ಶಾರುಖ್ ಖಾನ್ ಕಣ್ಣಿಗೆ ಗಾಯ- ಸರ್ಜರಿಗಾಗಿ ವಿದೇಶಕ್ಕೆ ಹೊರಟ ‘ಜವಾನ್’ ನಟ

Public TV
1 Min Read
sharukh khan 3

ಬಾಲಿವುಡ್ (Bollywood) ನಟ ಶಾರುಖ್ ಖಾನ್‌ಗೆ (Shah Rukh Khan) ಮತ್ತೊಮ್ಮೆ ಆರೋಗ್ಯ ಸಮಸ್ಯೆ ಎದುರಾಗಿದೆ. ಇದೀಗ ಶಾರುಖ್‌ಗೆ ಕಣ್ಣಿನ ಸಮಸ್ಯೆ ಕಾಣಿಸಿಕೊಂಡಿದೆ. ಸರ್ಜರಿಗಾಗಿ (Eye Surgery) ಅಮೆರಿಕಾಗೆ ನಟ ತೆರಳಲಿದ್ದಾರೆ. ಇದನ್ನೂ ಓದಿ:‘ದೈಜಿ’ ಸಿನಿಮಾ ಚಿತ್ರೀಕರಣಕ್ಕೂ ಮುನ್ನ ‘ಶಿವಾಜಿ ಸುರತ್ಕಲ್’ ಡೈರೆಕ್ಟರ್ ಟೆಂಪಲ್ ರನ್

sharukh khan 2

ಬಾಲಿವುಡ್ ಮೂಲಗಳ ಪ್ರಕಾರ, ಜುಲೈ 29ರಂದು ಶಾರುಖ್ ಖಾನ್ ಮುಂಬೈ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿಯೇ ಚಿಕಿತ್ಸೆ ಪಡೆಯಲು ಬಯಸಿದ್ದರು. ಆದರೆ ಅಂದುಕೊಂಡಂತೆ ಆಗಲಿಲ್ಲ. ಆಗಿರುವ ಹಾನಿ ಸರಿಪಡಿಸಲು ನಟ ಅಮೆರಿಕಾಗೆ ಹೊರಡಲಿದ್ದಾರೆ ಎನ್ನಲಾಗಿದೆ.

sharukh khan

ಜು.30ಕ್ಕೆ ಅವರು ಅಮೆರಿಕಾಗೆ ಹೊರಡಲಿದ್ದಾರೆ. ಸದ್ಯದಲ್ಲೇ ಶಾರುಖ್‌ಗೆ ಕಣ್ಣಿನ ಸರ್ಜರಿ ನಡೆಯಲಿದೆ. ಆದರೆ ಅವರ ಕಣ್ಣಿಗೆ ಏನಾಯಿತು? ಅವರ ಆರೋಗ್ಯದ ಸಮಸ್ಯೆ ಏನು ಎಂಬುದು ತಿಳಿದು ಬಂದಿಲ್ಲ. ಮುಂಬೈನಲ್ಲಿ ಉತ್ತಮ ಡಾಕ್ಟರ್‌ಗಳಿದ್ರೂ ಕೂಡ ಯಾಕೆ ವಾಸಿಯಾಗುತ್ತಿಲ್ಲ ಎಂಬುದು ತಿಳಿದು ಬಂದಿಲ್ಲ. ಈ ಕುರಿತು ನಟನ ಮ್ಯಾನೇಜರ್ ಪೂಜಾ ದದ್ಲಾನಿ ಕೂಡ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುತ್ತಿಲ್ಲ ಎನ್ನಲಾಗಿದೆ.

ಅಂದಹಾಗೆ, 2014ರಲ್ಲಿ ಶಾರುಖ್ ಕಣ್ಣಿನ ಸರ್ಜರಿಗೆ ಒಳಗಾಗಿದ್ದರು. ಈಗ ಮತ್ತೆ ಪುನರಾವರ್ತನೆಯಾಗಿದೆ.

Share This Article