ಇನ್‌ಸ್ಟಾಗ್ರಾಂಗೆ ಎಂಟ್ರಿ ಕೊಟ್ಟ ಶಿವಣ್ಣ

Public TV
1 Min Read
shivanna

ಬೆಂಗಳೂರು: ಇತ್ತೀಚಿಗಷ್ಟೆ ನಟ ಶಿವರಾಜ್ ಕುಮಾರ್ ಅಭಿಮಾನಿಗಳ ಬೇಡಿಕೆಯ ಮೇರೆಗೆ ಟ್ವಿಟ್ಟರ್ ಮತ್ತು ಫೇಸ್‍ಬುಕ್ ಗೆ ಪಾದಾರ್ಪಣೆ ಮಾಡಿದ್ದರು. ಇದೀಗ ಇನ್‌ಸ್ಟಾಗ್ರಾಂಗೂ ಎಂಟ್ರಿ ಕೊಟ್ಟಿದ್ದಾರೆ.

ಶಿವಣ್ಣ ಗುರುವಾರ ಇನ್‌ಸ್ಟಾಗ್ರಾಂಗೆ ಎಂಟ್ರಿ ಕೊಟ್ಟಿದ್ದಾರೆ. ಇನ್‌ಸ್ಟಾಗ್ರಾಂಗೆ ಎಂಟ್ರಿ ಕೊಟ್ಟ ವಿಚಾರವನ್ನು ಶಿವಣ್ಣ ಫೇಸ್‍ಬುಕ್‍ನಲ್ಲಿ ತಿಳಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಹೆಸರನ್ನು ಕೂಡ ತಿಳಿಸಿದ್ದಾರೆ. ಶಿವಣ್ಣ ಅವರ ಇನ್‌ಸ್ಟಾಗ್ರಾಂ ಹೆಸರು ನಿಮ್ಮಶಿವರಾಜ್ ಕುಮಾರ್ ಎಂದು ಇಂಗ್ಲೀಷ್‍ನಲ್ಲಿದೆ.

66618817 891877144502395 5523485293077856256 n

ಮೊದಲಿಗೆ ಶಿವಣ್ಣ ಲಂಡನ್‍ನಲ್ಲಿರುವ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಶಿವಣ್ಣ ತಮಗೆ ಚಿಕಿತ್ಸೆ ನೀಡಿದ ವೈದ್ಯರ ಫೋಟೋ ಮತ್ತು ಪತ್ನಿಯೊಂದಿಗಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

ಶಿವಣ್ಣ ಅವರು ವೈದ್ಯರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಅದನ್ನು ಟ್ವಿಟ್ಟರಿನಲ್ಲಿ ಹಾಕಿದ್ದು, ಡಾ. ಆಂಡ್ರ್ಯೂ ವ್ಯಾಲೇಕಾ ಅವರು ಲಂಡನ್‍ನಲ್ಲಿ ನನಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು. ಇವರು ಯಾವಾಗಲೂ ಪಾಸಿಟಿವ್ ಹಾಗೂ ನಗುತ್ತಿರುತ್ತಾರೆ. ಇನ್ಮುಂದೆ ನಾನು ಹೆಚ್ಚು ಶಕ್ತಿಯುತವಾಗಿ ಹಾಗೂ ಆರಾಮವಾಗಿ ಓಡಾಡಬಹುದು ಹಾಗೂ ಡ್ಯಾನ್ಸ್ ಮಾಡಬಹುದು ಎಂದು ವೈದ್ಯರು ಹೇಳಿದ್ದಾರೆ. ಬೆಂಗಳೂರಿಗೆ ಹಿಂದಿರುಗಿ ಶೂಟಿಂಗ್ ಪ್ರಾರಂಭಿಸಲು ಕಾಯಲು ಆಗುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

https://www.instagram.com/p/B0DDmgCnew4/

ಶಿವಣ್ಣ ಅವರು ಕಳೆದ ಆರು ತಿಂಗಳಿನಿಂದ ಭುಜದ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಕೆಲ ದಿನಗಳ ಹಿಂದೆಯಷ್ಟೇ ಶಸ್ತ್ರ ಚಿಕಿತ್ಸೆಗಾಗಿ ಲಂಡನ್‍ಗೆ ತೆರಳಿದ್ದರು. ಕಳೆದ ಗುರುವಾರ ಅವರ ಶಸ್ತ್ರಚಿಕಿತ್ಸೆ ಯಶ್ವಸಿಯಾಗಿ ನಡೆದಿತ್ತು. ಇದೇ ತಿಂಗಳು 23ರಂದು ಶಿವಣ್ಣ ಬೆಂಗಳೂರಿಗೆ ವಾಪಾಸ್ ಆಗುವ ಸಾಧ್ಯತೆ ಇದೆ.

https://www.instagram.com/p/B0DvfU_ntLZ/

Share This Article
Leave a Comment

Leave a Reply

Your email address will not be published. Required fields are marked *