ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ಅವರಿಗೆ ತಮಿಳು ಚಿತ್ರರಂಗದಲ್ಲೂ ಭಾರಿ ಬೇಡಿಕೆ ಶುರುವಾಗಿದೆ. ‘ಜೈಲರ್’ (Jailer) ಸಿನಿಮಾದಲ್ಲಿನ ಶಿವಣ್ಣನ ಝಲಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದೀಗ ತಮಿಳು ಸಂದರ್ಶನವೊಂದರಲ್ಲಿ ಕಾಲಿವುಡ್ ಈ ಹೀರೋ ನನಗೆ ನಟಿಸುವ ಆಸೆ ಎಂದು ಖುಷಿಯಿಂದ ಶಿವಣ್ಣ ಮಾತನಾಡಿದ್ದಾರೆ.
‘ಜೈಲರ್’ ಸಿನಿಮಾದಲ್ಲಿ ಶಿವಣ್ಣ ಮಾಸ್ ಎಂಟ್ರಿ ಕನ್ನಡಿಗರಿಗೆ ಮಾತ್ರವಲ್ಲ, ತಮಿಳು ಸಿನಿಪ್ರೇಮಿಗಳಿಗೆ ಇಷ್ಟವಾಗಿದೆ. ಶಿವಣ್ಣ ಮೇಲಿನ ಪ್ರೀತಿ ಅಭಿಮಾನ ಈಗ ದುಪ್ಪಟ್ಟಾಗಿದೆ. ಜೈಲರ್ ಸಕ್ಸಸ್ ನಂತರ ಸಾಲು ಸಾಲು ಸಂದರ್ಶನಗಳನ್ನ ಶಿವಣ್ಣ ಕೊಡ್ತಿದ್ದಾರೆ. ತಮಿಳಿನ ಹೀರೋ ಅಜಿತ್ ಕುಮಾರ್ ಅವರನ್ನ ಶಿವಣ್ಣ ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ:ವೀರ ಮದಕರಿಯಲ್ಲಿ ಕಿಚ್ಚನ ಮಗಳಾಗಿ ನಟಿಸಿದ್ದ ಹುಡುಗಿ ಈಗ ಹೀರೋಯಿನ್
ಸ್ಟಾರ್ ನಟ ಅಜಿತ್ ಕುಮಾರ್ (Ajith Kumar) ಜೊತೆ ನಟಿಸಬೇಕು ಎಂದು ಶಿವಣ್ಣ ಆಸೆ ಪಟ್ಟಿದ್ದಾರೆ. ಹೌದು, ಸಂದರ್ಶಕಿ ತಮಿಳು ಚಿತ್ರರಂಗದಲ್ಲಿ ಯಾವುದಾದರೂ ನಟನ ಜತೆ ನಟಿಸಬೇಕು ಎಂಬ ಆಸೆ ಏನಾದರೂ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಣ್ಣ ನನಗೆ ಅಜಿತ್ ಜೊತೆ ನಟಿಸುವಾಸೆ. ಅವರು ತುಂಬಾ ರಗಡ್ ಮತ್ತು ಕ್ಯೂಟ್ ಹ್ಯುಮನ್ ಬಿಯಿಂಗ್, ಅವರು ಬೈಕ್‌ನಲ್ಲಿ ಸಿಂಪಲ್ ಆಗಿ ತೆರಳಿ ಸಾಮಾನ್ಯ ಜನರ ಜೊತೆ ಬೆರೆಯುವುದನ್ನು ನಾನು ನೋಡಿದ್ದೇನೆ. ಅವರ ಈ ಸರಳತೆ ನನ್ನ ಹೃದಯ ಮುಟ್ಟಿದೆ ಎಂದು ಹೇಳಿಕೆ ನೀಡಿದರು. ಈ ಮೂಲಕ ಶಿವಣ್ಣ ಅಜಿತ್ ಚಿತ್ರದಲ್ಲಿ ನಟಿಸುವ ಆಸೆಯನ್ನು ಹೊರಹಾಕಿದರು.
‘ಜೈಲರ್’ ಈಗ ಟ್ರೆಂಡಿಂಗ್‌ನಲ್ಲಿದೆ. ಹೀಗಿರುವಾಗ ಧನುಷ್ ಜೊತೆಗಿನ ಶಿವಣ್ಣ ಸಿನಿಮಾ ಕ್ಯಾಪ್ಟನ್ ಮಿಲ್ಲರ್‌ಗಾಗಿ ಫ್ಯಾನ್ಸ್ ಎದುರು ನೋಡ್ತಿದ್ದಾರೆ. ಚಿತ್ರದ ಟೀಸರ್ ಝಲಕ್‌ಗೆ ಅಭಿಮಾನಿಗಳು ಬೋಲ್ಡ್ ಆಗಿದ್ದಾರೆ.