ನವದೆಹಲಿ: ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದ ತನಿಖೆ ನಡೆಸಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‍ಸಿಬಿ) ಇಂದು ಮುಂಬೈನ ವಿಶೇಷ ಕೋರ್ಟ್‍ಗೆ ಚಾರ್ಜ್‍ಶೀಟ್ ಸಲ್ಲಿಸಿದ್ದು, ಗೆಳತಿ ರಿಯಾ ಚಕ್ರವರ್ತಿ ಮಾದಕ ವಸ್ತುಗಳ ಸೇವನೆಗೆ ಕುಮ್ಮಕ್ಕು ನೀಡಿದ್ದರು ಎಂದು ಆರೋಪಿಸಿದೆ.
Advertisement
ಪ್ರಕರಣ ಸುದೀರ್ಘ ತನಿಖೆಯ ಬಳಿಕ ಈಗ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಿದ್ದು, ಚಾರ್ಜ್‍ಶೀಟ್‍ನಲ್ಲಿ, ಸುಶಾಂತ್ ಸಿಂಗ್ ರಜಪೂತ್ ಗೆಳತಿ ರಿಯಾ ಚಕ್ರವರ್ತಿ ತನ್ನ ಸಹೋದರ ಶೋವಿಕ್ ಸೇರಿದಂತೆ ಇತರ ಆರೋಪಿಗಳಿಂದ ಹಲವಾರು ಬಾರಿ ಗಾಂಜಾ ಖರೀದಿಸಿ ಅದನ್ನು ನಟ ಸುಶಾಂತ್ ಸಿಂಗ್‍ಗೆ ನೀಡಿದ್ದಾಳೆ ಎಂದು ಎನ್‍ಸಿಬಿ ಉಲ್ಲೇಖಿಸಿದೆ. ಇದನ್ನೂ ಓದಿ: ಕಬಿನಿಯಿಂದ 38 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ- 50ಕ್ಕೂ ಹೆಚ್ಚು ಹಳ್ಳಿಗಳ ಪ್ರಮುಖ ಮಾರ್ಗ ಬಂದ್
Advertisement
Advertisement
ರಿಯಾ ಚಕ್ರವರ್ತಿ, ಶೋವಿಕ್ ಸೇರಿದಂತೆ 35 ಆರೋಪಿಗಳ ವಿರುದ್ಧ 38 ಆರೋಪಗಳನ್ನು ಎನ್‍ಸಿಬಿ ಹೊರಿಸಿದ್ದು, ಎಲ್ಲಾ ಆರೋಪಿಗಳು ಮಾರ್ಚ್ 2020 ರಿಂದ ಡಿಸೆಂಬರ್ 2020 ರವರೆಗೆ ಪರಸ್ಪರ ಸಂಚು ರೂಪಿಸಿ ಮಾದಕ ವಸ್ತುಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದಾರೆ. ಕಳ್ಳಸಾಗಣೆ ಮೂಲಕ ಮಾರಾಟ ಮಾಡಿದ್ದಾರೆ. ಅಲ್ಲದೇ ಹಲವು ಬಾಲಿವುಡ್ ನಟರಿಗೆ ಮತ್ತು ಮುಂಬೈನ ಹೈ ಪ್ರೊಪೈಲ್ ಜನರಿಗೆ ಇವರು ಡ್ರಗ್ ಮಾರಾಟ ಮಾಡಿದ್ದಾರೆ ಎಂದು ಎನ್‍ಸಿಬಿ ತಿಳಿಸಿದೆ. ಇದನ್ನೂ ಓದಿ: ಸಹೋದರರಿಂದ 5 ಸುತ್ತು ಗುಂಡಿನ ದಾಳಿ- ಪಾರಾದ ಚಿತ್ರನಟ ಶಿವರಂಜನ್ ಹೇಳಿದ್ದೇನು?
Advertisement
ಆರೋಪಿಗಳು ಮುಂಬೈನಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆಗೆ ಹಣ ನೀಡಿದ್ದು ಮಾತ್ರವಲ್ಲದೇ ಗಾಂಜಾ, ಚರಸ್, ಕೊಕೇನ್‍ನಂತಹ ಮಾದಕ ದ್ರವ್ಯಗಳನ್ನು ಬಳಸಿದ್ದಾರೆ. ಅಕ್ರಮ ಸಾಗಾಣಿಕೆಗೆ ಹಣಕಾಸು ಮತ್ತು ಅಪರಾಧಿಗಳಿಗೆ ಆಶ್ರಯ ನೀಡಿದ್ದಕ್ಕಾಗಿ ಈ ಎಲ್ಲಾ ಆರೋಪಿಗಳ ವಿರುದ್ಧ ಸೆಕ್ಷನ್ 27 ಮತ್ತು 27ಎ, ಸೆಕ್ಷನ್ 28 ಮತ್ತು ಸೆಕ್ಷನ್ 29ರ ಅಡಿಯಲ್ಲಿ ಪ್ರಕರಣ ಅಡಿಯಲ್ಲಿ ಶಿಕ್ಷೆಗೆ ಮನವಿ ಮಾಡಿದೆ. ಜುಲೈ 27 ರಂದು ಈ ಪ್ರಕರಣ ವಿಚಾರಣೆಯನ್ನು ನಿಗದಿಯಾಗಿದ್ದು ವಿಶೇಷ ನ್ಯಾಯಾಧೀಶ ವಿ.ಜಿ.ರಘುವಂಶಿ ಅವರು ವಿಚಾರಣೆ ನಡೆಸಲಿದ್ದಾರೆ.