ತಮಿಳಿನ ಹೆಸರಾಂತ ನಟ ಶರತ್ ಕುಮಾರ್ (Radhika SarathKumar) ಪತ್ನಿ, ನಟಿ ರಾಧಿಕಾ ಶರತ್ ಕುಮಾರ್ ಈ ಬಾರಿ ತಮಿಳು ನಾಡಿನ ವಿರುದುನಗರ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ (Election) ಸ್ಪರ್ಧಿಸಿದ್ದಾರೆ. ಇಂದು ಚುನಾವಣೆ ಫಲಿತಾಂಶ ಘೋಷಣೆ ಆಗಲಿದ್ದು, ಅದಕ್ಕೂ ಮುನ್ನ ನಟ ಶರತ್ ಕುಮಾರ್ ತನ್ನ ಪತ್ನಿ ಗೆಲ್ಲಲಿ ಎಂದು ಉರುಳು ಸೇವೆ ಮಾಡಿದ್ದಾರೆ.
ವಿರುದುನಗರದ ಪರಾಶಕ್ತಿ ಮಾರಿಯಮ್ಮ ದೇವಸ್ಥಾನಕ್ಕೆ ನಿನ್ನೆ ಆಗಮಿಸಿದ್ದ ಶರತ್ ಕುಮಾರ್ (Sarath Kumar) , ಪೂಜೆ ಸಲ್ಲಿಸಿದರು. ನಂತರ ದೇವಸ್ಥಾನ ಪ್ರದಕ್ಷಣೆ ಹಾಕಿದರು. ಆಮೇಲೆ ಉರುಳು ಸೇವೆ ಮಾಡಿದ್ದಾರೆ. ತಮ್ಮ ಪತ್ನಿಯ ಗೆಲುವಿಗೆ ಪ್ರಾರ್ಥನೆ ಮಾಡಿದ್ದಾರೆ. ವಿರುದುನಗರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲ ಮೂಡಿದೆ.
- Advertisement
- Advertisement
ರಾಧಿಕಾ ಶರತ್‌ಕುಮಾರ್ ಅವರು ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದರೆ, ಇತ್ತೀಚೆಗಷ್ಟೇ ನಿಧನರಾದ ಕ್ಯಾಪ್ಟನ್ ವಿಜಯಕಾಂತ್ ಅವರ ಪುತ್ರ ವಿಜಯ್ ಪ್ರಭಾಕರನ್ ಎಐಡಿಎಂಕೆ ಪಕ್ಷದಿಂದ ಸ್ಪರ್ಧಿಸಿದ್ದಾರೆ. ಮಾಣಿಕಂ ಟ್ಯಾಗೋರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ.