ಪ್ರೀತಿಯ ಗುರುವನ್ನು ಕಳೆದುಕೊಂಡ ದುಃಖದಲ್ಲಿ ನಟ ಶರಣ್

Public TV
1 Min Read
SHARAN

ಬೆಂಗಳೂರು: ಪ್ರತಿಯೊಬ್ಬರ ಜೀವನದಲ್ಲೂ ನೆನಪಲ್ಲೇ ಉಳಿಯುವಂತಹ ಒಬ್ಬರು ಮಾರ್ಗದರ್ಶಕರಿರುತ್ತಾರೆ. ಅವರ ಮಾರ್ಗದರ್ಶನದಲ್ಲೇ ಸಾಗಿ ಸಾಧನೆ ಮಾಡಿರುತ್ತಾರೆ. ಅಂತಹ ಶಿಕ್ಷಕರೊಬ್ಬರು ನಟ ಶರಣ್ ಅವರಿಗೂ ಇದ್ದು, ಇದೀಗ ಅವರನ್ನು ಕಳೆದುಕೊಂಡ ದುಃಖದಲ್ಲಿ ಶರಣ್ ಇದ್ದಾರೆ.

ಶರಣ್ ಅವರ ಗುರುಗಳಾದ ಬೆಲಹರ್ ಸರ್ ವಿಧಿವಶರಾಗಿದ್ದಾರೆ. ಬೆಲಹರ್ ಅವರು ಶರಣ್ ಅವರ ಶಾಲಾ ಶಿಕ್ಷಕರಾಗಿದ್ದಾರೆ. ಇವರು ಗಣಿತ ಪಾಠವನ್ನು ಮಾಡುತ್ತಿದ್ದರು. ಹೀಗಾಗಿ ಶರಣ್ ತಮ್ಮ ಪ್ರೀತಿಯ ಗುರುಗಳನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ.

ನಟ ಶರಣ್ ಈ ಬಗ್ಗೆ ಅವರೇ ಟ್ವೀಟ್ ಮಾಡುವ ಮೂಲಕ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. “ನನ್ನ ಅಚ್ಚು-ನೆಚ್ಚಿನ ಶಿಕ್ಷಕರಾದ ಬೆಲಹರ್ ಸರ್ ರನ್ನು ನಾನು ಕಳೆದುಕೊಂಡಿದ್ದೇನೆ. ಅವರು ನನಗೆ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಗಣಿತ ಪಾಠ ಮಾಡುತ್ತಿದ್ದರು. ನಿಮ್ಮನ್ನು ನನ್ನ ಬದುಕಿನಲ್ಲಿ ಪಡೆದಿದ್ದು ನನ್ನ ಅದೃಷ್ಟ” ಎಂದು ಅಳು ಎಮೋಜಿಯನ್ನು ಹಾಕಿ ಅವರ ಜೊತೆಗಿನ ಫೋಟೋವನ್ನು ಹಾಕಿದ್ದಾರೆ.

ಸದ್ಯಕ್ಕೆ ನಟ ಶರಣ್ ಅವರ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಆದರೂ ತಮಗೆ ಪ್ರೀತಿಯಿಂದ ಪಾಠ ಹೇಳಿಕೊಟ್ಟ ಗುರುಗಳ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *