ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಇದೀಗ ರೇಣುಕಾಸ್ವಾಮಿ ಕೊಲೆ (Renukaswamy Murder Case) ವಿಚಾರವಾಗಿ ಅರೆಸ್ಟ್ ಆಗಿದ್ದಾರೆ. ಈ ಬೆನ್ನಲ್ಲೇ ದರ್ಶನ್ ಜೊತೆ ಹಲವು ಸಿನಿಮಾಗಳಲ್ಲಿ ನಟಿಸಿದ ಖಳನಟ ರವಿಚೇತನ್ (Actor Ravi Chethan) ಇದೀಗ ರೇಣುಕಾಸ್ವಾಮಿ ಕೊಲೆ ಕೇಸ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ದರ್ಶನ್ ಪ್ರಕರಣ ವಿಚಾರ ನಂಬೋಕೆ ಆಗ್ತಿಲ್ಲ. ಯಾರೇ ಮಾಡಿದ್ರು ತಪ್ಪು ತಪ್ಪೇ. ನನಗೆ ದರ್ಶನ್ 25 ವರ್ಷಗಳಿಂದ ಗೊತ್ತು. ಆದರೆ ನಾನು ನೋಡಿರುವ ದರ್ಶನ್ ಇವರಲ್ಲ. ಈಗ ಅವರು ಆರೋಪಿಯಷ್ಟೇ, ಅಪರಾಧಿ ಅಲ್ಲ ಎಂದಿದ್ದಾರೆ. ಎಲ್ಲರಿಗೂ ಈ ವಿಷ್ಯ ಕೇಳಿ ಹೇಗೆ ಶಾಕ್ ಆಯ್ತೋ, ನನಗೂ ಶಾಕ್ ಆಯ್ತು ಎಂದಿದ್ದಾರೆ ನಟ ರವಿಚೇತನ್. ಇದನ್ನೂ ಓದಿ:ಲ್ಯಾಂಬೋರ್ಗಿನಿ ತಗೋಳೋಕೆ ದರ್ಶನ್‌ಗೆ ಅಡ್ವಾನ್ಸ್ ಕೊಟ್ಟಿದ್ದೇ ನಾನು: ಉಮಾಪತಿ
ಹಲವು ಚಿತ್ರಗಳಲ್ಲಿ ಅವರ ಜೊತೆ ಅಭಿನಯಿಸಿದ್ದೇನೆ. ಆದರೆ ಸೆಟ್‌ನಲ್ಲಿ ಹೀಗಿದ್ದವರಲ್ಲ, ದರ್ಶನ್ ಸ್ನೇಹ ಜೀವಿ ಎಲ್ಲರೊಂದಿಗೆ ಬೆರೆಯುತ್ತಿದ್ದರು. ಲಾಕ್‌ಡೌನ್ ಅದೆಷ್ಟೋ ಜನರಿಗೆ ಅವರು ಸಹಾಯ ಮಾಡಿದ್ದಾರೆ. ಸಿನಿಮಾಗಳಲ್ಲಿ ನಾನು ಅವರ ಜೊತೆ ಫೈಟ್ ಮಾಡಿದಷ್ಟು ಯಾರ ಜೊತೆಯೂ ಮಾಡಿಲ್ಲ. ನನಗೂ ಅದೆಷ್ಟೋ ಬಾರಿ ಪೆಟ್ಟಾದಾಗ ದರ್ಶನ್ ನನ್ನ ಕಡೆ ನಿಗಾ ವಹಿಸಿದ್ದಾರೆ ಎಂದು ರವಿಚೇತನ್ ಮಾತನಾಡಿದ್ದಾರೆ. ಇದನ್ನೂ ಓದಿ:Darshan Case: ಸೆಲೆಬ್ರಿಟಿ ಅಂತಲ್ಲ, ತಪ್ಪು ಯಾರೇ ಮಾಡಿದ್ರು ತಪ್ಪೇ- ಉಮಾಪತಿ ರಿಯಾಕ್ಷನ್
ಇನ್ನೂ ‘ಕುರುಕ್ಷೇತ್ರ’ ಸಿನಿಮಾ ಸೆಟ್‌ನಲ್ಲಿ ಪವಿತ್ರಾ ಗೌಡ ಬಂದಾಗ ಫ್ರೆಂಡ್ ಅಂತ ಪರಿಚಯ ಮಾಡಿಸಿದ್ದರು. ಅವರು ಕೂಡ ನಟಿಯೇ, ಆದರೆ ದರ್ಶನ್ ವೈಯಕ್ತಿಕ ವಿಚಾರ ಬಗ್ಗೆ ನಮಗೆ ತಿಳಿದಿಲ್ಲ. ಸೆಟ್‌ನಲ್ಲಿ ಅವರು ಎಂದೂ ಈ ಬಗ್ಗೆ ಮಾತನಾಡುತ್ತಿರಲಿಲ್ಲ.
ರೇಣುಕಾಸ್ವಾಮಿ ಬರ್ಬರ ಹತ್ಯೆ ನೋಡಿದಾಗ ಅಯ್ಯೋ ಅನ್ನಿಸುತ್ತದೆ. ಯಾರೇ ಹೀಗೆ ಮಾಡಿದ್ರೂ ತಪ್ಪು ತಪ್ಪೇ. ಈ ರೀತಿ ಯಾರೇ ಮಾಡಿದ್ರೂ ಶಿಕ್ಷೆ ಆಗಲೇಬೇಕು ಎಂದು ಕಾಟೇರ ನಟ ರವಿಚೇತನ್ ಮಾತನಾಡಿದ್ದಾರೆ.