ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಸದ್ಯ ‘ಸಿಕಂದರ್’ (Sikandar) ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ, ಲಾರೆನ್ಸ್ ಬಿಷ್ಣೋಯ್ ಬೆದರಿಕೆಯ ಬಗ್ಗೆ ಸಲ್ಮಾನ್ ಮೌನ ಮುರಿದಿದ್ದಾರೆ. ಎಷ್ಟು ವರ್ಷ ದೇವರು ಬರೆದಿದ್ದಾನೋ ಅಷ್ಟು ವರ್ಷ ಬದುಕುತ್ತೇನೆ. ನನ್ನ ಭವಿಷ್ಯ ದೇವರ ಕೈಯಲ್ಲಿದೆ ಎಂದಿದ್ದಾರೆ. ಇದನ್ನೂ ಓದಿ:ಗೌತಮಿ ದಂಪತಿ ಜೊತೆ ಕುಟುಂಬ ಸಮೇತ ಉಗ್ರಂ ಮಂಜು ಟೆಂಪಲ್ ರನ್
ಪ್ರಚಾರ ಕಾರ್ಯದಲ್ಲಿ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಗ್ಯಾಂಗ್ ಬಗ್ಗೆ ಮಾತನಾಡಿದ ಸಲ್ಮಾನ್ ಖಾನ್, ನನಗೆ ಅದಷ್ಟೇ ಭದ್ರತೆ ಇದ್ದರೂ ಕೆಲವೊಂದು ಸಮಯದಲ್ಲಿ ನನ್ನನ್ನು ರಕ್ಷಿಸುವುದು ಸುಲಭದ ಮಾತಲ್ಲ, ನನ್ನ ಭವಿಷ್ಯ ದೇವರ ಕೈಯಲ್ಲಿದೆ. ಎಲ್ಲವೂ ದೇವರಿಗೆ ಬಿಟ್ಟಿದ್ದೇನೆ. ಎಲ್ಲಿಯವರೆಗೆ ಜೀವ ಇರುತ್ತದೋ, ಅಲ್ಲಿಯವರೆಗೆ ಮಾತ್ರ ಈ ಬದುಕು ಅಷ್ಟೇ ಎಂದಿದ್ದಾರೆ. ಇದನ್ನೂ ಓದಿ:ತಾಯಿ ಚಾಮುಂಡೇಶ್ವರಿ ದೇವಿ ಭಕ್ತರಿಗೆ ಕ್ಷಮೆ ಕೋರಿದ ’ಬಿಗ್ ಬಾಸ್’ ರಕ್ಷಕ್ ಬುಲೆಟ್
ಒಟ್ನಲ್ಲಿ ತಮಗೆ ರಕ್ಷಣೆ ಅದೆಷ್ಟು ಮುಖ್ಯ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ಪ್ರತಿದಿನ ಭದ್ರತೆಯೊಂದಿಗೆ ಓಡಾಡುವುದು, ದಿನಚರಿ ಕೆಲಸಗಳಿಗೆ ಹಾಗೂ ಜನರೊಂದಿಗೆ ತಿರುಗಾಡುವುದು ಕೂಡ ಕಷ್ಟ ಎಂದು ಮುಕ್ತವಾಗಿ ಸಲ್ಮಾನ್ ಮಾತನಾಡಿದ್ದಾರೆ.
ಅಂದಹಾಗೆ, ರಶ್ಮಿಕಾ ಮಂದಣ್ಣ (Rashmika Mandanna) ಜೊತೆಗಿನ ಸಲ್ಮಾನ್ ‘ಸಿಕಂದರ್’ ಸಿನಿಮಾ ಇದೇ ಮಾ.30ರಂದು ರಿಲೀಸ್ ಆಗ್ತಿದೆ. ಈ ಚಿತ್ರವನ್ನು ಎ.ಆರ್ ಮುರುಗದಾಸ್ ನಿರ್ದೇಶನ ಮಾಡಿದ್ದಾರೆ.