ಸ್ಯಾಂಡಲ್‌ವುಡ್ ನಟ ಶಿವರಾಜ್‌ಕುಮಾರ್ (Shivarajkumar) ದಂಪತಿ ಮತದಾನ ಮಾಡಿದ್ದಾರೆ. ಒಂದೊಂದು ವೋಟ್ ಕೂಡ ಒಬ್ಬರ ಭವಿಷ್ಯ ಬರೆಯುವ ಶಕ್ತಿ ಇದೆ. ಸಮಯ ವ್ಯರ್ಥ ಮಾಡದೇ ಯಂಗ್‌ಸ್ಟರ್ಸ್ ಬಂದು ಸೂಕ್ತ ವ್ಯಕ್ತಿಗೆ ಮತದಾನ ಮಾಡಬೇಕು ಎಂದು ಶಿವಣ್ಣ ಮನವಿ ಮಾಡಿದ್ದಾರೆ. ಇದನ್ನೂ ಓದಿ:ರಣ್‌ಬೀರ್‌ಗೆ ವಿಲನ್ ಆದ್ಮೇಲೆ ಬಾಬಿ ಡಿಯೋಲ್ ಬಂಪರ್ ಆಫರ್ಸ್
ಮಾನ್ಯತಾ ಟೆಕ್ ಪಾರ್ಕ್ ಬಳಿ ರಾಚೇನಹಳ್ಳಿಯಲ್ಲಿ ಶಿವಣ್ಣ ಮತದಾನ ಮಾಡಿದ ಬಳಿಕ ಮಾಧ್ಯಮಕ್ಕೆ ಮಾತನಾಡಿ, ವೋಟಿಂಗ್ ಚಾನ್ಸ್ ಸಿಗುವುದು ಖುಷಿ. ಎಲ್ಲರೂ ತಪ್ಪದೇ ಮತದಾನ ಮಾಡಬೇಕು ಎಂದಿದ್ದಾರೆ. ನಾವು ಮನವಿ ಮಾಡಬಹುದು ಆದರೆ ಏಬ್ಬಿಸಿ ತಂದು ಯಾರನ್ನು ಮತದಾನ ಮಾಡಿಸೋಕೆ ಆಗಲ್ಲ ಎಂದು ಶಿವಣ್ಣ ಮಾತನಾಡಿದ್ದಾರೆ.
ಮತದಾನ (Vote) ಮಾಡುವುದು ನಮ್ಮ ಕರ್ತವ್ಯ. ಒಂದೊಂದು ವೋಟ್‌ನಿಂದ ಭವಿಷ್ಯ ಬರೆಯುವ ಶಕ್ತಿಯಿದೆ. ಯಂಗ್‌ಸ್ಟರ್ ಹೊರಬಂದು ಮತದಾನ ಮಾಡಿ ಎಂದಿದ್ದಾರೆ. ನಾನು ಕೂಡ ಸುಮಾರು ಕಡೆ ಪ್ರಚಾರ ಮಾಡಿದ್ದೀನಿ. ತುಂಬಾ ಜನ ಕಣ್ಣೀರು ಹಾಕ್ತಾರೆ. ಅದನ್ನು ನೋಡಿದಾಗ ಬೇಜಾರು ಆಗುತ್ತದೆ ಎಂದು ಶಿವಣ್ಣ ಮಾತನಾಡಿದ್ದಾರೆ.