ಸ್ಯಾಂಡಲ್‌ವುಡ್ ನಟ ರಿಷಬ್ ಶೆಟ್ಟಿ(Rishab Shetty) ಕಾಂತಾರ ಚಿತ್ರದ ಮೂಲಕ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಹೆಗ್ಗಳಿಕೆಯ ಜೊತೆಗೆ ಅವಕಾಶಗಳ ಮಹಾಪೂರವೇ ಹರಿದು ಬರುತ್ತಿದೆ. ಹೀಗಿರುವಾಗ ರಿಷಬ್ ಶೆಟ್ಟಿ ಸಕ್ಸಸ್ ಸೀಕ್ರೆಟ್ ಬಗ್ಗೆ ಅವರ ತಂದೆ ಭಾಸ್ಕರ್ ಶೆಟ್ಟಿ(Bhaskar Shetty) ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
`ಕಾಂತಾರ’ (Kantara Film) ಚಿತ್ರದ ಸಕ್ಸಸ್ ಅಲೆಗೆ ಚಿತ್ರರಂಗವೇ ಶೇಕ್ ಆಗಿದೆ. ರಿಷಬ್ ಕಥೆಗೆ ಮತ್ತು ನಟನೆಗೆ ಸಿನಿಪ್ರೇಕ್ಷಕರು ಫಿದಾ ಆಗಿದ್ದಾರೆ. ಪರಭಾಷೆಗಳಿಂದಲೂ ಶೆಟ್ರಿಗೆ ಭರ್ಜರಿ ಆಫರ್ಸ್ ಅರಸಿ ಬರುತ್ತಿದೆ. ಇದೀಗ ಈ ಸಕ್ಸಸ್ ಹಿಂದಿರುವ ಸೀಕ್ರೆಟ್ ಬಗ್ಗೆ ಅವರ ತಂದೆ ಭಾಸ್ಕರ್ ಶೆಟ್ಟಿ ರಿವೀಲ್ ಮಾಡಿದ್ದಾರೆ.
ಪ್ರತಿಭಾವಂತ ನಟ ರಿಷಬ್ ಶೆಟ್ಟಿ ಶ್ರಮಜೀವಿ ಅದರಲ್ಲಿ ಎರಡು ಮಾತಿಲ್ಲ. ರಿಷಬ್ ಅವರ ತಂದೆ ಸಾಕಷ್ಟು ವರ್ಷಗಳಿಂದ ಜ್ಯೋತಿಷ್ಯ ಕಾರ್ಯ ಮಾಡುತ್ತಿದ್ದರು. ಇದೀಗ ತಮ್ಮ ಮಗನ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ. 2021ರಿಂದ 16 ವರ್ಷ ರಿಷಬ್‌ಗೆ ಗಜಕೇಸರಿ ಯೋಗ ಇದೆ ಎಂದು ಅವರು ಹೇಳಿದ್ದಾರೆ. ಈ ಗಜಕೇಸರಿ ಯೋಗದಿಂದಲೇ ಶ್ರಮದ ಜೊತೆ ಸಕ್ಸಸ್ ಕೂಡ ಸಿಕ್ಕಿದೆ ಎಂಬುದನ್ನ ರಿಷಬ್ ತಂದೆ ಮಾತನಾಡಿದ್ದಾರೆ. ಇದನ್ನೂ ಓದಿ:ಆಮದು ಮಾಡಿಕೊಂಡ ಧರ್ಮಗಳು ಎಂದು ಚೇತನ್ ಮತ್ತೆ ಕಿಡಿ
ಸದ್ಯ ರಿಷಬ್ ಶೆಟ್ಟಿಗೆ ಟಾಲಿವುಡ್ ಸ್ಟಾರ್ ನಿರ್ಮಾಪಕ ಅಲ್ಲು ಅರವಿಂದ್ ಅವರು ತಮ್ಮ ಬ್ಯಾನರ್ ನಟಿಸುವಂತೆ ಆಫರ್ ಮಾಡಿದ್ದಾರೆ. ಅದಕ್ಕೆ ರಿಷಬ್ ಕೂಡ ಸಮ್ಮತಿ ಸೂಚಿಸಿದ್ದಾರೆ.