Connect with us

ರಾಜಕುಮಾರ ಸಿನಿಮಾ ನೋಡಿ ಕಣ್ಣೀರಿಟ್ಟ ಶಿವರಾಜ್‍ಕುಮಾರ್!

ರಾಜಕುಮಾರ ಸಿನಿಮಾ ನೋಡಿ ಕಣ್ಣೀರಿಟ್ಟ ಶಿವರಾಜ್‍ಕುಮಾರ್!

ಬೆಂಗಳೂರು: ಕಳೆದ ವಾರವಷ್ಟೆ ಬಿಡುಗಡೆಯಾಗಿ ಕನ್ನಡ ಚಿತ್ರರಂಗದಲ್ಲೇ ಧೂಳೆಬ್ಬಿಸಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ `ರಾಜಕುಮಾರ’ ಚಿತ್ರವನ್ನು ವೀಕ್ಷಿಸಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಣ್ಣೀರು ಹಾಕಿದ್ದಾರೆ.

ಇಂದು ಶಿವರಾಜ್ ಕುಮಾರ್ ತಮ್ಮ ಕುಟುಂಬದವರೊಂದಿಗೆ `ರಾಜಕುಮಾರ’ ಚಿತ್ರ ವೀಕ್ಷಿಸಿದ್ರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಣ್ಣ, ಒಂದು ಸಿಂಪಲ್ ಸಿನೆಮಾ. ಇದನ್ನ ಅಪ್ಪಾಜಿ ಸಿನೆಮಾ ಅಂತಾನೂ ಹೇಳಕ್ಕಾಗಲ್ಲ. ಅಪ್ಪು ಸಿನೆಮಾ ಅಂತಾನೂ ಹೇಳಕ್ಕಾಗಲ್ಲ. ರಾಜ್‍ಕುಮಾರ್ ಅಂದ್ರೆ ಅಪ್ಪಾಜಿ ಒಬ್ರೆ ಅಲ್ಲ. ಪ್ರತಿಯೊಬ್ಬರ ಮನದಲ್ಲಿ ಕಿಂಗ್ ಪವರ್ ಇರುತ್ತೆ. ಮನಸ್ಸಲ್ಲಿ ಎಷ್ಟರ ಮಟ್ಟಿಗೆ ಪ್ರೀತಿ ಇರತ್ತೋ ಅದೇ ಒಬ್ಬನಲ್ಲಿರೋ ಕಿಂಗ್ ಪವರ್. ಪ್ರಜೆ ಯಾಕೆ ಒಬ್ಬನನ್ನು ಮಹರಾಜ ಮಾಡ್ತಾನೆ ಅಂದ್ರೆ ಎಲ್ಲರನ್ನ ಪ್ರೀತಿಸೋದಕ್ಕೆ. ಅಂತೆಯೇ ಪ್ರತಿಯೊಬ್ಬರ ಮನದಲ್ಲೂ ಒಬ್ಬ ರಾಜಕುಮಾರ್ ಇರ್ತಾನೆ. ಅಪ್ಪು ನನಗೆ ಸ್ಫೂರ್ತಿ. ಅಂತಹ ತಮ್ಮನನ್ನು ಪಡೆದಿರೋದು ಹೆಮ್ಮೆ ಅನ್ನಿಸುತ್ತೆ. ಇವತ್ತು ನಮ್ಮ ಅಪ್ಪಾಜಿ ತುಂಬಾ ನೆನಪಾಗ್ತಾರೆ. ಸಿನಿಮಾ ನೊಡಿದಾಗ ಅವರನ್ನ ತುಂಬಾ ಮಿಸ್ ಮಾಡ್ಕೋತೀವಿ ಅಂತ ಭಾವುಕರಾದ್ರು.

ಅಪ್ಪಾಜಿ ಇಲ್ಲದೆ ಇರೋದು ಎಷ್ಟು ನೋವು ಅನ್ನೋದು ಇವತ್ತು ಗೊತ್ತಾಗುತ್ತೆ ಅಂತಾ ಮರು ಮಾತಾಡದೇ ಇಟ್ಸ್ ಗ್ರೇಟ್ ಸಿನಿಮಾ ಅಂತ ಶಿವಣ್ಣ ಕಣ್ಣೀರು ಹಾಕಿದ್ರು.

Advertisement
Advertisement