ಬಾಲಿವುಡ್ ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದ್ದ ವಿಚಾರ, ಇದೀಗ ದೇಶಭಕ್ತಿಯನ್ನು ಪ್ರಶ್ನಿಸುವಲ್ಲಿಗೆ ಹೋಗಿದೆ. ಹಿಂದೂಗಳ ಭಾವನೆಗೆ ಧಕ್ಕೆ ತರುವುದಕ್ಕಾಗಿಯೇ ಕೇಸರಿ ಬಿಕಿನಿ ಹಾಕಿಸಲಾಗಿದೆ ಎಂದು ನಟ ಶಾರುಖ್ ಖಾನ್ ಮೇಲೆ ಆರೋಪಗಳನ್ನು ಮಾಡಲಾಗುತ್ತಿದೆ. ಈ ಕುರಿತು ಶಾರುಖ್ ಖಾನ್ ಮತ್ತೊಂದು ಟ್ವಿಟ್ ಮಾಡಿದ್ದು, ‘ಪಠಾಣ್ ಸಿನಿಮಾ ಕೂಡ ದೇಶಭಕ್ತಿಯನ್ನು ಸಾರುತ್ತದೆ’ ಎಂದು ಬರೆದುಕೊಂಡಿದ್ದಾರೆ. ಸಿನಿಮಾವನ್ನು ಬಾಯ್ಕಾಟ್ ಮಾಡುವುದರಲ್ಲಿ ಅರ್ಥವೇ ಇಲ್ಲವೆಂದಿದ್ದಾರೆ.
Advertisement
ಪಠಾಣ್ ಸಿನಿಮಾ ಬಾಯ್ಕಾಟ್ ಮಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಶುರುವಾಗಿದೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ತೊಟ್ಟಿದ್ದಾರೆ ಎನ್ನುವುದು ಒಂದು ಕಡೆಯಾದರೆ, ಈ ಬಿಕಿನಿ ತೊಟ್ಟ ಸಂದರ್ಭದಲ್ಲಿ ಬರುವ ಹಾಡೊಂದರ ಸಾಹಿತ್ಯ ‘ನಾಚಿಕೆ ಇಲ್ಲದ ಬಣ್ಣ’ ಎನ್ನುವುದಾಗಿದೆ. ಇದು ಹಿಂದೂಗಳನ್ನು ಹೀಯಾಳಿಸುವ ಉದ್ದೇಶದಿಂದಲೇ ಮಾಡಿದ ಕೃತ್ಯ ಎಂದು ಹೇಳಲಾಗುತ್ತಿದೆ. ಹಾಗಾಗಿ ಪಠಾಣ್ ಸಿನಿಮಾವನ್ನು ಬಾಯ್ಕಾಟ್ ಮಾಡಿ ಎನ್ನುವ ಧ್ವನಿ ಜೋರಾಗಿದೆ. ಇದನ್ನೂ ಓದಿ: ನಾನು ಪಠಾಣ್ ಸಿನಿಮಾ ನೋಡುತ್ತೇನೆ: ಬಹಿರಂಗವಾಗಿ ಘೋಷಿಸಿಕೊಂಡ ನಟ ಪ್ರಕಾಶ್ ಬೆಳವಾಡಿ
Advertisement
Advertisement
ಈ ಕುರಿತು ನಟ ಪ್ರಕಾಶ್ ಬೆಳವಾಡಿ ಮಾಧ್ಯಮವೊಂದರ ಜೊತೆ ಮಾತನಾಡಿ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ‘ಸಿನಿಮಾ ರಂಗದಲ್ಲಿ ಬಿಗುವಿನ ವಾತಾವರಣವಿದೆ. ಸಿನಿಮಾವನ್ನು ಬಾಯ್ಕಾಟ್ ಮಾಡಬೇಕಾ ಅಥವಾ ಬೇಡವಾ ಎನ್ನುವುದರ ಕುರಿತು ಚರ್ಚೆಯಾಗುತ್ತಿದೆ. ಚರ್ಚೆ ಆಗುತ್ತಿರುವ ವಿಷಯ ಎಷ್ಟು ಸಭ್ಯ ಎಂದು ಯೋಚಿಸಬೇಕಿದೆ. ಮಾತಾಡೋಕೆ ತುಂಬಾ ವಿಷಯ ಇದೆ. ಆದರೆ, ಪರಿಸ್ಥಿತಿ ಕೆಟ್ಟದಾಗಿದೆ. ಚರ್ಚೆ, ವಿವಾದ ಏನೇ ಇರಲಿ, ನಾನು ಆ ಸಿನಿಮಾವನ್ನು ನೋಡುತ್ತೇನೆ’ ಎಂದು ಹೇಳಿದ್ದಾರೆ. ಅಂದಹಾಗೆ ಪ್ರಕಾಶ್ ಬೆಳವಾಡಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.