ಬಾಲಿವುಡ್ ನಟ ರಣ್‌ಬೀರ್ ಕಪೂರ್ ನಟನೆಯ ‘ಅನಿಮಲ್’ (Animal) ಸಿನಿಮಾ ಕಳೆದ ವರ್ಷ ರಿಲೀಸ್ ಆಗಿ ಸಕ್ಸಸ್ ಕಂಡಿದೆ. ಈ ಚಿತ್ರದ ಸೀಕ್ವೆಲ್ ಯಾವಾಗ ಎಂಬ ಅಭಿಮಾನಿಗಳ ಕಾತರಕ್ಕೆ ರಣ್‌ಬೀರ್ ಕಪೂರ್ (Ranbir Kapoor) ಗುಡ್ ನ್ಯೂಸ್ ಕೊಟ್ಟಿದ್ದಾರೆ. `ಅನಿಮಲ್ 2′ 2027ರಲ್ಲಿ ಶುರುವಾಗಲಿದೆ ಎಂದಿದ್ದಾರೆ.
Advertisement
ಇತ್ತೀಚೆಗೆ ಆಗಮಿಸಿದ ಕಾರ್ಯಕ್ರಮವೊಂದರಲ್ಲಿ ರಣ್‌ಬೀರ್ ಮಾತನಾಡಿ, ‘ಅನಿಮಲ್ ಪಾರ್ಟ್ 2’ (Animal 2) 2027ರಲ್ಲಿ ರಿಲೀಸ್ ಆಗಲಿದೆ. ಈ ಚಿತ್ರವನ್ನು ನನಗೆ 3 ಭಾಗಗಳಲ್ಲಿ ಮಾಡಲು ಆಸೆಯಿದೆ. 2ನೇ ಪಾರ್ಟ್‌ಗೆ ‘ಅನಿಮಲ್ ಪಾರ್ಕ್’ ಎಂದು ಟೈಟಲ್ ಇಡಲಾಗಿದೆ. ಈ ಮೊದಲೇ ಈ ಬಗ್ಗೆ ಚರ್ಚಿಸಿದ್ದೇವು ಎಂದಿದ್ದಾರೆ.
Advertisement
Advertisement
ಈ ಚಿತ್ರ ನನಗೆ ತುಂಬಾ ಖುಷಿ ಕೊಟ್ಟಿದೆ. ಒಂದೇ ಸಿನಿಮಾದಲ್ಲಿ ವಿಲನ್ ಮತ್ತು ಹೀರೋ ಎರಡು ಪಾತ್ರದಲ್ಲಿ ನಟಿಸುವ ಚಾನ್ಸ್ ದಕ್ಕಿದೆ ಎಂದು ಖುಷಿಯಿಂದ ರಣ್‌ಬೀರ್ ಮಾತನಾಡಿದ್ದಾರೆ. ಇದನ್ನೂ ಓದಿ:BBK 11: ಮತ್ತೆ ಬಿಗ್ ಬಾಸ್‌ಗೆ ತನಿಷಾ, ಪ್ರತಾಪ್, ಸಂತು ಪಂತು ಎಂಟ್ರಿ
Advertisement
ಇನ್ನೂ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಸಿನಿಮಾದಲ್ಲಿ ರಣ್‌ಬೀರ್ ಜೊತೆ ರಶ್ಮಿಕಾ ಮಂದಣ್ಣ (Rashmika Mandanna), ತೃಪ್ತಿ ದಿಮ್ರಿ, ಅನಿಲ್ ಕಪೂರ್, ಬಾಬಿ ಡಿಯೋಲ್ ಸೇರಿದಂತೆ ಅನೇಕರು ನಟಿಸಿದರು. ತಂದೆ ಮತ್ತು ಮಗನ ಬಾಂಧವ್ಯ ಮತ್ತು ಗೀತಾಂಜಲಿ (ರಶ್ಮಿಕಾ) ಮೇಲಿನ ರಣ್‌ಬೀರ್ ಪ್ರೀತಿಗೆ ಫ್ಯಾನ್ಸ್ ಫಿದಾ ಆಗಿದ್ದರು.