ಹೊಸ ವರ್ಷ ಶರಣ್ ಪಾಲಿಗೆ ತ್ರಿಶಂಕು ಸ್ವರ್ಗ!

Public TV
1 Min Read
SHARAN

ಬೆಂಗಳೂರು: ಶರಣ್ ಒಂದಾದ ಮೇಲೊಂದರಂತೆ ಸಿನಿಮಾಗಳನ್ನು ಒಪ್ಪಿಕೊಂಡು ಮುಂದುವರೆಯುತ್ತಿದ್ದಾರೆ. ಇದೀಗ ಮೊದಲ ಸಲ ಅವರು ಯುವ ನಿರ್ದೇಶಕ ಸಿಂಪಲ್ ಸುನಿ ನಿರ್ದೇಶನದಲ್ಲೊಂದು ಸಿನಿಮಾದಲ್ಲಿ ನಟಿಸಲು ಮುಂದಾಗಿದ್ದಾರೆ. ಇದು ಮಹಾಭಾರತದಲ್ಲಿ ಬರೋ ತ್ರಿಶಂಕು ಸ್ವರ್ಗ ಅಧ್ಯಾಯದಿಂದ ಸ್ಫೂರ್ತಿ ಪಡೆದಿರೋ ಕಥೆಯಂತೆ!

ಇದು ಸಿಂಪಲ್ ಸುನಿ ಮತ್ತು ಶರಣ್ ಕಾಂಬಿನೇಷನ್ನಿನ ಮೊದಲ ಚಿತ್ರ. ಸಿಂಪಲ್ ಸುನಿ ಇದುವರೆಗೂ ವಿಭಿನ್ನ ಕಥೆಗಳನ್ನು ನವೀನ ರೀತಿಯಲ್ಲಿ ಅನಾವರಣಗೊಳಿಸೋ ಮೂಲಕವೇ ಸದ್ದು ಮಾಡುತ್ತಾ ಬಂದಿರುವವರು. ಶರಣ್ ಕೂಡಾ ವಿಶಿಷ್ಟ ನಟರೇ. ಶರಣ್ ಅವರನ್ನು ಈವರೆಗಿನ ಪಾತ್ರಗಳಿಗಿಂತಲೂ ಬೇರೆ ಥರದಲ್ಲಿ ತೋರಿಸೋ ಇರಾದೆಯಿಂದಲೇ ಸುನಿ ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರಂತೆ.

sharan

ಈ ಚಿತ್ರವನ್ನು ಸುನಿ ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ ಸೇರಿ ನಿರ್ಮಾಣ ಮಾಡಲಿದ್ದಾರೆ. ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸುವ ಯೋಜನೆ ಹಾಕಿಕೊಂಡಿರೋ ಸುನಿ ಜನವರಿಯಲ್ಲಿ ಟೈಟಲ್ ಲಾಂಚ್ ಮಾಡಲಿದ್ದಾರೆ. ಮಹಾಭಾರತದ ತ್ರಿಶಂಕು ಸ್ವರ್ಗದ ಕಥಾ ಎಳೆಯನ್ನು ಇಲ್ಲಿ ಆಧುನಿಕ ಕಥಾಹಂದರದೊಂದಿಗೆ ಬೆರೆಸಿ ತೆರೆದಿಡೋ ಪ್ರಯತ್ನ ನಡೆಯಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *