ಸ್ವಾಮಿ ಕೊರಗಜ್ಜ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶರಣ್ ದಂಪತಿ ಭೇಟಿ

Public TV
1 Min Read
sharan

ಸ್ಯಾಂಡಲ್‌ವುಡ್ ನಟ ಶರಣ್ (Actor Sharan) ಸದ್ಯ ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಿ ಮಂಗಳೂರಿನ ಸ್ವಾಮಿ ಕೊರಗಜ್ಜ ದೈವ ದೇವಸ್ಥಾನ ಮತ್ತು ಕಟೀಲು ದುರ್ಗಾಪರಮೇಶ್ವರಿ ಸನ್ನಿಧಿಗೆ ಭೇಟಿ ನೀಡಿದ್ದಾರೆ. ಪತ್ನಿ ಜೊತೆ ದೇವರ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕಟೀಲು ದುರ್ಗಾಪರಮೇಶ್ವರಿ ಮತ್ತು ಸ್ವಾಮಿ ಕೊರಗಜ್ಜನ ಪವಿತ್ರ ಸನ್ನಿಧಿಯಲ್ಲಿ ಎಂದು ನಟ ಶರಣ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟ ರಾಧಿಕಾ ಪಂಡಿತ್

ಇತ್ತೀಚೆಗೆ ಶರಣ್, ಆಶಿಕಾ ರಂಗನಾಥ್ ನಟನೆಯ ‘ಅವತಾರ ಪುರುಷ 2’ ಸಿನಿಮಾ ರಿಲೀಸ್ ಆಗಿತ್ತು. ಛೂ ಮಂತರ್ ಸೇರಿದಂತೆ ಕೆಲ ಪ್ರಾಜೆಕ್ಟ್‌ಗಳು ಸದ್ಯದಲ್ಲೇ ರಿಲೀಸ್ ಆಗಲಿದೆ.

Share This Article