ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋ ಗಳ ಸರದಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸ್ಟಾರ್ ಸುವರ್ಣ ವಾಹಿನಿಯು ಇದೀಗ ‘Huu ಅಂತೀಯಾ Uhuu ಅಂತೀಯಾ’ (Huu Antiya Uhuu Antiya) ಎಂಬ ಹೊಸ ಬಗೆಯ ವಿನೂತನ ಗೇಮ್ ಶೋಗೆ ಚಾಲನೆ ನೀಡಿದ್ದಾರೆ. ಇದನ್ನೂ ಓದಿ:ಹೊಸ ಅತಿಥಿ ಆಗಮನ- ‘ವೇದವಿದ್’ ಎಂದು ಮಗುವಿಗೆ ಹೆಸರಿಟ್ಟ ಯಾಮಿ ಗೌತಮ್
ಇಬ್ಬರು ಜನಪ್ರಿಯ ಆ್ಯಂಕರ್‌ಗಳನ್ನು ಹೊಂದಿರುವ ಈ ಶೋ ಒಟ್ಟು ಮೂರು ಸುತ್ತುಗಳನ್ನು ಹೊಂದಿರುತ್ತದೆ. ಸೆಲೆಬ್ರಿಟಿ ಸ್ಪರ್ಧಿಗಳಿಗೆ 6 ಲಕ್ಷ ರೂಪಾಯಿಗಳನ್ನು ಗೆಲ್ಲುವ ಅವಕಾಶವಿರುತ್ತದೆ. ಮೊದಲ ಸುತ್ತಿನಲ್ಲಿ ಸ್ಪರ್ಧಿಗಳು ಒಬ್ಬರ ನಂತರ ಒಬ್ಬರು ಆಡುತ್ತಾರೆ. ನಿರೂಪಕರು ನೀಡಿದ ಸತ್ಯ ಮತ್ತು ಸುಳ್ಳು ಸಂಗತಿಗಳನ್ನು ಸ್ಪರ್ಧಿಗಳು ಸರಿಯಾಗಿ ಆರಿಸಿದರೆ 1 ಲಕ್ಷ ರೂಪಾಯಿ ಗೆಲ್ಲುವ ಅವಕಾಶವಿದೆ.
ಇನ್ನು ಎರಡನೇ ಸುತ್ತಿನಲ್ಲಿ ಸ್ಪರ್ಧಿಗಳಿಗೆ ಆಹಾರವನ್ನು ಸೇವಿಸುವ ಸವಾಲಿರುತ್ತದೆ, ಮಜಾ ತುಂಬಿರುವ ಟ್ವಿಸ್ಟ್ ಗಳೊಂದಿಗೆ ಒಟ್ಟು 60 ಸೆಕೆಂಡ್‌ಗಳ ಸಮಯವನ್ನು ನೀಡಲಾಗುತ್ತದೆ. ಇದರಲ್ಲಿ ಗೆದ್ದ ವಿಜೇತರು 2 ಲಕ್ಷ ರೂಪಾಯಿಗಳನ್ನು ಗೆಲ್ಲಬಹುದು. ಮೂರನೇ ಹಾಗೂ ಕೊನೆಯ ಸುತ್ತಿನಲ್ಲಿ ಕೇವಲ ಇಬ್ಬರು ಸ್ಪರ್ಧಿಗಳು ತಮ್ಮ ಅದೃಷ್ಟದ ಆಧಾರದ ಮೇಲೆ ಆಡುತ್ತಾರೆ, ಗೆದ್ದ ಸ್ಪರ್ಧಿಗೆ 3 ಲಕ್ಷಗಳನ್ನು ಗೆಲ್ಲುವ ಅವಕಾಶವಿದೆ. ಇದು ಈ ಗೇಮ್ ಶೋನ ನಿಯಮಾವಳಿಗಳು.
ಇನ್ನು ‘Huu ಅಂತೀಯಾ Uhuu ಅಂತೀಯಾ’ ಶೋ ನ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿರೋದು ತುಳುನಾಡಿನ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ (Roopesh Shetty) ಮತ್ತು ನಟನೆ ಹಾಗೂ ತನ್ನ ಹಾಸ್ಯಗಾರಿಕೆಯ ಮೂಲಕ ನೋಡುಗರ ಮನಗೆದ್ದಿರುವ ಅರುಣ್ ಹರಿಹರನ್ (Arun Hariharan) ಈ ಶೋನ ರೂವಾರಿಗಳಾಗಿದ್ದಾರೆ. ಮೊದಲ ಗ್ರ‍್ಯಾಂಡ್ ಓಪನಿಂಗ್ ಸಂಚಿಕೆಯಲ್ಲಿ ಸೆಲೆಬ್ರಿಟಿ ಸ್ಫರ್ಧಿಗಳಾಗಿ ನಟ ಡಾರ್ಲಿಂಗ್ ಕೃಷ್ಣ, ನಟಿಯರಾದ ಮಿಲನಾ ನಾಗರಾಜ್ ಹಾಗೂ ಅಮೃತಾ ಅಯ್ಯಂಗಾರ್ ಭಾಗವಹಿಸಿದ್ದಾರೆ.
ಮನೆಯಲ್ಲಿ ಕುಳಿತು ವೀಕ್ಷಿಸುವ ವೀಕ್ಷಕರಿಗೂ ಐ ಫೋನ್ ಗೆಲ್ಲುವ ಅವಕಾಶವನ್ನು ವಾಹಿನಿಯು ನೀಡುತ್ತಿದೆ. ಮೊದಲ ಹಾಗು ಎರಡನೇ ಸಂಚಿಕೆಯ ಕೊನೆಯಲ್ಲಿ ಕೇಳುವ ಪ್ರಶ್ನೆಗೆ ಸರಿಯಾದ ಉತ್ತರವನ್ನು ನೀಡಿದರೆ ‘ಐ ಫೋನ್’ ಗೆಲ್ಲುವ ಅವಕಾಶವನ್ನು ನಿಮ್ಮದಾಗಿಸಿಕೊಳ್ಳಬಹುದು.
ನಿಮ್ಮನ್ನ ಮನರಂಜಿಸಲು ಬರುತ್ತಿದೆ ಹೊಚ್ಚ ಹೊಸ ಯೂನಿಕ್ ಸೆಲೆಬ್ರಿಟಿ ಗೇಮ್ ಶೋ ‘Huu ಅಂತೀಯಾ Uhuu ಅಂತೀಯಾ’ ಮೇ 19ರಿಂದ ಶೋ ಶುರುವಾಗಿದೆ. ಪ್ರತಿ ಭಾನುವಾರ ರಾತ್ರಿ 7 ಗಂಟೆಗೆ ಪ್ರಸಾರವಾಗಲಿದೆ.