ಬಾಲಿವುಡ್ ನಟ ಸಲ್ಮಾನ್ ಖಾನ್ ಜೊತೆ ಬರೋಬ್ಬರಿ ಎಂಟು ವರ್ಷಗಳ ಕಾಲ ರಿಲೇಷನ್ ಶಿಪ್ ನಲ್ಲಿ ಇದ್ದವರು ಮಾಜಿ ನಟಿ ಸೋಮಿ ಅಲಿ. ಇವರು ಸಲ್ಮಾನ್ ಜೊತೆ ಹಲವಾರು ಸಿನಿಮಾಗಳನ್ನೂ ಮಾಡಿದ್ದಾರೆ. ಭಾರೀ ಬೇಡಿಕೆ ಇರುವ ಸಮಯದಲ್ಲಿ ಸಲ್ಮಾನ್ ಭೇಟಿಯಾಗಿ, ಅದು ಪ್ರೀತಿಗೂ ತಿರುಗಿ ಇಬ್ಬರೂ ಡೇಟಿಂಗ್ ಮಾಡುವಲ್ಲಿಗೆ ಅವರ ಸ್ನೇಹ ಬೆಳೆದಿತ್ತು. ಬಿ ಟೌನ್ ನಲ್ಲಿ ಸಲ್ಮಾನ್ ಮತ್ತು ಸೋಮಿ ಅಲಿ ಹೆಸರು ಎಂಟು ವರ್ಷಗಳ ಕಾಲ ಚಾಲ್ತಿಯಲ್ಲಿತ್ತು. ಆನಂತರ ಇಬ್ಬರೂ ದೂರ ದೂರವಾದರು.
Advertisement
ಸಿನಿಮಾ ರಂಗದಿಂದ ದೂರವಿರುವ ಸೋಮಿ ಅಲಿ, ಇದೇ ಮೊದಲ ಬಾರಿಗೆ ತಮ್ಮ ಮತ್ತು ಸಲ್ಮಾನ್ ನಡುವಿನ ಬಾಂಧವ್ಯ ಯಾಕೆ ಮುರಿದು ಬಿತ್ತು ಎನ್ನುವ ಕುರಿತಾಗಿ ಮಾತನಾಡಿದ್ದಾರೆ. ತಮ್ಮಿಬ್ಬರ ಭೇಟಿಗೆ ಕಾರಣವನ್ನೂ ಅವರು ಹಂಚಿಕೊಂಡಿದ್ದಾರೆ. ಸಲ್ಮಾನ್ ಖಾನ್ ಅವರ ಅಪ್ಪಟ ಅಭಿಮಾನಿಯಾಗಿದ್ದರಂತೆ ಸೋಮಿ. ಇವರನ್ನು ಮದುವೆ ಆಗುವುದಕ್ಕಾಗಿಯೇ ಯುಎಸ್ ಬಿಟ್ಟು ಬಂದಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಅಷ್ಟೊಂದು ಹುಚ್ಚು ಅಭಿಮಾನಿ ನಾನಾಗಿದ್ದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸಂಕ್ರಾಂತಿ ಹಾಡಿಗೆ ಸುಂದರಿಯರ ಜೊತೆ ಕುಣಿದ ರಮೇಶ್ ಅರವಿಂದ್
Advertisement
Advertisement
ಸಲ್ಮಾನ್ ಜೊತೆ ಎಂಟು ವರ್ಷಗಳ ಕಾಲ ಕಳೆದಿರುವೆ. ಅವರ ತಾಯಿ ತುಂಬಾ ಒಳ್ಳೆಯವರು. ಆದರೆ, ಸಲ್ಮಾನ್ ಸ್ಯಾಡಿಸ್ಟ್. ನನ್ನನ್ನು ತೀರಾ ಕೆಟ್ಟದ್ದಾಗಿ ನಡೆಸಿಕೊಂಡ. ಮಾತುಗಳು ಕೂಡ ಸರಿ ಇರಲಿಲ್ಲ. ದೈಹಿಕವಾಗಿಯೂ ನಾನು ಕಿರುಕುಳಕ್ಕೆ ಒಳಗಾದ. ಇವೆಲ್ಲದರಿಂದ ಮುಕ್ತಿ ಹೊಂದುವುದಕ್ಕಾಗಿಯೇ ಅವನನ್ನು ಬಿಟ್ಟು ಆಚೆ ಬಂದೆ. ನಾನು ಬಿಟ್ಟು ಬಂದಾಗ ಅದು ಸುದ್ದಿ ಆಗಲೇ ಇಲ್ಲ. ಈಗಲೂ ಆಗುತ್ತದೆ ಎನ್ನುವ ನಂಬಿಕೆ ನನಗಿಲ್ಲ ಎಂದು ಹೇಳಿಕೊಂಡಿದ್ದಾರೆ.
Advertisement
ಅಂದಹಾಗೆ ಸೋಮಿ ಒಂದು ಎನ್.ಜಿ.ಓ ನಡೆಸುತ್ತಿದ್ದಾರೆ. ಅತ್ಯಾಚಾರ ಹಾಗೂ ಕೌಟುಂಬಿಕ ಹಿಂಸೆಗೆ ಒಳಗಾದ ಸಂತ್ರಸ್ತರಿಗೆ ಅವರು ಕಣ್ಣೀರು ಒರೆಸುವ ಕೆಲಸದಲ್ಲಿ ತೊಡಗಿದ್ದಾರೆ. ಹೆಣ್ಣು ಮಕ್ಕಳಿಗೆ ಸಾಮಾನ್ಯ ಜನರಷ್ಟೇ ಹಿಂಸೆ ಕೊಡುವುದಿಲ್ಲ. ಪ್ರತಿಷ್ಠಿತ ವ್ಯಕ್ತಿಗಳಿಂದಲೂ ಹೆಣ್ಣು ಹಿಂಸೆ ಅನುಭವಿಸುತ್ತಾಳೆ ಎನ್ನುವುದಕ್ಕೆ ನಾನೇ ಸಾಕ್ಷಿ ಎಂದು ಈ ಮೂಲಕ ಅವರು ಸಮಾಜದ ಮತ್ತೊಂದು ಮುಖವನ್ನೂ ಬಿಚ್ಚಿಟ್ಟಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k