ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಅರೆಸ್ಟ್ ಆಗಿದ್ದಾರೆ. ದರ್ಶನ್ (Darshan) ಪ್ರಕರಣದ ಬಗ್ಗೆ ಈಗಾಗಲೇ ಸುದೀಪ್, ಶಿವಣ್ಣ, ಸಂಜನಾ ಗಲ್ರಾನಿ, ಸ್ಪೂರ್ತಿ ವಿಶ್ವಾಸ್ ಸೇರಿದಂತೆ ಅನೇಕರು ಮಾತನಾಡಿದ್ದಾರೆ. ಇದೀಗ ರಂಗಾಯಣ ರಘು ಮಾರ್ಮಿಕವಾಗಿ ದರ್ಶನ್ ಘಟನೆ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ:ಕ್ರೂರತ್ವ ಇರುವ ವ್ಯಕ್ತಿತ್ವ ಅವರದಲ್ಲ: ದರ್ಶನ್ ಪ್ರಕರಣದ ಬಗ್ಗೆ ಸ್ಪೂರ್ತಿ ವಿಶ್ವಾಸ್ ರಿಯಾಕ್ಷನ್
- Advertisement -
‘ಸನ್ ಆಫ್ ಮುತ್ತಣ್ಣ’ ಚಿತ್ರದ ಸುದ್ದಿಗೋಷ್ಠಿಯೊಂದರಲ್ಲಿ ರಂಗಾಯಣ ರಘು ಮಾತನಾಡಿ, ಮಾಕಾಳಮ್ಮ ತಾಯಿ ನಿನ್ನ ಆಶೀರ್ವಾದ ಚಿತ್ರರಂಗದ ಮೇಲಿರಲಿ. ಕನ್ನಡ ಚಿತ್ರರಂಗ ಈಗ ಸಂಕಷ್ಟದಲ್ಲಿದೆ ತಾಯಿ ಬಂಡೆ ಮಾಕಾಳಮ್ಮ ಎಂದಿದ್ದಾರೆ. ಇವೆಲ್ಲ ತೊಳೆದುಕೊಂಡು ಹೋಗಬೇಕು ಹಾಗೆ ಮಾಡಮ್ಮ ಎಂದು ಶಕ್ತಿ ದೇವತೆ ಬಂಡೆ ಮಾಕಾಳಮ್ಮ ಬಳಿ ರಂಗಾಯಣ ರಘು ಮನವಿ ಮಾಡಿದ್ದಾರೆ. ಇದನ್ನೂ ಓದಿ:ಖ್ಯಾತ ಗಾಯಕಿ ಉಷಾ ಉತ್ತುಪ್ ಪತಿ ಹೃದಯಾಘಾತದಿಂದ ನಿಧನ
- Advertisement -
- Advertisement -
ಅಂದಹಾಗೆ, ದೇವರಾಜ್ ಪುತ್ರ ಪ್ರಣಮ್ ನಟನೆಯ ‘ಸನ್ ಆಫ್ ಮುತ್ತಣ್ಣ’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಪ್ರಣಮ್ ಜೊತೆ ಪ್ರಮುಖ ಪಾತ್ರದಲ್ಲಿ ರಂಗಾಯಣ ರಘು ನಟಿಸಿದ್ದಾರೆ. ಚಿತ್ರಕ್ಕೆ ‘ದಿಯಾ’ ಖ್ಯಾತಿಯ ಖುಷಿ ರವಿ ನಾಯಕಿಯಾಗಿದ್ದಾರೆ.