‌Exclusive:ಮತ್ತೊಂದು ಮಲ್ಟಿಸ್ಟಾರ್‌ ಸಿನಿಮಾದಲ್ಲಿ ಹ್ಯಾಟ್ರಿಕ್‌ ಹೀರೋ

Public TV
1 Min Read
SHIVARAJKUMAR

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ಗೆ (Shivarajkumar) ದಿನದಿಂದ ದಿನಕ್ಕೆ ಅವರ ಡಿಮ್ಯಾಂಡ್ ಹೆಚ್ಚಾಗುತ್ತಲೇ ಇದೆ. `ಕಬ್ಜ’ (Kabzaa) ಮಲ್ಟಿಸ್ಟಾರ್ ಸಿನಿಮಾ (Multistar Film) ರಿಲೀಸ್‌ಗೆ ಇರುವ ಬೆನ್ನಲ್ಲೇ ಮತ್ತೊಂದು ಹೊಸ ಮಲ್ಟಿಸ್ಟಾರ್ ಮೂವಿಗೆ ಶಿವಣ್ಣ ಗ್ರೀನ್ ಸಿಗ್ನಲ್ ನೀಡಿದ್ದಾರೆ. ʻಕಬ್ಜʼಗಾಗಿ ಕಾಯುತ್ತಿದ್ದ ಫ್ಯಾನ್ಸ್‌ಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ. ಇದನ್ನೂ ಓದಿ: ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಕಂಗೊಳಿಸಿದ ದೀಪಿಕಾ ಪಡುಕೋಣೆ

Kabzaa 1 1

ವಯಸ್ಸು 60 ಆದರೂ ಶಿವಣ್ಣ ಅವರ ಎನರ್ಜಿಯನ್ನ ಮೀರಿಸುವವರು ಯಾರಿಲ್ಲ. ಸದಾ ಸಿನಿಮಾಗಳ ಮೂಲಕ ಸೌಂಡ್ ಮಾಡುವ ಶಿವಣ್ಣ, ಇತ್ತೀಚಿಗೆ ಉಪ್ಪಿ- ಕಿಚ್ಚ ಸುದೀಪ್ (Kiccha Sudeep) ಜೊತೆ `ಕಬ್ಜ’ (Kabzaa) ಎಂಬ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ತೆರೆಗೆ ಬರುವ ಮುನ್ನವೇ ಹೊಸ ಸಿನಿಮಾ ಮೂಲಕ ಶಿವಣ್ಣ ಸೌಂಡ್ ಮಾಡ್ತಿದ್ದಾರೆ.

ganesh

ನಟ ಶಿವಣ್ಣ ಇದೀಗ ಕನ್ನಡದಲ್ಲಿ ಮಾತ್ರವಲ್ಲ ಪರಭಾಷೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸೌತ್ ಸಿನಿಮಾಗಳಲ್ಲಿಯೂ ಕೂಡ ಬ್ಯುಸಿಯಿರುವ ಶಿವಣ್ಣ, ಈಗ ಗೋಲ್ಡನ್ ಸ್ಟಾರ್ ಜೊತೆ ಕೈಜೋಡಿಸಿದ್ದಾರೆ. ಹೌದು.. ನಟ ಗಣೇಶ್ – ಶಿವಣ್ಣ ಕಾಂಬಿನೇಷನ್‌ನಲ್ಲಿ ಮತ್ತೊಂದು ಮಲ್ಟಿಸ್ಟಾರ್ ಸಿನಿಮಾ ತಯಾರಾಗುತ್ತಿದೆ.

k s ravikumar

ತಮಿಳಿನ (Tamil) ನಿರ್ದೇಶಕ ಕೆ.ಎಸ್ ರವಿಕುಮಾರ್ (K.s Ravikumar) ಅವರು ಗಣಿ- ಶಿವಣ್ಣ ಅವರಿಗೆ ನಿರ್ದೇಶನ ಮಾಡ್ತಿದ್ದಾರೆ. ವಿಭಿನ್ನ ಕಥೆಯಲ್ಲಿ ಈ ಇಬ್ಬರು ಸ್ಟಾರ್ಸ್ ತೆರೆಹಂಚಿಕೊಳ್ತಿದ್ದಾರೆ. ಸೂರಪ್ಪ ಬಾಬು ಈ ಚಿತ್ರವನ್ನ ನಿರ್ಮಾಣ ಮಾಡ್ತಿದ್ದಾರೆ. ಇದು ದೊಡ್ಡ ಬಜೆಟ್‌ನಲ್ಲಿ ಚಿತ್ರ ನಿರ್ಮಾಣವಾಗ್ತಿದೆ. ಜುಲೈನಲ್ಲಿ ಸಿನಿಮಾ ಸೆಟ್ಟೇರಲಿದೆ ಎಂದು ಹೇಳಲಾಗುತ್ತಿದೆ.

ಶೃತಿ ರಿಪ್ಪನ್‌ಪೇಟೆ, ಪಬ್ಲಿಕ್‌ ಟಿವಿ ಡಿಜಿಟಲ್‌

Share This Article
Leave a Comment

Leave a Reply

Your email address will not be published. Required fields are marked *