ಬಾಲಿವುಡ್ ನಟ ಸನ್ನಿ ಡಿಯೋಲ್‌ಗೆ (Sunny Deol) ಈ ವರ್ಷ ತುಂಬಾ ಲಕ್ಕಿ. ಗದರ್ 2 (Gadar 2) ಸಕ್ಸಸ್ ಆಗಿದೆ, ಸನ್ನಿ ಡಿಯೋಲ್ ಸಿನಿಮಾ 500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಸನ್ನಿ ಡಿಯೋಲ್ ಅವರಂತೆ ಮಿಂಚಲು ಸಹೋದರ ಬಾಬಿ ಡಿಯೋಲ್ ಕೂಡ ರೆಡಿಯಾಗಿದ್ದಾರೆ. ಅನಿಮಲ್ ಸಿನಿಮಾದಲ್ಲಿ ರಣ್‌ಬೀರ್ ಮುಂದೆ ಬಾಬಿ ಡಿಯೋಲ್ (Bobby Deol) ಅಬ್ಬರಿಸಲಿದ್ದಾರೆ. ಸಿನಿಮಾ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಇದನ್ನೂ ಓದಿ:ಶ್ರೀಲೀಲಾ ಔಟ್, ವಿಜಯ್ ದೇವರಕೊಂಡಗೆ ಮತ್ತೆ ರಶ್ಮಿಕಾ ಮಂದಣ್ಣ ನಾಯಕಿ
ರಣ್‌ಬೀರ್ ಕಪೂರ್, ರಶ್ಮಿಕಾ ಮಂದಣ್ಣ(Rashmika Mandanna), ಅನಿಲ್ ಕಪೂರ್ ಬಳಿಕ ‘ಅನಿಮಲ್’ ಚಿತ್ರದ ಬಾಬಿ ಡಿಯೋಲ್ ಪೋಸ್ಟರ್ ರಿವೀಲ್ ಆಗಿದೆ. ಸಖತ್ ಮಾಸ್ & ರಗಡ್ ಆಗಿ ಬಾಬಿ ಡಿಯೋಲ್ ಕಾಣಿಸಿಕೊಂಡಿದ್ದಾರೆ. ಜೊತೆಗೆ ಪೋಸ್ಟರ್‌ನಲ್ಲಿ ರಕ್ತ ಸಿಕ್ತವಾಗಿ ಕಾಣಿಸಿಕೊಂಡಿದ್ದಾರೆ. ನಟನ ಲುಕ್ ನೋಡಿ ಫ್ಯಾನ್ಸ್‌ಗೆ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.
BOBBY DEOL: ‘ANIMAL’ TEASER DROPS ON 28 SEPT… Meet #Animal ka enemy: #BobbyDeol… Stars #RanbirKapoor… Directed by #SandeepReddyVanga, #Animal arrives in *cinemas* on 1 Dec 2023.#BhushanKumar #MuradKhetani #AnimalTeaserOn28thSept#AnimalOn1stDec#AnimalTheFilm pic.twitter.com/KKlVvTdCtC
— taran adarsh (@taran_adarsh) September 26, 2023
ಬಾಲನಟನಾಗಿ ಬಾಬಿ ಡಿಯೋಲ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಾಯಕನಟನಾಗಿ ಹಲವು ಹಿಟ್ ಸಿನಿಮಾಗಳನ್ನ ನೀಡಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಬಾಬಿ ಡಿಯೋಲ್ ಕೆರಿಯರ್‌ಗೆ ಸಕ್ಸಸ್ ಸಿಕ್ಕಿಲ್ಲ. ಹಾಗಾಗಿ ‘ಅನಿಮಲ್’ ಸಿನಿಮಾ ಮೇಲಿನ ನಿರೀಕ್ಷೆ ಡಬಲ್ ಆಗಿದೆ.
ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಅನಿಮಲ್’ ಸಿನಿಮಾ ಡಿಸೆಂಬರ್ 1ಕ್ಕೆ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ. ರಣ್‌ಬೀರ್ ಕಪೂರ್‌ಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]