ರಾಷ್ಟ್ರ ಪ್ರಶಸ್ತಿ ವಿಜೇತ ರಿಷಬ್ ಶೆಟ್ಟಿ (Rishab Shetty) ಅವರು ‘ಕಾಂತಾರ ಚಾಪ್ಟರ್ 1’ರ (Kantara Chapter 1) ಸಿನಿಮಾದಲ್ಲಿ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಕುಂದಾಪುರದಲ್ಲಿ ನಟ ರಿಷಬ್ ಶೆಟ್ಟಿ ಮೀನಿಗೆ ಗಾಳ ಹಾಕುತ್ತಿರುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
‘ಕಾಂತಾರ ಚಾಪ್ಟರ್ 1’ಕ್ಕಾಗಿ ಇಡೀ ಚಿತ್ರತಂಡ ಕುಂದಾಪುರದಲ್ಲಿಯೇ ಬೀಡು ಬಿಟ್ಟಿದೆ. ಬಿಡುವಿನ ಸಮಯದಲ್ಲಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ತಮ್ಮ ತಂಡದ ಜೊತೆ ಸೇರಿಕೊಂಡು ಕಾಡು ಮೇಡು ಅಲೆದುಕೊಂಡು ಮೀನಿಗೆ ಗಾಳ ಹಾಕುವ ಕಾರ್ಯಕ್ರಮದಲ್ಲಿ ನಿರತರಾಗಿದ್ದಾರೆ. ಇದನ್ನೂ ಓದಿ:ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ವಿಶ್ವಂಭರ’ ಸಿನಿಮಾದಲ್ಲಿ ಭಜರಂಗಿ ಲೋಕಿ
View this post on Instagram
ಇನ್ನೂ ರಾತ್ರಿ ಹೊತ್ತು ರಿಷಬ್ ಮೀನಿಗೆ ಗಾಳ ಹಾಕುತ್ತಿರುವ ವಿಶೇಷ ಫೋಟೋವೊಂದನ್ನು ಡಿಓಪಿ ಅರವಿಂದ್ ಕಶ್ಯಪ್ ಹಂಚಿಕೊಂಡು, ಇವರಿಗೆ ಮೀನು ಸಿಗ್ಲಿಲ್ಲ. ಆದರೆ ಎರಡು ರಾಷ್ಟ್ರ ಪ್ರಶಸ್ತಿ ಬುಟ್ಟಿಗೆ ಬಿತ್ತು ಎಂದು ಫೋಟೋಗೆ ಅಡಿಬರಹ ನೀಡಿದ್ದಾರೆ. ರಿಷಬ್ ಫೋಟೋಗೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.
ಅಂದಹಾಗೆ, ಹೊಂಬಾಳೆ ಸಂಸ್ಥೆಯ ನಿರ್ಮಾಣದ ಈ ಚಿತ್ರವು ಮುಂದಿನ ವರ್ಷ ರಿಲೀಸ್ ಆಗಲಿದೆ. ರಿಷಬ್‌ರನ್ನು ನೋಡಲು ಅಭಿಮಾನಿಗಳು ಕಾತರದಿಂದ ಎದುರು ನೋಡ್ತಿದ್ದಾರೆ.