ಸತತ ಸೋಲಿನ ಬಳಿಕ ‘ಸಿಕಂದರ್’ (Sikandar) ಮೂಲಕ ಸಲ್ಮಾನ್ ಖಾನ್ (Salman Khan) ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಇದೇ ಮಾ.30ರಂದು ‘ಸಿಕಂದರ್’ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಇದನ್ನೂ ಓದಿ:ಶ್ರೀಲೀಲಾಗೆ ‘ನೀನೇ ನನ್ನ ಜೀವನ’ ಎಂದ ಬಾಲಿವುಡ್ ನಟ ಕಾರ್ತಿಕ್ ಆರ್ಯನ್
ಗೆಲುವಿನಗಾಗಿ ನಟ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ‘ಸಿಕಂದರ್’ಗಾಗಿ ಸೌತ್ ನಿರ್ದೇಶಕ, ಕಲಾವಿದರ ಜೊತೆ ಅವರು ಕೈಜೋಡಿಸಿದ್ದಾರೆ. ಈ ಬಾರಿ ಲಕ್ಕಿ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸಾಥ್ ನೀಡಿದ್ದಾರೆ. ಹಾಗಾಗಿ ಈ ಚಿತ್ರದ ಮೂಲಕ ಸಕ್ಸಸ್ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಸಲ್ಮಾನ್.
ಭ್ರಷ್ಟ ರಾಜಕೀಯದ ವಿರುದ್ಧ ಹೋರಾಡುವ ವ್ಯಕ್ತಿಯಾಗಿ ಸಲ್ಮಾನ್ ನಟಿಸಿದ್ದಾರೆ. ಮಗಧೀರ ನಟಿ ಕಾಜಲ್ (Kajal Aggarwal), ‘ಬಾಹುಬಲಿ’ ಖ್ಯಾತಿಯ ಕಟ್ಟಪ್ಪ, ಕನ್ನಡದ ನಟ ಕಿಶೋರ್ (Kishore) ಸೇರಿದಂತೆ ಅನೇಕರು ನಟಿಸಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್ ಹಾಗೂ ಹಾಡುಗಳಿಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ಬಾರಿ ಸಲ್ಮಾನ್ ಮತ್ತು ರಶ್ಮಿಕಾ ಜೊತೆಯಾಗಿ ನಟಿಸಿರೋದ್ರಿಂದ ಸಿನಿಮಾ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ. ಇದನ್ನೂ ಓದಿ:ಲಾಂಗ್ ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣ- ರಜತ್, ವಿನಯ್ ಗೌಡ ಜೈಲಿನಿಂದ ರಿಲೀಸ್
ಈ ಚಿತ್ರದಲ್ಲಿ ತಮಗಿಂತ 31 ವರ್ಷ ಕಿರಿಯ ನಟಿ ರಶ್ಮಿಕಾ ಜೊತೆ ರೊಮ್ಯಾನ್ಸ್ ಮಾಡಿದಕ್ಕೆ ಸಲ್ಮಾನ್‌ರನ್ನು ಟೀಕಿಸಲಾಗಿತ್ತು. ಹಾಗಾಗಿ ಇತ್ತೀಚೆಗೆ ನಡೆದ ಸಿನಿಮಾ ಪ್ರಚಾರ ಕಾರ್ಯದ ವೇಳೆ ಸಲ್ಮಾನ್ ಮಾತನಾಡಿ, ಹೀರೋಯಿನ್ ಆಗಿ ನಟಿಸಲು ರಶ್ಮಿಕಾಗೆ ಯಾವುದೇ ಸಮಸ್ಯೆ ಇಲ್ಲ. ಅವರ ತಂದೆಗೂ ಕೂಡ ಯಾವುದೇ ಸಮಸ್ಯೆ ಇಲ್ಲ, ಹೀಗಿರುವಾಗ ನಿಮ್ಮದೇನು? ನಿಮಗ್ಯಾಕೆ? ಇದು ಸಮಸ್ಯೆಯಂತೆ ಕಾಣುತ್ತಿದೆ ಎಂದು ಖಡಕ್ ಆಗಿ ಟ್ರೋಲಿಗರಿಗೆ ತಿರುಗೇಟು ನೀಡಿದ್ದರು.