ಬಾಲಿವುಡ್ ನಟ ರಿತೇಶ್ ದೇಶ್ಮುಖ್ಗೆ (Riteish Deshmukh) ಮರಾಠಿ ಚಿತ್ರರಂಗ ಕೈಹಿಡಿದಿದೆ. ವೇದ್ ಚಿತ್ರದ ಮೂಲಕ ಸಕ್ಸಸ್ ರುಚಿ ಕಂಡಿರುವ ನಟ ಈಗ ಮತ್ತೊಮ್ಮೆ ಮರಾಠಿ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ತೆಲುಗಿನ ಸಿನಿಮಾವೊಂದನ್ನು ಮರಾಠಿಗೆ ರಿಮೇಕ್ ಮಾಡಲು ನಟ ಹೊರಟಿದ್ದಾರೆ.
Advertisement
ಹೀರೋ ಮತ್ತು ವಿಲನ್ ಆಗಿ ರಿತೇಶ್ ಸೈ ಎನಿಸಿಕೊಂಡಿದ್ದಾರೆ. ಆದರೆ ಈಗೀಗ ಬಾಲಿವುಡ್ನಲ್ಲಿ ಬೇಡಿಕೆ ಕಮ್ಮಿಯಾಗಿದೆ. ಬಾಲಿವುಡ್ ಚಿತ್ರರಂಗಕ್ಕೆ ಸೌತ್ ಸಿನಿಮಾಗಳು ಠಕ್ಕರ್ ಕೊಟ್ಟು ನಿಲ್ಲುತ್ತಿವೆ. ಹಾಗಾಗಿಯೇ ರಿತೇಶ್ ಮರಾಠಿ ಸಿನಿಮಾರಂಗದಲ್ಲಿ ಗುರುತಿಸಿಕೊಳ್ತಿದ್ದಾರೆ.
Advertisement
Advertisement
2022ರಲ್ಲಿ ರಿತೇಶ್- ಜೆನಿಲಿಯಾ (Genelia) ನಟನೆಯ ‘ವೇದ್’ ಚಿತ್ರ ಮರಾಠಿಯಲ್ಲಿ ಸಕ್ಸಸ್ ಕಂಡಿತ್ತು. ತೆಲುಗಿನ ನಾಗಚೈತನ್ಯ-ಸಮಂತಾ ನಟನೆಯ ‘ಮಜಿಲಿ’ ಚಿತ್ರವನ್ನೇ ರಿತೇಶ್ ಮರಾಠಿಗೆ ರಿಮೇಕ್ ಮಾಡಿದ್ದರು. ಚಿತ್ರಕತೆ, ಸಂಭಾಷನೆ, ನಿರ್ದೇಶನ, ನಿರ್ಮಾಣ ಎಲ್ಲದರ ಹೊಣೆಯನ್ನು ರಿತೇಶ್ ನಿಭಾಯಿಸಿದ್ದರು. ರಿಯಲ್ ಕಪಲ್ ರೀಲ್ನಲ್ಲಿಯೂ ಕ್ಲಿಕ್ ಆಗಿದ್ದರು. ಈಗ ಮತ್ತೊಮ್ಮೆ ತೆಲುಗಿನ ಸಿನಿಮಾವೊಂದನ್ನು ಮರಾಠಿಗೆ ತರಲು ನಟ ಯೋಚಿಸಿದ್ದಾರೆ.
Advertisement
ನಾನಿ ನಟಿಸಿದ್ದ ‘ಹಾಯ್ ನಾನ್ನ’ ಚಿತ್ರವನ್ನು ರಿಮೇಕ್ ಮಾಡಲು ರಿತೇಶ್ ಮಾಡಲು ಮುಂದಾಗಿದ್ದಾರಂತೆ. ಅದಕ್ಕಾಗಿ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಈ ಚಿತ್ರದಲ್ಲಿ ಪತಿ ಜೊತೆ ಜೆನಿಲಿಯಾ ಇರುತ್ತಾರಾ? ಸದ್ಯದಲ್ಲೇ ಸಿನಿಮಾ ಬಗ್ಗೆ ಮಾಹಿತಿ ಸಿಗಲಿದೆ. ಇದನ್ನೂ ಓದಿ:ಮತ್ತೆ ಒಂದಾಯಿತು ಧನುಷ್ ಮತ್ತು ಪ್ರಕಾಶ್ ರೈ ಜೋಡಿ
ರಿತೇಶ್ ಅವರಂತೆಯೇ ಪತ್ನಿ ಜೆನಿಲಿಯಾ ಕೂಡ ಬೇರೇ ಭಾಷೆಗಳಲ್ಲಿ ನಟಿಸುತ್ತಾ ಇದ್ದಾರೆ. ಇದೀಗ ಕನ್ನಡದ ಸಿನಿಮಾ ‘ಜ್ಯೂನಿಯರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜನಾರ್ದನ್ ರೆಡ್ಡಿ ಪುತ್ರ ಕಿರೀಟಿ ಮತ್ತು ಶ್ರೀಲೀಲಾ (Sreeleela) ನಟನೆಯ ಸಿನಿಮಾದಲ್ಲಿ ಜೆನಿಲಿಯಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಹಿಂದೆ ಕೂಡ ‘ಸತ್ಯ ಇನ್ ಲವ್’ ಚಿತ್ರದಲ್ಲಿ ಶಿವಣ್ಣ ಜೊತೆ ಜೆನಿಲಿಯಾ ನಟಿಸಿದ್ದಾರೆ.