾಯಕ್ಕೆ ಔಷಧ ಅಪ್ಪುವೇ ಬಿಟ್ಟು ಹೋದಂತೆ ಜನರ ದೃಷ್ಟಿಗೆ ಎಟಕುವುದು ಯುವ. ಅದೇ ಯುವ ಈಗ ದೊಡ್ಮನೆ ಸಾಮ್ರಾಜ್ಯದ ಸಿಂಹಾಸನದಲ್ಲಿ ಕುಳಿತಿದ್ದಾರೆ. ಇದು ಬರೀ ಎಂಟ್ರಿಯಲ್ಲ. 50 ವರ್ಷಗಳ ಸುದೀರ್ಘ ಖ್ಯಾತಿ ಉನ್ನತಿ ಪ್ರೀತಿಯನ್ನೇ ನೋಡಿಕೊಂಡು ಬಂದಿರುವ ಕುಟುಂಬದ ಯುವರಾಜನ ಪಟ್ಟಾಭಿಷೇಕ.
Advertisement
‘ಯುವ’ (Yuva) ಮೊದಲ ಹಾಡು ರಿಲೀಸ್ ಆಗುತ್ತಿದ್ದಂತೆ ಸ್ಯಾಂಡಲ್‌ವುಡ್‌ನಲ್ಲಿ ಸಂಕ್ರಾಂತಿ ಶುರುವಾಗಿದೆ. ಯುವ ಆರ್ಭಟ ಶುರುವಾಗಿದೆ. ಅಭಿಮಾನಿಗಳ ಕೈಯಿಂದಲೇ ‘ಯುವ’ ಮೊದಲ ಹಾಡು ಯುವ ಬೇರು ಚಾಮರಾಜನಗರದಲ್ಲೇ ರಿಲೀಸ್ ಆಗಿದೆ. ಇದನ್ನೂ ಓದಿ:ಹೊಸ ಕಾರು ಖರೀದಿಸಿ ಕಂಡ ಕನಸನ್ನು ಈಡೇರಿಸಿಕೊಂಡ ತುಕಾಲಿ
View this post on Instagram
ಯುವ ಇಂಟ್ರೊಡಕ್ಷನ್ ಸಾಂಗ್ ಪದ ಜೋಡಣೆ ಮಾಡಿರೋದು ನಿರ್ದೇಶಕ ಸಂತೋಷ್ ಆನಂದ್ ರಾಮ್. ಅವರು ಅಪ್ಪು ನಾಡಿಮಿಡಿತ ಅರಿತಿದ್ದವರು. ಅಣ್ಣಾವ್ರ ಧ್ಯೇಯ ತಿಳಿದವರು. ಮುಂದೆ ಯಾವಾಗಲೂ ಯಾವುದು ಬೇಕು ಯಾವುದು ಬೇಡ ಎಂಬುದನ್ನ ಯೋಚಿಸಿ ವಿಮರ್ಶಿಸಿ ಹಾಡು ಬರೆದಿದ್ದಾರೆ. ಅದುವೇ ಒಬ್ಬನೇ ಶಿವ, ಒಬ್ಬನೇ ಯುವ.
ಯುವ ಸಾಂಗ್ ಯೂಟ್ಯೂಬ್‌ನಲ್ಲಿ ದೊಡ್ಮನೆ ಹಾಡು ನಂಬರ್ 1 ಟ್ರೆಂಡಿಂಗ್‌ನಲ್ಲಿದೆ. ಟ್ರೆಂಡ್‌ಗೇ ಠಕ್ಕರ್ ಕೊಡುವ ಕನ್ನಡ ಸಿನಿಮಾ ಇಂಡಸ್ಟ್ರಿಯ ಒನ್ ಆಂಡ್ ಓನ್ಲಿ ಹ್ಯಾಟ್ರಿಕ್ ಹಿಟ್ ಸರದಾರ ಕೂಡ ಎಂಟ್ರಿ ಕೊಟ್ಟಿದ್ದಾರೆ. ಸಹೋದರನ ಮಗನ ಜೊತೆ ರೀಲ್ ಮಾಡಿದ್ದಾರೆ. ಒಬ್ಬನೇ ಶಿವ, ಒಬ್ಬನೇ ಯುವ ಎಂದು ಮಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ. ಒಟ್ನಲ್ಲಿ ಈ ವಿಡಿಯೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.