ಹಾಲಿವುಡ್ ನ ಹೆಸರಾಂತ ನಟಿ ಸಾಂಡ್ರಾ ಬುಲಕ್ ನಟನೆಯ ಜೊತೆಗೆ ಬೋಲ್ಡ್ ಅಭಿನಯದ ಮೂಲಕ ಹೆಸರಾದವರು. ಇವರ ನಟನೆಯ ಸಿನಿಮಾಗಳಲ್ಲಿ ಸೆಕ್ಸ್ ಮಾಡುವ ದೃಶ್ಯಗಳನ್ನೂ ಒಳಗೊಂಡಂತೆ ಚಿತ್ರಕಥೆಗಳನ್ನು ಮಾಡಲಾಗುತ್ತದೆ. ಇಂತಹ ನಟಿಯು ಮೊನ್ನೆಯಷ್ಟೇ ತಮ್ಮ 59ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಹುಟ್ಟಹಬ್ಬಕ್ಕೆ ಸಹನಟ ರಯಾನ್ ರೆನಾಲ್ಡ್ಸ್ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ.
ರಯಾನ್ ರೆನಾಲ್ಡ್ಸ್ ಮತ್ತು ಸಾಂಡ್ರಾ ಬುಲಕ್ ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಅದರಲ್ಲೂ ‘ದಿ ಪ್ರಪೋಸಲ್’ ಚಿತ್ರದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಆ ಸಿನಿಮಾದಲ್ಲಿನ ಇಬ್ಬರೂ ಬೆತ್ತಲೆ ಇರುವ ಮತ್ತು ತಬ್ಬಿಕೊಳ್ಳುವಂತಹ ದೃಶ್ಯವನ್ನು ಇನ್ಸ್ಟಾದಲ್ಲಿ ಶೇರ್ ಮಾಡುವ ಮೂಲಕ ಹುಟ್ಟು ಹಬ್ಬಕ್ಕೆ ಶುಭಾಶಯ ಹೇಳಿದ್ದಾರೆ ರಯಾನ್ ರೆನಾಲ್ಡ್ಸ್. ಇದನ್ನೂ ಓದಿ:ದುಲ್ಕರ್ ಸಲ್ಮಾನ್ ಚಿತ್ರಕ್ಕೆ ‘ಲಕ್ಕಿ ಬಾಸ್ಕರ್’ ಟೈಟಲ್ ಫಿಕ್ಸ್
ಇಬ್ಬರೂ ಬೆತ್ತಲೆಯಾಗಿ ಎದ್ದು ನಿಂತು ತಬ್ಬಿಕೊಳ್ಳುವಂತಹ ವಿಡಿಯೋವನ್ನು ಪೋಸ್ಟ್ ಮಾಡಿ, ‘ನನ್ನ ನೆಚ್ಚಿನ ನಟಿ, ಅಪ್ರತಿಮ ಕಲಾವಿದೆ ಮತ್ತು ಅದ್ಭುತ ಪ್ರತಿಭೆ ಇರುವ ಸಾಂಡ್ರಾಗೆ ಹುಟ್ಟು ಹಬ್ಬದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ. 59ರ ವಯಸ್ಸಿನ ನಟಿಗೆ ಇಂಥದ್ದೊಂದು ವಿಡಿಯೋ ಶೇರ್ ಮಾಡಿ ವಿಶ್ ಮಾಡಬಹುದಾ? ಎಂದು ಕೆಲವರು ತರಾಟೆಗೆ ತೆಗೆದುಕೊಂಡಿದ್ದಾರೆ.
ದಿ ಲಾಸ್ಟ್ ಸಿಟಿ, ಗ್ರಾವಿಟಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಸಾಂಡ್ರಾ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಅಭಿಮಾನಿಗಳು ಮಾತ್ರ ಪರ ಮತ್ತು ವಿರೋಧದ ಕಾಮೆಂಟ್ ಹಾಕುವಲ್ಲಿ ಮುಗಿಬಿದ್ದಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]