ಒಟ್ಟಿಗೆ ಕಾಣಿಸಿಕೊಂಡು ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ ಮಾಜಿ ಲವ್ ಬರ್ಡ್ಸ್

Public TV
1 Min Read
kareena kapoor

ಬಾಲಿವುಡ್ ನಟ ಶಾಹಿದ್ ಕಪೂರ್ (Shahid Kapoor) ಹಾಗೂ ಮಾಜಿ ಪ್ರೇಯಸಿ ಕರೀನಾ ಕಪೂರ್ (Kareena Kapoor) ಒಂದೇ ವೇದಿಕೆಯಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಮಾಜಿ ಲವ್ ಬರ್ಡ್ಸ್ ಒಟ್ಟಾಗಿ ಕಾಣಿಸಿಕೊಂಡು ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ್ದಾರೆ. ಇದನ್ನೂ ಓದಿ:ಜಯಮಾಲಾ ಮಗಳ ಮದುವೆಯಲ್ಲಿ ಮಿಂಚಿದ್ದ ಆರೋಪಿ ರನ್ಯಾ ರಾವ್’

kareena kapoor 2

ಜೈಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟ ಶಾಹಿದ್ ಕಪೂರ್, ಕರಣ್ ಜೋಹರ್ ಮತ್ತು ಕರೀನಾ ಕಪೂರ್ ಖಾನ್ ಒಂದೇ ವೇದಿಕೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆ ಮೇಲೆ ಮಾಜಿ ಲವ್ ಬರ್ಡ್ಸ್ ಒಬ್ಬರನೊಬ್ಬರನ್ನು ನೋಡಿ ನಕ್ಕಿದ್ದಾರೆ. ಬ್ರೇಕಪ್ ಆದ್ಮೇಲೆ ಹಲವು ವರ್ಷಗಳ ಬಳಿಕ ಹಳೆಯ ಪ್ರೇಮಿಗಳು ಮೊದಲ ಬಾರಿಗೆ ಹೀಗೆ ಸಾರ್ವಜನಿಕವಾಗಿ ಬಹಳ ಆತ್ಮೀಯವಾಗಿದ್ದುದ್ದನ್ನು ಕಂಡು ಫ್ಯಾನ್ಸ್ ಖುಷಿಪಟ್ಟಿದ್ದಾರೆ.

kareena kapoor 1

ಶೋ ಮುಗಿದ ಬಳಿಕ ಮಾಧ್ಯಮಕ್ಕೆ ಶಾಹಿದ್ ಕಪೂರ್ ಮಾತನಾಡಿ, ಇದು ನಮಗೆ ಹೊಸತೇನಲ್ಲ. ಒಂದಲ್ಲಾ ಒಂದು ಕಾರ್ಯಕ್ರಮದಲ್ಲಿ ಅಥವಾ ಆಗಾಗ ನಾವು ಆಗಾಗ ಸಿಗುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ:‘ಜೊತೆಯಲಿ ಇರುವೆನು ಹೀಗೆ ಎಂದು’ ಪತ್ನಿಗಾಗಿ ಹಾಡು ಹಾಡಿದ ಯಶ್

ಅಂದಹಾಗೆ, 2004ರಲ್ಲಿ ಬಾಲಿವುಡ್ ‘ಫಿದಾ’ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಈ ವೇಳೆ, ಇಬ್ಬರಿಗೂ ಪ್ರೇಮಾಂಕುರವಾಗಿತ್ತು. 2008ರಲ್ಲಿ ‘ಜಬ್ ವಿ ಮೆಟ್’ ವೇಳೆ ಇಬ್ಬರ ನಡುವೆ ಮನಸ್ತಾಪ ಉಂಟಾಯ್ತು. ಬಳಿಕ ಶಾಹಿದ್ ಅವರು ಮೀರಾ ಕಪೂರ್ ಅವರನ್ನು ಮದುವೆಯಾದರು. ಕರೀನಾ ಅವರು ಸೈಫ್ ಅಲಿ ಖಾನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

Share This Article