ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಇಂದು (ಅ.8) ದೆಹಲಿಯಲ್ಲಿ ‘ಕಾಂತಾರ’ (Kantara) ಚಿತ್ರದಲ್ಲಿನ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ್ದಾರೆ. ಇದೀಗ ಈ ಸಂಭ್ರಮವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕಟೀಲು ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆದ ನಟ ಶ್ರೀಮುರಳಿ
View this post on Instagram
ಕನ್ನಡದ ಚಿತ್ರರಂಗದ ಕೀರ್ತಿಯ ಕ್ಷಣ. ‘ಕಾಂತಾರ’ ಸಿನಿಮಾಗಾಗಿ ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಲು ಖುಷಿಯಿದೆ. ‘ಕಾಂತಾರ’ ಚಿತ್ರದ ಈ ಪ್ರಯಾಣದ ಪ್ರತಿಯೊಂದು ಹಂತವು ಸ್ಪೆಷಲ್ ಆಗಿತ್ತು. ಇನ್ನೂ ನಮ್ಮ ಕೆಲಸವನ್ನು ಗುರುತಿಸಿದ ತೀರ್ಪುಗಾರರಿಗೆ ಧನ್ಯವಾದಗಳು ಎಂದು ರಿಷಬ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.
View this post on Instagram
ಇನ್ನೂ ‘ಕಾಂತಾರ’ ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಅವಾರ್ಡ್ ಸ್ವೀಕರಿಸಿದ್ದಾರೆ ರಿಷಬ್. ಈ ಚಿತ್ರಕ್ಕೆ ಅತ್ಯುತ್ತಮ ಮನರಂಜನಾ ಸಿನಿಮಾ ವಿಭಾಗದಲ್ಲಿಯೂ ಪ್ರಶಸ್ತಿ ಸಿಕ್ಕಿದೆ.