ಸಂಪೂರ್ಣವಾಗಿ ನೋವು ಹೇಳಿಕೊಳ್ಳೋ ಸ್ಥಿತಿಯಲ್ಲಿಲ್ಲ, ಅದರೊಂದಿಗೆ ಬದುಕ್ತಿದ್ದೇವೆ: ಅಪ್ಪು ನೆನೆದ ಶಿವಣ್ಣ

Public TV
1 Min Read
MYS SHIVARAJKUMAR

ಮೈಸೂರು: ಸ್ಯಾಂಡಲ್‍ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ ಮೂರು ತಿಂಗಳುಗಳೇ ಕಳೆದುಹೋಗಿದೆ. ಆದರೆ ಇಂದು ಕೂಡ ಕುಟುಂಬಸ್ಥರು ಹಾಗೂ ಅಭಿಮಾನಿಗಳಲ್ಲಿ ಅಪ್ಪು ಅಜರಾಮರ. ಸಹೋದರರಾದ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಕೂಡ ಆಗಾಗ ಪುನೀತ್ ನೆನಪಿಸಿಕೊಂಡು ಗದ್ಗದಿತರಾಗುತ್ತಿದ್ದಾರೆ. ಅಂತೆಯೇ ಇದೀಗ ಶಿವಣ್ಣ ಅವರು ತಮ್ಮನನ್ನು ನೆನಪಿಸಿಕೊಂಡು ದುಃಖಿತರಾಗಿದ್ದಾರೆ. ಇದನ್ನೂ ಓದಿ:

PUNEETH RAJ KUMAR 4

ಕಾರ್ಯಕ್ರಮದ ನಿಮಿತ್ತ ಅರಮನೆ ನಗರಿಗೆ ಆಗಮಿಸಿದ ಶಿವಣ್ಣ ಮಾಧ್ಯಮಗಳ ಜೊತೆ ಮಾತನಾಡುತ್ತಾ ಅಪ್ಪು ಕಳೆದುಕೊಂಡು ತಾವು ಅನುಭವಿಸುತ್ತಿರುವ ಕಷ್ಟವನ್ನು ಹೇಳಿದ್ದಾರೆ. ಅಪ್ಪು ನಿಧನ ನೆನಪಿಸಿಕೊಂಡಾಗೆಲ್ಲ ನಮ್ಮ ಧ್ವನಿಯೇ ಬದಲಾಗುತ್ತದೆ. ಆ ನೋವನ್ನ ಸಂಪೂರ್ಣವಾಗಿ ಹೇಳಿಕೊಳ್ಳುವ ಸ್ಥಿತಿಯಲ್ಲೂ ಇಲ್ಲ. ಬದಲಾಗಿ ನಾವು ಆ ನೋವಿನ ಜೊತೆಗೆ ಬದುಕುತ್ತಿದ್ದೇವೆ. ಮುಂದೆಯೂ ನೋವಿನ ಜೊತೆಗೆ ಬದುಕುತ್ತೇವೆ ಎಮದು ಕಣ್ಣೀರಾದರು. ಇದನ್ನೂ ಓದಿ: ಬಾಲಿವುಡ್‍ನಲ್ಲಿ ದಕ್ಷಿಣ ಭಾರತೀಯರು ಹಿಂದಿಯನ್ನು ಅಸಾಧಾರಣವಾಗಿ ಮಾತಾಡ್ತಿದ್ದಾರೆ: ಪ್ರಿಯಾಮಣಿ

MYS SHIVARAJKUMAR 1

ಅಪ್ಪುದು ಅದ್ಭುತವಾದ ಆತ್ಮ. ಹೀಗಾಗಿಯೇ ಅಪ್ಪುವನ್ನ ಜನ ಈಗಲೂ ನೆನಪಿಸಿಕೊಂಡು ಇಷ್ಟಪಡುತ್ತಾರೆ. ಅಪ್ಪು ಗಳಿಸಿರುವ ಈ ಪ್ರೀತಿ ಕಂಡು ನನಗೆ ಹೆಮ್ಮೆ ಆಗುತ್ತಿದೆ. ಶಕ್ತಿಧಾಮಕ್ಕೆ ಇತ್ತಿಚಿಗೆ ನಾನು ಹೆಚ್ಚಾಗಿ ಬರುತ್ತಿದ್ದೇನೆ. ನಮ್ಮ ಮನಸ್ಸುಗಳಿಗೂ ಒಂದು ಬದಲಾವಣೆ ಆಗುತ್ತದೆ. ಮಕ್ಕಳಿಗೂ ಹೊಸ ಅನುಭವ ಆಗುತ್ತದೆ ಎಂದರು.

PUNEETH RAJ KUMAR 1 1

ಗೀತಾ ಶಿವರಾಜಕುಮಾರ್ ಈಗ ಅದರ ಸಂಪೂರ್ಣ ಜವಬ್ದಾರಿ ಹೊತ್ತಿದ್ದಾರೆ. ಅದರ ದೊಡ್ಡ ಜವಬ್ದಾರಿ ನಮ್ಮ ಮೇಲಿದೆ. ಮೊನ್ನೆ ಶಕ್ತಿಧಾಮದ ಮಕ್ಕಳು ಇಷ್ಟಪಟ್ಟರು ಎಂದು ನಾನೇ ಡ್ರೈವ್ ಮಾಡಿಕೊಂಡು ಶೂಟಿಂಗ್ ಸ್ಪಾಟ್‍ಗೆ ಕರೆದುಕೊಂಡು ಹೋಗಿದ್ದೆ. ಅಲ್ಲಿ ಸ್ಕೂಲ್ ತೆರೆಯೋದಕ್ಕೆ ನಮಗೆ ಅನುಮತಿ ಸಿಗುತ್ತಿದೆ. ಆ ಕೆಲಸವು ಬೇಗ ಆಗುತ್ತದೆ ಎಂದು ನಟ ಭರವಸೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *