ಗೆಳತಿಗೆ ಬ್ರೇಕಪ್ ಧಮ್ಕಿ ಹಾಕಿದ ರಣ್‍ಬೀರ್ ಕಪೂರ್

Public TV
2 Min Read
ranbir kapoor

ಮುಂಬೈ: ಬಾಲಿವುಡ್ ನಟ ರಣ್‍ಬೀರ್ ಕಪೂರ್ ಬ್ರೇಕಪ್ ಮಾಡುವುದಾಗಿ ತನ್ನ ಗೆಳತಿ ಅಲಿಯಾ ಭಟ್‍ಗೆ ಧಮ್ಕಿ ಹಾಕಿದ್ದಾರೆ ಎಂಬ ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿವೆ.

ರಣ್‍ಬೀರ್ ಹಾಗೂ ಅಲಿಯಾ ಭಟ್ ಬಾಲಿವುಡ್‍ನ ಕ್ಯೂಟ್ ಕಪಲ್ ಆಗಿದ್ದು, ‘ಬ್ರಹ್ಮಾಸ್ತ್ರ’ ಚಿತ್ರದ ವೇಳೆ ಇವರಿಬ್ಬರ ನಡುವೆ ಪ್ರೀತಿ ಶುರುವಾಗಿದೆ. ಇವರಿಬ್ಬರ ಪ್ರೀತಿಗೆ ಎರಡು ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಈಗ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಅಲ್ಲದೇ ರಣ್‍ಬೀರ್ ತನ್ನ ಗೆಳತಿ ಅಲಿಯಾಗೆ ಬ್ರೇಕಪ್ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ranbir kapoor alia bhat

ವರದಿಗಳ ಪ್ರಕಾರ, ರಣ್‍ಬೀರ್ ಹಾಗೂ ಅಲಿಯಾ ನಡುವೆ ಯಾವುದು ಸರಿಯಾಗಿ ನಡೆಯುತ್ತಿಲ್ಲ. ಅಲಿಯಾ ತನ್ನ ಗೆಳೆಯ ರಣ್‍ಬೀರ್ ಕಪೂರ್ ಗೆ ಕರೆ ಮಾಡಿದರೆ ಅವರು ಬೇಗ ಸ್ವೀಕರಿಸುತ್ತಿಲ್ಲ. ಅಲ್ಲದೇ ಅಲಿಯಾ ಪದೇ ಪದೇ ಕರೆ ಮಾಡಿ, ಮೆಸೇಜ್ ಮಾಡುವುದು ರಣ್‍ಬೀರ್ ಕಪೂರ್ ಗೆ ಇಷ್ಟವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಅಲಿಯಾ ತನ್ನ ಗೆಳೆಯ ರಣ್‍ಬೀರ್ ಕಪೂರ್ ಜೊತೆ ಸಮಯ ಕಳೆಯಲು ಇಷ್ಟಪಡುತ್ತಾರೆ. ಆದರೆ ರಣ್‍ಬೀರ್ ತಮ್ಮ ಚಿತ್ರಗಳತ್ತ ಗಮನ ಕೊಡುತ್ತಿದ್ದಾರೆ ಎನ್ನಲಾಗುತ್ತಿದೆ.

ranbir kapoor alia bhat 2

ರಣ್‍ಬೀರ್ ಕಪೂರ್ ತನ್ನ ಹತ್ತಿರ ಇಲ್ಲ ಎಂದರೆ ಅಲಿಯಾ ಅವರಿಗೆ ನಿರಂತರ ಕರೆ ಹಾಗೂ ಮೆಸೇಜ್ ಮಾಡುತ್ತಾರೆ. ಇದು ರಣ್‍ಬೀರ್ ಕಪೂರ್ ಅವರಿಗೆ ಇಷ್ಟವಿಲ್ಲ. ಹಾಗಾಗಿ ರಣ್‍ಬೀರ್ ಈ ಹಿಂದೆ ಯಾವಾಗಲೂ ನಿನ್ನ ಜೊತೆ ಮಾತನಾಡಲು ಇರುವುದಕ್ಕೆ ಆಗುವುದಿಲ್ಲ. ನನ್ನ ಜೀವನದಲ್ಲಿ ನನಗೂ ಸ್ವಲ್ಪ ಸಮಯ ಕೊಡು ಎಂದು ಅಲಿಯಾಗೆ ಹೇಳಿದ್ದರು. ಆದರೆ ಅಲಿಯಾ ರಣ್‍ಬೀರ್ ಅವರ ಮಾತನ್ನು ಒಪ್ಪುತ್ತಿಲ್ಲ ಎಂದು ಹೇಳಲಾಗಿದೆ.

Alia Ranbeer

ರಣ್‍ಬೀರ್ ತಮ್ಮ ಪ್ರೀತಿಯನ್ನು ಹಗುರವಾಗಿ ತೆಗೆದುಕೊಂಡಿದ್ದಾರೆ ಎಂದು ಅಲಿಯಾ ಚಿಂತಿಸುತ್ತಿದ್ದಾರೆ. ಅಲ್ಲದೇ ರಣ್‍ಬೀರ್ ಕೂಡ ಬ್ರೇಕಪ್ ಮಾಡಿಕೊಳ್ಳುವುದಾಗಿ ಅಲಿಯಾಗೆ ಬೆದರಿಕೆ ಹಾಕಿದ್ದಾರೆ. ರಣ್‍ಬೀರ್ ಅವರ ಈ ವರ್ತನೆಯಿಂದ ಅಲಿಯಾ ತುಂಬಾ ನೋವು ಪಡುತ್ತಿದ್ದಾರೆ. ಅಲಿಯಾ ತನ್ನ ಗೆಳೆಯ ರಣ್‍ಬೀರ್ ನನ್ನು ಪ್ರೀತಿಸುತ್ತಿದ್ದು, ಅವರನ್ನೇ ಮದುವೆ ಆಗುವ ಆಸೆಯನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ.

Alia Ranbeer 1

ರಣ್‍ಬೀರ್ ಕಪೂರ್ ಅವರ ತಂದೆ ರಿಷಿ ಕಪೂರ್ ಅನಾರೋಗ್ಯದಿಂದ ಬಳಲುತ್ತಿದ್ದು, ತಾಯಿ ನೀತೂ ಕಪೂರ್ ತನ್ನ ಮಗನ ಮದುವೆಯನ್ನು ಬೇಗ ಮಾಡುವುದಾಗಿ ನಿರ್ಧರಿಸಿದ್ದಾರೆ. ಅಲಿಯಾ, ರಣ್‍ಬೀರ್ ಕಪೂರ್ ಜೊತೆ ಅವರ ತಂದೆಯನ್ನು ಭೇಟಿ ಮಾಡಲು ಎರಡು ಬಾರಿ ನ್ಯೂಯಾರ್ಕ್ ಗೆ ಭೇಟಿ ನೀಡಿದ್ದಾರೆ. ಬ್ರಹ್ಮಾಸ್ತ್ರ ಚಿತ್ರ ಬಿಡುಗಡೆ ನಂತರ ಇಬ್ಬರ ಮದುವೆ ನಡೆಯಲಿದೆ ಎಂದು ಹೇಳಲಾಗಿದೆ. ಜೂನ್ ತಿಂಗಳಿನಲ್ಲಿ ನಿಶ್ಚಿತಾರ್ಥ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *