ಮುಂಬೈ: ಈಗಾಗಲೇ 4 ಮಕ್ಕಳ ತಂದೆಯಾಗಿರುವ ಬಾಲಿವುಡ್ ನಟ ಸೈಫ್ ಆಲಿ ಖಾನ್ ಅವರು ಹಾಸ್ಯಸ್ಪದ ಹೇಳಿಕೆಯೊಂದನ್ನು ನೀಡುವ ಮೂಲಕ ಇದೀಗ ಸುದ್ದಿಯಾಗಿದ್ದಾರೆ.
ಹೌದು. ಮನೆಯಲ್ಲಿಯೇ ಇದ್ದರೆ ಇನ್ನಷ್ಟು ಮಕ್ಕಳನ್ನು ಹೊಂದುವ ಭಯವಿದೆ ಎಂದು ಹೇಳಿಕೆ ನೀಡಿದ್ದಾರೆ. ಸೈಫ್ ಅವರು ಈ ತಮಾಷೆಯ ಹೇಳಿಕೆಯನ್ನು ಕಪಿಲ್ ಶರ್ಮಾ ಶೋದಲ್ಲಿ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಕಪಿಲ್ ಶರ್ಮಾ ಅವರು, ಈಗಾಗಲೇ 4 ಮಕ್ಕಳನ್ನು ಹೊಂದಿರುವ ನೀವು ಇನ್ನೂ ಮಕ್ಕಳನ್ನು ಪಡೆಯುವ ಒತ್ತಡ ಏನಾದರೂ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಸೈಫ್, ಮನೆಯಲ್ಲಿಯೇ ಇದ್ದರೆ ಇನ್ನೊಂದಿಷ್ಟು ಮಕ್ಕಳಾಗುತ್ತವೆ ಎಂಬ ಭಯವಿದೆ ಎಂದು ಹೇಳುತ್ತಾ ಜೋರಾಗಿ ನಕ್ಕು ಬಿಟ್ಟಿದ್ದಾರೆ.
ಶೋಗೆ ರಾಣಿ ಮುಖರ್ಜಿ, ಸಿದ್ದಾರ್ಥ್ ಚತುರ್ವೇದಿ, ಶಾರ್ವರಿ ವಾಘ್ ಅತಿಥಿಯಾಗಿ ಆಗಮಿಸಿದ್ದು, ಎಲ್ಲರೂ ಕಪಿಲ್ ಶರ್ಮಾ ಜೊತೆ ಕಾಮಿಡಿ ಮಾಡುತ್ತಿದ್ದರು. ಈ ಮಧ್ಯೆ ಕಪಿಲ್ ಶರ್ಮಾ ಅವರು, ವೈಯಕ್ತಿಕ ಜೀವನ, ಸಿನಿಮಾ ಕೆಲಸಗಳ ಬಗ್ಗೆ ಚರ್ಚೆ ಮಾಡಿದ್ದಾರೆ. 2021ರಲ್ಲಿಯೇ 3 ಸಿನಿಮಾ ಪೂರ್ಣಗೊಳಿಸಿದ್ದೀರಿ, ನಿಮಗೆ ಕೆಲಸ ಮಾಡಲು ಇಷ್ಟವೇ? ಅಥವಾ ಮಕ್ಕಳ ಸಂಖ್ಯೆ ಜಾಸ್ತಿ ಮಾಡಬೇಕು ಎನ್ನುವ ಒತ್ತಡ ಇದೆಯೇ? ಎಂದು ಸೈಫ್ ಅಲಿ ಖಾನ್ ಅವರಿಗೆ ಪ್ರಶ್ನೆ ಹಾಕಿದ್ದಾರೆ. ಈ ವೇಳೆ ಸೈಫ್ ನೀಡಿದ ಉತ್ತರ ಕೇಳಿ ಎಲ್ಲರೂ ನಕ್ಕಿದ್ದಾರೆ. ಇದನ್ನೂ ಓದಿ: ಪುನೀತ್‍ಗೆ ಚಾಮರಾಜನಗರ ಜಿಲ್ಲೆಯ ಅಪೂರ್ವ ಗೌರವ – 46 ಸಾವಿರ ನೇತ್ರದಾನಕ್ಕೆ ಮಹಾಭಿಯಾನ
ಸೈಫ್ ಅಲಿ ಖಾನ್ ಮೊದಲು ನಟಿ ಅಮೃತಾ ಸಿಂಗ್ ಜೊತೆ ಮದುವೆಯಾಗಿದ್ದರು. ಸೈಫ್-ಅಮೃತಾ ಜೋಡಿಗೆ ಇಬ್ರಾಹಿಂ ಅಲಿ ಖಾನ್, ಸಾರಾ ಅಲಿ ಖಾನ್ ಎಂಬ ಮಕ್ಕಳಿದ್ದಾರೆ. ಅಮೃತಾ ಸಿಂಗ್ ಜೊತೆಗಿನ ವಿಚ್ಛೇದನದ ನಂತರ 2012ರಲ್ಲಿ ಸೈಫ್ ಕರೀನಾ ಕಪೂರ್ ಅವರನ್ನು ವರಿಸಿದ್ದಾರೆ. ಇದೀಗ ಈ ದಂಪತಿಗೆ ತೈಮೂರ್ ಅಲಿ ಖಾನ್ ಹಾಗೂ ಜೆಹಾಂಗೀರ್ ಎಂಬ ಪುತ್ರರಿದ್ದಾರೆ.