ಬಾಲಿವುಡ್ ನಟ ಸಲ್ಮಾನ್ ಖಾನ್ ‘ಸಿಕಂದರ್’ (Sikandar) ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಆಮೀರ್ ಖಾನ್ (Aamir Khan), ನಿರ್ದೇಶಕ ಎ.ಆರ್ ಮುರುಗದಾಸ್ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಸಲ್ಮಾನ್ (Salman Khan) ಭಾಗಿಯಾಗಿದ್ದಾರೆ. ಈ ವೇಳೆ, ರಶ್ಮಿಕಾ ಮಂದಣ್ಣ ಶ್ರಮ ಜೀವಿ, ಅದ್ಭುತ ನಟಿ ಎಂದು ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ:ಎಲ್ಲವೂ ದೇವರಿಗೆ ಬಿಟ್ಟಿದ್ದು: ಕೊನೆಗೂ ಲಾರೆನ್ಸ್ ಬಿಷ್ಣೋಯ್ ಬೆದರಿಕೆ ಬಗ್ಗೆ ಸಲ್ಮಾನ್ ಮಾತು
ಸಂದರ್ಶನದಲ್ಲಿ ಸಲ್ಮಾನ್ ಮಾತನಾಡಿ, ರಶ್ಮಿಕಾ ಮಂದಣ್ಣ (Rashmika Mandanna) ಅವರು ಹಾರ್ಡ್ ವರ್ಕರ್, ಆಕೆ ಅದ್ಭುತ ನಟಿ. ನಾವು ಹೈದರಾಬಾದ್‌ನಲ್ಲಿ ಚಿತ್ರೀಕರಣದಲ್ಲಿದ್ದಾಗ, ಅವರು ಬೆಳಿಗ್ಗೆ 6 ಗಂಟೆಗೆ ಸಿದ್ಧರಾಗಿ ‘ಪುಷ್ಪ 2’ (Pushpa 2) ಚಿತ್ರೀಕರಣದಲ್ಲಿ ಇರುತ್ತಿದ್ದರು. ಆ ಚಿತ್ರದ ಚಿತ್ರೀಕರಣ ಮುಗಿದ ನಂತರ, ಅವರು ನಮ್ಮೊಂದಿಗೆ ಶೂಟಿಂಗ್‌ಗೆ ಬರುತ್ತಿದ್ದರು. ಅವರಿಗೆ ಜ್ವರ ಬಂದಾಗಲೂ, ನಟಿ ವಿಶ್ರಾಂತಿ ಇಲ್ಲದೆ ಕೆಲಸ ಮಾಡುತ್ತಿದ್ದರು. ಇನ್ನೂ ಅವರು ಒಂದು ಸೆಟ್‌ನಿಂದ ಮತ್ತೊಂದು ಸೆಟ್‌ಗೆ ಹೋಗುವ ಪ್ರಯಾಣದ ಸಮಯದಲ್ಲಿ ವಿಶ್ರಾಂತಿ ಪಡೆಯತ್ತಿದ್ದರು ಎಂದು ಹೇಳಿದ್ದಾರೆ. ಇದನ್ನೂ ಓದಿ:ಶೃತಿ ನಾರಾಯಣನ್ ಕಾಸ್ಟಿಂಗ್ ಕೌಚ್ ವೀಡಿಯೋ ಲೀಕ್- ಇನ್ಸ್ಟಾ ಖಾತೆ ಪ್ರೈವೇಟ್ ಮಾಡಿದ ನಟಿ
ಅವರನ್ನು ನೋಡಿದಾಗ ನನಗೆ ನನ್ನ ಹಳೆಯ ದಿನಗಳು ನೆನಪಾಗುತ್ತಿದ್ದವು. 25 ವರ್ಷಗಳ ಹಿಂದೆ, ಆಮಿರ್ ಖಾನ್, ನಾನು ಮತ್ತು ಇನ್ನೂ ಅನೇಕರು 2ರಿಂದ 3 ಶಿಫ್ಟ್‌ಗಳಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದೆವು. ರಶ್ಮಿಕಾ ಈಗ ದಿನಕ್ಕೆ ಎರಡರಿಂದ ಮೂರು ಶಿಫ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳುತ್ತಾ ಸಲ್ಮಾನ್ ಖಾನ್ ತಮ್ಮ ಕೆರಿಯರ್‌ನ ಆರಂಭಿಕ ದಿನಗಳನ್ನು ಸ್ಮರಿಸಿದರು.
ಇನ್ನೂ ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ, ಕಾಜಲ್ ನಟನೆಯ ‘ಸಿಕಂದರ್’ ಸಿನಿಮಾ ಇದೇ ಮಾ.30ರಂದು ರಿಲೀಸ್ ಆಗಲಿದೆ. ಲಕ್ಕಿ ನಟಿ ರಶ್ಮಿಕಾರಿಂದ ಸಲ್ಮಾನ್ ಕೆರಿಯರ್‌ಗೆ ಬ್ರೇಕ್ ಸಿಗುತ್ತಾ? ಮತ್ತೆ ಹಿಟ್ ನೀಡ್ತಾರಾ ಎಂದು ಕಾದುನೋಡಬೇಕಿದೆ.