ರಾಕಿಂಗ್ ಸ್ಟಾರ್ ಯಶ್‌ಗೆ (Yash) ಇಂದು (ಜ.8) ಹುಟ್ಟುಹಬ್ಬದ (Birthday) ಸಂಭ್ರಮವಾಗಿದ್ದು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿವೆ. ಇದೀಗ ನಟನ ಬರ್ತ್‌ಡೇ ಪ್ರಯುಕ್ತ ರಿಲೀಸ್ ಆಗಿರುವ ‘ಟಾಕ್ಸಿಕ್’ ಗ್ಲಿಂಪ್ಸ್ ನೋಡಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ:ದರ್ಶನ್ ಸರ್‌ಗೆ ರೆಗ್ಯೂಲರ್ ಬೇಲ್ ಆಗಿರೋದು ಖುಷಿ: ರಚಿತಾ ರಾಮ್
Advertisement
ಯಶ್ ಹುಟ್ಟುಹಬ್ಬಕ್ಕೆ ರಿಷಬ್ ಶೆಟ್ಟಿ ವಿಶೇಷವಾಗಿ ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದಾರೆ. ‘ಟಾಕ್ಸಿಕ್’ (Toxic) ಬರ್ತ್‌ಡೇ ಪೀಕ್ ಗ್ಲಿಂಪ್ಸ್ ನೋಡಿ ಬೆರಗುಗೊಳಿಸುವಂತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಟಾಕ್ಸಿಕ್’ ಸಿನಿಮಾದ ತುಣುಕು ಶೇರ್ ಮಾಡಿ, ಹುಟ್ಟುಹಬ್ಬದ ಶುಭಾಶಯಗಳು ಯಶ್ ಸರ್ ಎಂದು ರಿಷಬ್ ಬರೆದುಕೊಂಡಿದ್ದಾರೆ.
Advertisement
#ToxicTheMovie Birthday Peek looks Stunning. 😍https://t.co/LA9tnxsA5R
Happy Birthday to @TheNameIsYash Sir ❤️🔥 pic.twitter.com/7TuBkz1tim
— Rishab Shetty (@shetty_rishab) January 8, 2025
Advertisement
ಗೋವಾದಲ್ಲಿ ಮಧ್ಯರಾತ್ರಿ ಯಶ್ ಕೇಕ್ ಕತ್ತರಿಸಿ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ್ದಾರೆ. ಪತ್ನಿ ರಾಧಿಕಾ ಮತ್ತು ಮಕ್ಕಳೊಂದಿಗೆ ಬರ್ತ್‌ಡೇ ಆಚರಿಸಿ ಯಶ್ ಖುಷಿಪಟ್ಟಿದ್ದಾರೆ. ನಟನ ಆಪ್ತ ಪಾನಿ ಪುರಿ ಕಿಟ್ಟಿ, KVN ಸಂಸ್ಥೆಯ ರೂವಾರಿ ವೆಂಕಟ್ ಸೇರಿದಂತೆ ಅನೇಕರು ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿ ಶುಭಕೋರಿದ್ದಾರೆ.
Advertisement
ಈ ಮೊದಲೇ ತಾವು ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ. ಅಭಿಮಾನಿಗಳಿಗೆ ನೀವು ಇರುವ ಕಡೆಯಿಂದಲೇ ಹಾರೈಸಿ ಎಂದು ನಟ ತಿಳಿಸಿದ್ದರು. ಆದರೆ ಇದೀಗ ‘ಟಾಕ್ಸಿಕ್’ ಲುಕ್‌ನಿಂದ ಫ್ಯಾನ್ಸ್‌ಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಫ್ಯಾನ್ಸ್ ನಿರೀಕ್ಷೆಗೆ ಅವರು ನಿರಾಸೆ ಮಾಡಿಲ್ಲ. ರಾಕಿ ಭಾಯ್ ಬರ್ತ್ಡೇ ಪ್ರಯುಕ್ತ 59 ಸೆಕೆಂಡ್ ಗ್ಲಿಂಪ್ಸ್ ರಿವೀಲ್ ಆಗಿದ್ದು, ಡ್ರಗ್ಸ್ ಮಾಫಿಯಾ ಕುರಿತ ಚಿತ್ರವಾಗಿದೆ. ರಿಲೀಸ್ ಆದ ಗ್ಲಿಂಪ್ಸ್‌ನಲ್ಲಿ ಕಲರ್‌ಫುಲ್ ಸೆಟ್‌ನಲ್ಲಿ ನಟನ ಸ್ಟೈಲೀಶ್ ವಾಕ್, ಹಾಟ್ ಮ್ಯಾನರಿಸಮ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಇನ್ನೂ ‘ಟಾಕ್ಸಿಕ್’ ಸಿನಿಮಾವು ಬೆಂಗಳೂರಿನ HMT ಮೈದಾನದಲ್ಲಿ ಮೊದಲ ಹಂತದ ಚಿತ್ರೀಕರಣ ಶುರುವಾದ ಬಳಿಕ ಮುಂಬೈ, ಗೋವಾ, ಮಂಗಳೂರಿನಲ್ಲಿ ಶೂಟಿಂಗ್ ನಡೆಸಿದೆ ಚಿತ್ರತಂಡ.
ಈ ಸಿನಿಮಾವನ್ನು KVN ಪ್ರೊಡಕ್ಷನ್ಸ್ ಹಾಗೂ ಯಶ್ ನಿರ್ಮಾಣದ ಸಂಸ್ಥೆ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ. ಚಿತ್ರಕ್ಕೆ ಗೀತು ಮೋಹನ್‌ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಇನ್ನೂ ಯಶ್ ನಟನೆಯ 19ನೇ ಸಿನಿಮಾ ಟಾಕ್ಸಿಕ್ ಚಿತ್ರವಾಗಿದ್ದು, ಕೆಜಿಎಫ್ 2 ಸಕ್ಸಸ್ ಬಳಿಕ ಈ ಸಿನಿಮಾ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.