ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅಭಿನಯದ `ಮಾಸ್ ಲೀಡರ್’ ಸಿನಿಮಾ ಶುಕ್ರವಾರದಿಂದ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇಂದು ಶಿವಣ್ಣ ಕುಟುಂಬ ಸಮೇತರಾಗಿ ಆಗಮಿಸಿ ನಗರದ ಸಂತೋಷ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಣೆ ಮಾಡಿದರು.
ಈಗಾಗಲೇ ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿರುವ ಮಾಸ್ ಲೀಡರ್ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸಿನಿಮಾ ವೀಕ್ಷಣೆ ವೇಳೆ ತಮ್ಮ ನೆಚ್ಚಿನ ನಾಯಕ ನಟನನ್ನು ನೋಡಲು ಅಭಿಮಾನಿಗಳು ನೋಡಲು ಮುಗಿಬಿದ್ದರು. ಈ ವೇಳೆ ಶಿವಣ್ಣ ಜೊತೆ ಧರ್ಮಪತ್ನಿ ಗೀತಾ ಶಿವರಾಜ್ ಕುಮಾರ್, ಎರಡನೇ ಪುತ್ರಿ ನಿವೇದಿತಾ, ನಟಿ ಪ್ರಣೀತಾ, ನಿರ್ಮಾಪಕ ತರೂಣ್ ಶಿವಪ್ಪ ಹಾಗೂ ನಿರ್ದೇಶಕ ನರಸಿಂಹ ಹಾಜರಿದ್ದರು.
ಉಪೇಂದ್ರ ಅವರಿಗೆ ಒಳ್ಳೆಯ ಆಲೋಚನೆ ಬಂದಿದೆ. ಉಪೇಂದ್ರ ಮಾತಲ್ಲೇ ಅವರು ತುಂಬಾ ಕ್ಲೆವರ್ ಅಂತಾ ತಿಳಿಯುತ್ತದೆ. ಉಪೇಂದ್ರರ ಆಲೋಚನೆಗಳು ಜನರಿಗೆ ತಲುಪಬೇಕು. ರಾಜಕೀಯ ಬರುವ ನಿರ್ಧಾರ ಒಳ್ಳೆಯದು. ಅವರಿಗೆ ಒಳ್ಳೆಯದಾಗಲಿ ಎಂದು ಶಿವಣ್ಣ ಶುಭ ಹಾರೈಸಿದರು.