– ರಾಜ್‌ಕುಮಾರ್ ಸಹೋದರಿ, ಸೋದರತ್ತೆ ಆಶೀರ್ವಾದ ಪಡೆದ ನಟ
ಚಾಮರಾಜನಗರ: ದೀಪಾವಳಿ ಸಡಗರ ಹಿನ್ನೆಲೆ ಅಣ್ಣಾವ್ರ ಜನ್ಮಭೂನಿಯಾದ ತಮಿಳುನಾಡಿನ ತಾಳವಾಡಿ ಸಮೀಪ ಇರುವ ಗಾಜನೂರಿಗೆ ನಟ ಶಿವರಾಜ್ ಕುಮಾರ್ (Shiva Rajkumar) ತಮ್ಮ ಪತ್ನಿ ಗೀತಾ ಅವರೊಟ್ಟಿಗೆ ಭೇಟಿ ಕೊಟ್ಟರು.
ಗಾಜನೂರಿನಲ್ಲಿರುವ ಮನೆಗೆ ಭೇಟಿ ಕೊಟ್ಟ ಶಿವಣ್ಣ ದಂಪತಿ ಡಾ.ರಾಜ್ ಸಹೋದರಿಯಾದ ಸೋದರತ್ತೆ ನಾಗಮ್ಮ ಅವರ ಆಶೀರ್ವಾದ ಪಡೆದರು. ಶಿವಣ್ಣನನ್ನು ಕಂಡ ನಾಗಮ್ಮ ಅಪ್ಪಿ ಆಶೀರ್ವಾದ ಮಾಡಿದರು. ಇದನ್ನೂ ಓದಿ: ‘ಕಾಂತಾರ’ ಚಿತ್ರಕ್ಕೆ ಹಾಲಿವುಡ್ ಸ್ಟಂಟ್ ಮಾಸ್ಟರ್ ಎಂಟ್ರಿ
ಅಣ್ಣಾವ್ರು ಹುಟ್ಟಿದ ಹಳೇ ಮನೆ, ಮಂಟೇಸ್ವಾಮಿ ದೇಗುಲ ಸೇರಿದಂತೆ ಊರನ್ನು ಸುತ್ತಾಡಿದ ಶಿವಣ್ಣ ದಂಪತಿ ಅಭಿಮಾನಿಯೊಬ್ಬರ ಕ್ಷೀರ ಕೇಂದ್ರಕ್ಕೂ ಭೇಟಿ ಕೊಟ್ಟು ಶುಭ ಹಾರೈಸಿದರು.
ನೆಚ್ಚಿನ ನಟನನ್ನು ಕಾಣಲು, ಫೋಟೊ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳ ದಂಡೇ ಸೇರಿತ್ತು. ಶಿವರಾಜ್‌ಕುಮಾರ್ ಜೊತೆ ಫೋಟೋಗಾಗಿ ಫ್ಯಾನ್ಸ್ ಮುಗಿಬಿದ್ದರು. ಇದನ್ನೂ ಓದಿ: ದರ್ಶನ್ ಎಡಗಾಲಿಗೂ ಸಮಸ್ಯೆ – ಫಿಜಿಯೋಥೆರಪಿನಾ? ಆಪರೇಷನ್‌ನಾ?