ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಅವರು ‘ಕಾಂತಾರ’ (Kantara) ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿ ಮಂಗಳೂರಿಗೆ ವಾಪಸ್ ಆಗಿದ್ದಾರೆ. ಅವರಿಗೆ ಅದ್ಧೂರಿಯಾಗಿ ಸ್ವಾಗತ ಸಿಕ್ಕಿದೆ. ಈ ವೇಳೆ, ಅವರು ದೈವರಾಧನೆಯ ಬಗ್ಗೆ ಮಾತನಾಡಿದ್ದಾರೆ. ದೈವದ ಆಶೀರ್ವಾದ ಇಲ್ಲದೇ ಇದ್ದರೆ ನಾವು ಹೋಗಲು ಸಾಧ್ಯವೇ ಇರಲಿಲ್ಲ ಎಂದು ರಿಷಬ್ ಸಂತಸ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಸಂಜು ವೆಡ್ಸ್ ಗೀತಾ 2 : ಮಂಗ್ಲಿ ಹಾಡಿಗೆ ಸೊಂಟ ಬಳುಕಿಸಿದ ರಾಗಿಣಿ
ರಿಷಬ್ ಶೆಟ್ಟಿ ಮಾತನಾಡಿ, ನ್ಯಾಷನಲ್ ಅವಾರ್ಡ್ ನಮ್ಮ ಇಡೀ ತಂಡಕ್ಕೆ ಸಲ್ಲಬೇಕು. ಈ ಚಿತ್ರವು ದೈವದ ಬಗ್ಗೆ ಹಾಗೂ ದೈವ ನರ್ತಕರ ಸಮುದಾಯದ ಬಗ್ಗೆ ಇರುವ ಸಿನಿಮಾವಾಗಿದೆ. ನ್ಯಾಷನಲ್ ಅವಾರ್ಡ್ ಕ್ರೆಡಿಟ್ ಅನ್ನು ದೈವ ನರ್ತಕ ಸಮುದಾಯಕ್ಕೆ ಸೇರಬೇಕು. ದೈವದ ಆಶೀರ್ವಾದ ಇಲ್ಲದೇ ಇದ್ದರೆ ನಾವು ಈ ಮಟ್ಟಕ್ಕೆ ಹೋಗಲು ಸಾಧ್ಯವೇ ಇರಲಿಲ್ಲ. ದೈವದ ಆಶೀರ್ವಾದದಿಂದ ಕಾಂತಾರ ಚಿತ್ರ ಇಲ್ಲಿ ತನಕ ಬಂದಿದೆ. ಈ ಪ್ರಶಸ್ತಿಯನ್ನು ದೈವದ ಪಾದಕ್ಕೆ ಸಲ್ಲಿಸುತ್ತೇನೆ ಎಂದು ಮಾತನಾಡಿದ್ದಾರೆ. ‘ಕಾಂತಾರ’ ಸಿನಿಮಾ ಮಾಡುವಾಗ ಅವಾರ್ಡ್ ಬರುತ್ತೆ ಎಂದು ಅಂದುಕೊಂಡಿರಲಿಲ್ಲ. ಎಲ್ಲಾ ಅಭಿಮಾನಿಗಳ ಪ್ರೀತಿಯಿಂದ ಸಾಧ್ಯವಾಗಿದೆ ಎಂದಿದ್ದಾರೆ.
Advertisement
Advertisement
ಈ ವೇಳೆ, ಕಾಂತಾರ ಚಾಪ್ಟರ್ 1ರ (Kantara Chapter 1) ಬಗ್ಗೆ ಮಾತನಾಡಿ, ಕಾಂತಾರ ಶೂಟಿಂಗ್ ನಡೆಯುತ್ತಿದೆ. ಆದಷ್ಟು ಬೇಗ ನಿರ್ಮಾಪಕರು ರಿಲೀಸ್ ಡೇಟ್ ಅನೌನ್ಸ್ ಮಾಡುತ್ತಾರೆ. ‘ಕಾಂತಾರ 1’ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ. ಈ ಹಿಂದೆ ‘ಕಾಂತಾರ’ ಚಿತ್ರ ನೋಡಿ ಅದೆಷ್ಟು ಹೆಮ್ಮೆಪಟ್ಟಿದ್ದೀರೋ ಚಿತ್ರದ ಪ್ರೀಕ್ವೆಲ್‌ಗೆ ಅದಕ್ಕಿಂತ ಹೆಚ್ಚು ಹೆಮ್ಮೆ ಪಡುತ್ತೀರಾ ಎಂದಿದ್ದಾರೆ.
Advertisement
Advertisement
‘ಕಾಂತಾರ’ ಮಂಗಳೂರಿನಲ್ಲಿ ಶುರುವಾದ ಸಿನಿಮಾ ಆಗಿದೆ. ಪ್ರಶಸ್ತಿ ತಗೊಂಡು ಇಲ್ಲಿಗೆ ಬರುವ ರೀತಿ ಆಗಿದೆ. ಇದು ನನ್ನ ಪುಣ್ಯ ಎಂದು ಭಾವಿಸುತ್ತೇನೆ. ಇಲ್ಲಿಯೇ ಕಥೆ ಶುರುವಾಗಿದ್ದು, ಪ್ರಶಸ್ತಿಯೂ ಇಲ್ಲಿಗೆ ಬಂದಿದೆ ಎಂದಿದ್ದಾರೆ. ಕಾಂತಾರದ ಇಡೀ ತಂಡವಾಗಿ ನಾವು ಕುಂದಾಪುರದಲ್ಲಿ ನೆಲೆಸಿದ್ದೇವೆ. ಈ ಪ್ರಶಸ್ತಿಯನ್ನ ದೈವಕ್ಕೆ, ದೈವ ನರ್ತಕರಿಗೆ ಹಾಗೂ ಅಪ್ಪು ಸರ್‌ಗೆ ಸಮರ್ಪಿಸುತ್ತೇನೆ. ಯಾವ ಮೂಲದಿಂದ ಬಂದಿದ್ದೇವೋ ಅದನ್ನ ಮರೆಯಬಾರದು ಎಂದು ರಿಷಬ್ ಸ್ಮರಿಸಿದ್ದಾರೆ. ಈ ಪ್ರಶಸ್ತಿಯನ್ನ ದೈವದ ಪಾದಕ್ಕೆ ಇಟ್ಟು ನನ್ನ ಕೆಲಸ ಮುಂದುವರೆಸುತ್ತೇನೆ ಎಂದಿದ್ದಾರೆ.