ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ಅವರು ಸದ್ಯ ಕನ್ನಡದ ಬ್ಯುಸಿ ನಟ. ಕನ್ನಡ ಚಿತ್ರಗಳ ಜೊತೆ ಪರಭಾಷಾ ಸಿನಿಮಾಗಳಲ್ಲೂ ಶಿವಣ್ಣ ನಟಿಸುತ್ತಿದ್ದಾರೆ. ರಜನಿಕಾಂತ್, ಧನುಷ್ ನಂತರ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಜೊತೆ ಮಾಲಿವುಡ್‌ನಲ್ಲಿ ನಟಿಸಲು ಶಿವಣ್ಣಗೆ ಆಫರ್ ಸಿಕ್ಕಿದೆ. ಜೊತೆಗೆ ಯಾವೆಲ್ಲಾ ಸಿನಿಮಾಗಳು ಶಿವಣ್ಣ ಕೈಯಲ್ಲಿದೆ ಎಂಬ ಡಿಟೈಲ್ಸ್ ಇಲ್ಲಿದೆ.
ಶಿವರಾಜ್‌ಕುಮಾರ್ ಅವರು ಸಿನಿಮಾರಂಗಕ್ಕೆ ಬಂದು 37 ವರ್ಷಗಳಾಗಿದೆ. ಕಲಾವಿದರಿಗೆ ಭಾಷೆಯ ಬೇಲಿಯಿಲ್ಲ ಎಂಬುದನ್ನ ಶಿವಣ್ಣ ತೋರಿಸಿ ಕೊಟ್ಟಿದ್ದಾರೆ. ಹಾಗಾಗಿ ತೆಲುಗು, ತಮಿಳು ಸಿನಿಮಾ ಅಂತಾ ಶಿವಣ್ಣ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡ್ತಿದ್ದಾರೆ. ಯಂಗ್ ಹೀರೋಗಳಿಗೆ ಸೆಡ್ಡು ಹೊಡೆದಂತೆ ಆಕ್ಟೀವ್ ಆಗಿ ಆಕ್ಟ್ ಮಾಡ್ತಿದ್ದಾರೆ. ಇದನ್ನೂ ಓದಿ:Captain Miller Trailer: ಮಾಸ್ ಆಗಿ ಎಂಟ್ರಿ ಕೊಟ್ರು ಧನುಷ್-ಶಿವಣ್ಣ
ಶಿವಣ್ಣ ಅವರಿಗೆ ಸ್ಯಾಂಡಲ್‌ವುಡ್ ಸಾಲು ಸಾಲು ಸಿನಿಮಾಗಳ ಆಫರ್ ಅವರ ಕೈಯಲ್ಲಿದೆ. ಹೀಗಿರುವಾಗ ಈಗ ಅವರಿಗೆ ಪರಭಾಷೆಯಿಂದಲೂ ಆಫರ್ಸ್ ಅರಸಿ ಬರುತ್ತಿದೆ. ಹಾಗಂತ ಎಲ್ಲಾ ಚಿತ್ರಗಳನ್ನ ಒಪ್ಪಿಕೊಳ್ಳದೇ, ಅಳಿದು ತೂಗಿ ಕಥೆ ಕೇಳಿ ಓಕೆ ಮಾಡ್ತಿದ್ದಾರೆ. ರಜನಿಕಾಂತ್ (Rajanikanth) ಜೊತೆ ಸ್ಪೆಷಲ್ ರೋಲ್‌ನಲ್ಲಿ ಜೈಲರ್‌ನಲ್ಲಿ (Jailer) ನಟಿಸಿದ್ದಾರೆ. ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲಿ ಧನುಷ್ (Dhanush) ಅಣ್ಣನಾಗಿ ಕಾಣಿಸಿಕೊಂಡಿದ್ದಾರೆ. ಈ ಬೆನ್ನಲ್ಲೇ ಅವರಿಗೆ ಮಾಲಿವುಡ್ ನಟ ಪೃಥ್ವಿರಾಜ್ ಸುಕುಮಾರನ್ ಜೊತೆ ನಟಿಸಲು ಅವಕಾಶ ಸಿಕ್ಕಿದೆ. ಸದ್ಯಕ್ಕಿನ್ನೂ ಮಾತುಕತೆ ಹಂತದಲ್ಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ವರುಣ್ ತೇಜ್ ಚಿತ್ರಕ್ಕೆ ‘ಮಟ್ಕಾ’ ಟೈಟಲ್: ಐಟಂ ಹಾಡಿಗೆ ಕುಣಿವ ನೋರಾ ಫತೇಹಿ
‘ಜೈಲರ್’ ಚಿತ್ರಕ್ಕೆ ಆಯ್ಕೆಯಾದ ಬಗ್ಗೆ ಶಿವಣ್ಣ ಮಾತನಾಡಿದ್ದಾರೆ. ಸಿನಿಮಾ ಒಪ್ಪಿಕೊಳ್ಳಲು ರಜನಿ ಸರ್-ನೆಲ್ಸನ್ ಇಬ್ಬರೂ ಕಾರಣ. ಭೈರಾಗಿ ಶೂಟಿಂಗ್ ಸಮಯದಲ್ಲಿ ನೆಲ್ಸನ್ ಬಂದಿದ್ದರು. ನನ್ನ ನೋಡಿ ಖುಷಿಪಟ್ಟಿದ್ದರು. ನಿಮ್ಮ ಜೊತೆ ಕೆಲಸ ಮಾಡಬೇಕು ಅಂತ ಆಗಲೇ ಹೇಳಿದ್ದರು. ನೀವು ಜೈಲರ್ ಸಿನಿಮಾದಲ್ಲಿ ನಟಿಸಲೇಬೇಕು ಅಂದಿದ್ದರು. ರಜನಿಕಾಂತ್ ಅವರಿಗೆ ಬಳಿ ಹೇಳಿದಾಗ ಅವರೂ ಖುಷಿಪಟ್ಟರಂತೆ. ರಜನಿಕಾಂತ್ ಅವರ ಜೊತೆ ತೆರೆಹಂಚಿಕೊಂಡಿರುವ ಬಗ್ಗೆ ಖುಷಿಯಿದೆ ಎಂದು ಮಾತನಾಡಿದ್ದಾರೆ. ಜೈಲರ್‌ನಲ್ಲಿ ನಾನೇ ತಮಿಳಿನಲ್ಲಿ ಡಬ್ ಮಾಡಿದ್ದೇನೆ. ರಜನಿಕಾಂತ್ ಅವರಿಗೆ ನಮ್ಮ ಕುಟುಂಬದ ಜೊತೆ ಉತ್ತಮ ಸಂಬಂಧವಿದೆ. ಚಿಕ್ಕ ಪಾತ್ರವಾದರೂ 10 ನಿಮಿಷ ಬರುತ್ತೇನೆ. ಆದರೆ, ತುಂಬ ಚೆನ್ನಾಗಿ ತೋರಿಸಿದ್ದಾರೆ. ಮಂಗಳೂರು ಮತ್ತು ಚೆನ್ನೈ ಚಿತ್ರೀಕರಣ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಘೋಸ್ಟ್, ಭೈರತಿ ರಣ್‌ಗಲ್, ಕರಟಕ ದಮನಕ, 45, ಜೈಲರ್, ಕ್ಯಾಪ್ಟನ್ ಮಿಲ್ಲರ್, ಇನ್ಸ್‌ಪೆಕ್ಟರ್ ವಿಕ್ರಮ್ ರಿಟರ್ನ್ಸ್, ಕೆ.ಪಿ ಶ್ರೀಕಾಂತ್ ಹೊಸ ಸಿನಿಮಾ, ತೆಲುಗಿನ ಎರಡು ಪ್ರಾಜೆಕ್ಟ್‌ಗಳು ಸದ್ಯ ಶಿವಣ್ಣ ಕೈಯಲ್ಲಿದೆ.