ಬೆಂಗಳೂರು: ದಕ್ಷ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರು ತಮ್ಮ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದರಿಂದ ಸಾಕಷ್ಟು ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ನಟ ಸತೀಶ್ ನೀನಾಸಂ ಕೂಡ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 5 ವರ್ಷದಲ್ಲಿ ನಾನು ತೆಗೆದುಕೊಂಡಿದ್ದು 21 ರಜೆ ಮಾತ್ರ: ಅಣ್ಣಾಮಲೈ
ನಟ ಸತೀಶ್ ಸಾಮಾಜಿಕ ಜಾಲತಾಣಗಳಲ್ಲಿ ಅಣ್ಣಾಮಲೈ ರಾಜೀನಾಮೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. “ಕರ್ನಾಟಕ ಕಂಡ ಒಬ್ಬ ನಿಷ್ಟಾವಂತ ಅಧಿಕಾರಿ ಅಣ್ಣಾಮಲೈ ರಾಜೀನಾಮೆ ನೀಡಿರುವುದು ಒಬ್ಬ ಪ್ರಜೆಯಾಗಿ ಬೇಸರವಾಗಿದೆ. ನಿಮ್ಮಂತಹ ಅಧಿಕಾರಿಗಳ ಸೇವೆ ಬರೀ ಕರ್ನಾಟಕವಲ್ಲ ದೇಶಕ್ಕೆ ಅವಶ್ಯಕತೆಯಿದೆ. ಆದರೂ ನಿಮ್ಮ ವೈಯಕ್ತಿಕ ನಿರ್ಧಾರಗಳು ಅಷ್ಟೇ ಮುಖ್ಯ. ನಿಮ್ಮ ಜೀವನ ಸುಖವಾಗಿರಲಿ, ಶುಭಾಶಯಗಳು ಥ್ಯಾಂಕ್ಯು ಸರ್” ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ನಾನು ನನ್ನ ಖಾಕಿಯಲ್ಲಿ ಪ್ರತಿ ಕ್ಷಣವನ್ನು ಜೀವಿಸಿದ್ದೇನೆ: ಅಭಿಮಾನಿಗಳಿಗೆ ಅಣ್ಣಾಮಲೈ ಭಾವನಾತ್ಮಕ ಪತ್ರ
ಕರ್ನಾಟಕ ಕಂಡ ಒಬ್ಬ ನಿಷ್ಟಾವಂತ ಅಧಿಕಾರಿ ಅಣ್ಣಾಮಲೈ ರಾಜೀನಾಮೆ ನೀಡಿರುವುದು ಒಬ್ಬ ಪ್ರಜೆಯಾಗಿ ಬೇಸರವಾಗಿದೆ. ನಿಮ್ಮಂತಹ ಅಧಿಕಾರಿಗಳ ಸೇವೆ ಬರೀ ಕರ್ನಾಟಕವಲ್ಲ ದೇಶಕ್ಕೆ ಅವಶ್ಯಕತೆಯಿದೆ. ಆದರೂ ನಿಮ್ಮ ವೈಯಕ್ತಿಕ ನಿರ್ಧಾರಗಳು ಅಷ್ಟೇ ಮುಖ್ಯ. ನಿಮ್ಮ ಜೀವನ ಸುಖವಾಗಿರಲಿ, ಶುಭಾಶಯಗಳು ಥ್ಯಾಂಕ್ಯು ಸರ್ pic.twitter.com/4kTsrFW05K
— Sathish Ninasam (@SathishNinasam) May 28, 2019
ಅಣ್ಣಾಮಲೈ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ನೀಲಮಣಿ ರಾಜು ಅವರು ರಾಜ್ಯ ಗೃಹ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ರವಾನಿಸಿ, ಬಳಿಕ ಅದು ಗೃಹ ಕಾರ್ಯದರ್ಶಿ ಹೋಗುತ್ತದೆ. ಅಂತಿಮವಾಗಿ ಕೇಂದ್ರ ಯುಪಿಎಸ್ಸಿಗೆ ತಲುಪಿದ ಬಳಿಕ ರಾಜೀನಾಮೆ ಅಂಗಿಕಾರವಾಗುತ್ತದೆ.