ವಿಶ್ವದ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾಗಿರುವ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ (Anant Ambani) ಮತ್ತು ರಾಧಿಕಾ ಮರ್ಚೆಂಟ್ (Radhika Merchant) ಪ್ರಿ ವೆಡ್ಡಿಂಗ್ ಪಾರ್ಟಿ (Pre- Wedding) ಅದ್ಧೂರಿಯಾಗಿ ಜರುಗಿದೆ. ಇಟಲಿಯಲ್ಲಿ ನಡೆದ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳ ದಂಡೇ ಹರಿದು ಬಂದಿದೆ.
ಅಂಬಾನಿ ಮಗನ ಮನೆ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ (Shah rukh Khan) ಮತ್ತು ರಣ್‌ಬೀರ್ ಕಪೂರ್ (Ranbir Kapoor) ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಜಾನ್ವಿ ಕಪೂರ್, ಆಲಿಯಾ ಭಟ್, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಜೋಡಿ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಇದನ್ನೂ ಓದಿ:ಇಳಯರಾಜ ಬಯೋಪಿಕ್ ಹೊಸ ಪೋಸ್ಟರ್ ರಿಲೀಸ್ ಮಾಡಿದ ಧನುಷ್
LATEST : King Khan, AbRam and Gauri Khan with Ranbir Kapoor at the pre-wedding celebration of Anant Ambani and Radhika Merchant in Portofino, Italy ❤️???? #ShahRukhKhan #RanbirKapoor pic.twitter.com/aJddoaGZmy
— Shah Rukh Khan Universe Fan Club (@SRKUniverse) June 2, 2024
ಇನ್ನೂ ಶಾರುಖ್ ಪುತ್ರಿ ಸುಹಾನಾ ಖಾನ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಸುಹಾನಾ ಜೊತೆ ಶನಾಯಾ ಕಪೂರ್, ಅನನ್ಯಾ ಪಾಂಡೆ ಕೂಡ ಮಸ್ತ್ ಆಗಿ ಫೋಟೋಗೆ ಪೋಸ್ ನೀಡಿದ್ದಾರೆ. ಇದನ್ನೂ ಓದಿ:ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟ ‘ಅರಸು’ ನಟಿ- ತೆಲುಗಿಗೆ ಮೀರಾ ಜಾಸ್ಮಿನ್ ಕಮ್ ಬ್ಯಾಕ್
ಅಂದಹಾಗೆ, ಅನಂತ್ ಮತ್ತು ರಾಧಿಕಾ ಮದುವೆ ಜುಲೈ 12ರಂದು ನಡೆಯಲಿದೆ. ಜುಲೈ 12ರಿಂದ ಜುಲೈ 14ರವರೆಗೆ ಮದುವೆ ಕಾರ್ಯಕ್ರಮಗಳು ಜರುಗಲಿದೆ.
ನಗರದ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಹಿಂದೂ ವೈದಿಕ ಸಂಪ್ರದಾಯದಂತೆ ವಿವಾಹ ಸಮಾರಂಭ ನಡೆಯಲಿದೆ ಎಂದು ವರದಿಯಾಗಿದೆ.