ಬೆಂಗಳೂರು: ನಾಡಿನಾದ್ಯಂತ ದಸರಾ ಹಬ್ಬದ ಸಂಭ್ರಮ ಜೋರಾಗಿದೆ. ಸ್ಯಾಂಡಲ್‍ವುಡ್‍ನ ಸೆಂಚುರಿ ಸ್ಟಾರ್ ಶಿವರಾಜ್‍ಕುಮಾರ್ ಕೂಡ ನವರಾತ್ರಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದ್ದಾರೆ.
ಸರಳತೆಯ, ಸಜ್ಜನಿಕೆಯ ಪ್ರತಿಕವಾಗಿರುವ ಶಿವರಾಜ್‍ಕುಮಾರ್ ನವರಾತ್ರಿಯನ್ನು ಬಾಲಿವುಡ್ ಬಿಗ್-ಬಿ ಅಮಿತಾಬ್ ಬಚ್ಚನ್ ಅವರ ಜೊತೆ ಅದ್ಧೂರಿಯಾಗಿ ಆಚರಿಸಿದ್ದಾರೆ. ಅದ್ಧೂರಿಯಾಗಿ ನಡೆದ ನವರಾತ್ರಿಯ ಉತ್ಸವಕ್ಕೆ ಅಮಿತಾಬ್ ದೀಪ ಬೆಳಗಿಸಿ ಬೊಂಬೆಯ ಹಬ್ಬಕ್ಕೆ ಮೆರುಗನ್ನು ನೀಡಿದ್ದಾರೆ.
ಹಿರಿಯ ನಟ ಪ್ರಭು ಗಣೇಶನ್, ನಟ ವಿಜಯ್ ಸೇತುಪತಿ ಸೇರಿದಂತೆ ಸಾಕಷ್ಟು ಹಿರಿಯ ಕಲಾವಿದರು, ನಿರ್ಮಾಪಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸ್ಯಾಂಡಲ್‍ವುಡ್ ನಿಂದ ಶಿವರಾಜ್‍ಕುಮಾರ್ ಜೊತೆಗೆ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಕೂಡ ಸಾಥ್ ನೀಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಶಿವರಾಜ್‍ಕುಮಾರ್ ಅವರು ಅಮಿತಾಬ್ ಬಚ್ಚನ್ ಹಾಗೂ ಬೇರೆ ಕಲಾವಿದರ ಜೊತೆಯಿರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಅದಕ್ಕೆ, “ನವರಾತ್ರಿ ಹಬ್ಬದ ಶುಭಾಶಯಗಳು. ನವರಾತ್ರಿಯ ಸಂಭ್ರಮ ನನ್ನ ಕಲ್ಯಾಣ್ ಕುಟುಂಬದೊಂದಿಗೆ” ಎಂದು ಬರೆದುಕೊಂಡಿದ್ದಾರೆ.
View this post on Instagram
ನವರಾತ್ರಿ ಹಬ್ಬದ ಶುಭಾಶಯಗಳು ! ನವರಾತ್ರಿಯ ಸಂಭ್ರಮ ನನ್ನ ಕಲ್ಯಾಣ್ ಕುಟುಂಬದೊಂದಿಗೆ. Happy navarathri to all.