ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಮಗಳ ಆರೈಕೆಗಾಗಿ ಪತ್ನಿ ದೀಪಿಕಾಗೆ ಸಾಥ್ ನೀಡುತ್ತಿದ್ದಾರೆ. ಇದರೊಂದಿಗೆ ಹೊಸ ಸಿನಿಮಾಗಾಗಿ ತಯಾರಿ ಕೂಡ ಮಾಡಿಕೊಳ್ತಿದ್ದಾರೆ. ಇದರ ನಡುವೆ ‘ಡಾನ್ 3’ ಸಿನಿಮಾಗೆ (Don 3) ಶೂಟಿಂಗ್ ಮುಹೂರ್ತ ಫಿಕ್ಸ್ ಆಗಿದೆ. ಇದನ್ನೂ ಓದಿ:ಮತ್ತೆ ಪ್ರೀತಿಯಲ್ಲಿ ಬಿದ್ರಾ ನಟಿ?- ನಿರ್ಮಾಪಕನ ತೋಳಲ್ಲಿ ತಲೆಯಿಟ್ಟು ಮಲಗಿದ ಸಮಂತಾ
ರಣವೀರ್ ನಟನೆಯ ಬಹುನಿರೀಕ್ಷಿತ ‘ಡಾನ್ 3’ ಚಿತ್ರ ಕಾರಣಾಂತರಗಳಿಂದ ತಡವಾಗ್ತಿದೆ. ಕಿಯಾರಾ ಪ್ರೆಗ್ನೆಂಟ್ ಆಗಿರೋ ಹಿನ್ನೆಲೆ ಡಾನ್ 3 ಚಿತ್ರದಿಂದ ನಿರ್ಗಮಿಸಿದ್ದರು. ಈ ಬೆನ್ನಲ್ಲೇ ಕೃತಿ ಸನೋನ್ ನಾಯಕಿಯಾಗಿ ಆಯ್ಕೆ ಮಾಡಿಕೊಂಡರು. ಈಗ ಸೆಪ್ಟೆಂಬರ್‌ನಲ್ಲಿ ಸಿನಿಮಾ ಶೂಟಿಂಗ್ ಶುರು ಮಾಡಲು ಚಿತ್ರತಂಡ ನಿರ್ಧರಿಸಿದೆ. ಅದಕ್ಕಾಗಿ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಇದನ್ನೂ ಓದಿ:ರಾಜಕಾರಣಿಗಳ ಜೊತೆ ಡೇಟಿಂಗ್‌ಗೆ ಬಾ – ಟಾರ್ಚರ್ ಕೊಟ್ಟವನ ಚಳಿ ಬಿಡಿಸಿದ ನಮ್ರತಾ
‘ಡಾನ್ 3’ ಚಿತ್ರದಲ್ಲಿ ರಣವೀರ್ ಸಿಂಗ್ ಮುಂದೆ ವಿಕ್ರಾಂತ್ ಮಾಸ್ಸಿ ಅಬ್ಬರಿಸಲಿದ್ದಾರೆ. ಈ ಇಬ್ಬರೂ ಸ್ಟಾರ್ ನಟರಿಗೆ ಫರ್ಹಾನ್ ಅಖ್ತರ್ ನಿರ್ದೇಶನ ಮಾಡಲಿದ್ದಾರೆ. ಸದ್ಯದಲ್ಲೇ ಚಿತ್ರದ ಬಗ್ಗೆ ಮತ್ತಷ್ಟು ಮಾಹಿತಿ ಹೊರಬೀಳಲಿದೆ.