ಬೆಟ್ಟಿಂಗ್ ಹಗರಣಕ್ಕೆ (Scam) ಸಂಬಂಧಿಸಿದಂತೆ ನಿನ್ನೆ ಅರೆಸ್ಟ್ ಆಗಿರುವ ಬಾಲಿವುಡ್ ನಟ ಕಂ ಮಾಡೆಲ್ ಸಾಹಿಲ್ ಖಾನ್, ಬಂಧನದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ವೇಷ ಬದಲಿಸಿಕೊಂಡು ನಾಲ್ಕು ದಿನಗಳ ಕಾಲ ಪ್ರಯಾಣ ಮಾಡಿದ್ದ ಎನ್ನುವ ಅಂಶ ಬೆಳಕಿಗೆ ಬಂದಿದೆ. ನಿರೀಕ್ಷಣಾ ಜಾಮೀನು ವಜಾ ಆಗುತ್ತಿದ್ದಂತೆಯೇ ಗುರುತು ಸಿಗದಂತೆ ವೇಷ ಬದಲಿಸಿಕೊಂಡು 1800 ಕಿಲೋ ಮೀಟರ್ ಪ್ರಯಾಣ ಮಾಡಿದ್ದರಂತೆ.
Advertisement
ಪೊಲೀಸರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ನಾನಾ ಕಡೆ ಪ್ರಯಾಣವನ್ನೂ ಅವರು ಮಾಡಿದ್ದಾರೆ. ಹೈದರಾಬಾದ್ ನಲ್ಲಿ ಇದ್ದಾರೆ ಎಂದು ಪೊಲೀಸರು ಪತ್ತೆ ಮಾಡುತ್ತಿದ್ದಂತೆಯೇ ಛತ್ತೀಸ್ ಗಢಕ್ಕೆ ಹಾರಿದ್ದರು. ಕೊನೆಗೂ ಛತ್ತೀಸ್ ಗಢದ ಜಗದಲ್ ಪುರದ ಹೋಟೆಲ್ ವೊಂದರಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.
Advertisement
Advertisement
ನಿನ್ನೆಯಷ್ಟೇ ಸಾಹಿಲ್ ಖಾನ್ (Sahil Khan) ಬಂಧನವಾಗಿದೆ. ಮಹಾದೇವ್ ಬೆಟ್ಟಿಂಗ್ ಆಪ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ನಟನನ್ನು ಬಂಧಿಸಿರುವುದಾಗಿ (Arrest) ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿಸಿ, ತೀವ್ರ ವಿಚಾರಣೆಗೂ ಒಳಪಡಿಸಿದ್ದಾರೆ. ಈ ಹಿಂದೆ ಮಹಾದೇವ್ ಬೆಟ್ಟಿಂಗ್ (Mahadev Betting) ಆಪ್ ಅ ವ್ಯವಹಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಸಮನ್ಸ್ (Summons) ಜಾರಿ ಮಾಡಿದ್ದರು. ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ತಿಳಿಸಿದ್ದರು.
Advertisement
ಬೆಟ್ಟಿಂಗ್ ಆಪ್ ನಲ್ಲಿ 15 ಸಾವಿರ ಕೋಟಿಗೂ ಅಧಿಕ ಅವ್ಯವಹಾರ ನಡೆದಿದೆ ಎಂದು ಹೇಳಲಾಗಿದ್ದು, ಆಪ್ ಮೂಲಕ ಅಕ್ರಮವಾಗಿ ಹಣ ವರ್ಗಾವಣೆ ಆಗಿದೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು ಭೋಪಾಲ್, ಮುಂಬೈ, ಕೋಲ್ಕತ್ತಾ ನಗರಗಳಲ್ಲಿ ಶೋಧ ಕಾರ್ಯ ನಡೆಸಿದ್ದರು. ಈ ಸಮಯದಲ್ಲಿ ಹವಾಲಾ ನಡೆದಿರುವುದು ಪತ್ತೆ ಆಗಿದೆ ಎನ್ನಲಾಗಿತ್ತು.
ರವಿ ಉಪ್ಪಾಲ್ ಮತ್ತು ಸೌರಭ್ ಚಂದ್ರಕಾರ್ ಎನ್ನುವವರು ಈ ಆಪ್ ಅನ್ನು ದುಬೈನಿಂದ ನಡೆಸುತ್ತಿದ್ದರು. ಬೇನಾಮಿ ಖಾತೆಗಳಿಂದ ಅಕ್ರ ಹಣ ವರ್ಗಾವಣೆ ಆಗುತ್ತಿದೆ ಎಂದು ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಪೊಲೀಸರು ಶೋಧ ನಡೆಸಿದ್ದರು. ಈ ಹಗರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನ ಇನ್ನೂ ಅನೇಕ ಸಿಲೆಬ್ರಿಟಿಗಳು ನೋಟಿಸ್ ಜಾರಿ ಆಗಿದೆ.