ನಟ ರಣ್ಬೀರ್ ಕಪೂರ್- ದೀಪಿಕಾ ಪಡುಕೋಣೆ (Deepika Padukone) ನಟನೆಯ ‘ಯೇ ಜವಾನಿ ಹೈ ದಿವಾನಿ’ (Ye Jawani Hai Diwani) ಸಿನಿಮಾ 2013ರಲ್ಲಿ ಸೂಪರ್ ಹಿಟ್ ಆಗಿತ್ತು. ಇದೀಗ ಇದೇ ಸಿನಿಮಾದ ಸೀಕ್ವೆಲ್ಗೆ ತಯಾರಿ ನಡೆಯುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಚಿತ್ರಕ್ಕಾಗಿ ಮತ್ತೆ ಒಂದಾಗ್ತಾರಾ ರಣ್ಬೀರ್- ದೀಪಿಕಾ?
Advertisement
ರಣ್ಬೀರ್- ದೀಪಿಕಾ ಪಡುಕೋಣೆ ಜೋಡಿ ತೆರೆಯ ಮೇಲೆ ಮೋಡಿ ಮಾಡಿತ್ತು. ಅದರಲ್ಲೂ ‘ಯೇ ಜವಾನಿ ಹೈ ದಿವಾನಿ’ ಸಿನಿಮಾ ಅಂತೂ ಪ್ರೇಕ್ಷಕರಿಗೆ ರಸದೌತಣ ನೀಡಿತ್ತು. ಸ್ನೇಹ, ಪ್ರೀತಿ, ಸಂಬಂಧದ ಬಗ್ಗೆ ಅಯಾನ್ ಮುಖರ್ಜಿ ಅದ್ಭುತವಾಗಿ ತೋರಿಸಿದ್ದರು. ಈ ಚಿತ್ರದ ಪಾರ್ಟ್ 2 ಬಗ್ಗೆ ರಣ್ಬೀರ್ ಸುಳಿವು ನೀಡಿದ್ದಾರೆ.
Advertisement
Advertisement
‘ಯೇ ಜವಾನಿ ಹೈ ದಿವಾನಿ’ ಸಿನಿಮಾ ತೆರೆಕಂಡು 10 ವರ್ಷಗಳಾಗಿದೆ. ಜೊತೆಗೆ ಚಿತ್ರದ ಪಾರ್ಟ್ 2 ಬಗ್ಗೆ ಚರ್ಚೆಗೆ ಗ್ರಾಸವಾಗಿದೆ. ಅಯಾನ್ ಸದ್ಯ ಬ್ರಹ್ಮಾಸ್ತ್ರ 2 ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. 2017ಕ್ಕೆ ಈ ಚಿತ್ರ ತೆರೆಗೆ ಬರಲಿದೆ. ಇದಾದ ಬಳಿಕ ‘ಯೇ ಜವಾನಿ ಹೈ ದಿವಾನಿ’ ಪಾರ್ಟ್ 2 ಬಗ್ಗೆ ತಯಾರಿ ಮಾಡೋದಾಗಿ ರಣ್ಬೀರ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದನ್ನೂ ಓದಿ:ರಾಣಾ ದಗ್ಗುಭಾಟಿ ಪತ್ನಿ ಪ್ರೆಗ್ನೆಂಟ್? ಮಿಹಿಕಾ ಬಜಾಜ್ ಪ್ರತಿಕ್ರಿಯೆ
Advertisement
ಪಾರ್ಟ್ 2 ಬಗ್ಗೆ ರಣ್ಬೀರ್ ಸುಳಿವು ನೀಡ್ತಿದ್ದಂತೆ ದೀಪಿಕಾ- ರಣ್ಬೀರ್ ಮುಂದಿನ ಸೀಕ್ವೆಲ್ನಲ್ಲಿ ಒಟ್ಟಿಗೆ ನಟಿಸುತ್ತಾರಾ ಎಂಬ ಚರ್ಚೆ ಶುರುವಾಗಿದೆ. ಎಲ್ಲದಕ್ಕೂ ಕಾದುನೋಡಬೇಕಿದೆ.