ಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ (Alia Bhatt) ದಂಪತಿ ಮಗಳು ರಾಹಾ (Raha Kapoor) ಸುರಕ್ಷತೆಗಾಗಿ ದಿಟ್ಟ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಮಗಳ ಫೋಟೋವನ್ನು ಕ್ಲಿಕ್ಕಿಸಬೇಡಿ, ಒಂದು ವೇಳೆ ತೆಗೆದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಲಿಯಾ ಪಾಪರಾಜಿಗಳಿಗೆ ಖಡಕ್ ಸೂಚನೆಯನ್ನು ಕೊಟ್ಟಿದ್ದಾರೆ. ಇದನ್ನೂ ಓದಿ:ಫ್ಯಾಮಿಲಿ ಜೊತೆ ಹೋಳಿ ಹಬ್ಬ ಆಚರಿಸಿದ ಕತ್ರಿನಾ ಕೈಫ್
ಮಾ.15ರಂದು ಆಲಿಯಾ ಭಟ್ 32ನೇ ವಸಂತಕ್ಕೆ ಕಾಲಿಡಲಿದ್ದಾರೆ. ಈ ಹಿನ್ನೆಲೆ 2 ದಿನ ಮುಂಚಿತವಾಗಿ ನಿನ್ನೆ (ಮಾ.13) ಮಾಧ್ಯಮಗಳ ಜೊತೆ ಹುಟ್ಟುಹಬ್ಬವನ್ನು ನಟಿ ಆಚರಿಸಿಕೊಂಡಿದ್ದಾರೆ. ಈ ವೇಳೆ ಮಾತನಾಡಿದ ಆಲಿಯಾ, ಯಾರೂ ಕೂಡ ತಮ್ಮ ಮಗಳ ಫೋಟೋ ತೆಗೆಯಬಾರದು ಮತ್ತು ಅನಧಿಕೃತವಾಗಿ ಬಳಸಬಾರದು ಎಂದು ಮನವಿ ಮಾಡಿದ್ದಾರೆ.
ಒಂದು ವೇಳೆ ಕೆಲವರು ಮಾತು ಕೇಳದೇ ಇದ್ದರೆ ಅಂಥವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳದೇ ಬೇರೆ ಯಾವುದೇ ಆಯ್ಕೆ ಇಲ್ಲ ಎಂದಿದ್ದಾರೆ. ಕೇರ್ ಮಾಡದೇ ಇರುವವರಿಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಟಿ ಎಚ್ಚರಿಕೆ ನೀಡಿದ್ದಾರೆ. ನಟಿಯ ಈ ನಿರ್ಧಾರಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ಇನ್ನೂ 2022ರಲ್ಲಿ ರಣಬೀರ್ ಕಪೂರ್ ಜೊತೆ ಆಲಿಯಾ ಮದುವೆ ನಡೆಯಿತು. ಇವರ ಸುಂದರ ದಾಂಪತ್ಯಕ್ಕೆ 2 ವರ್ಷದ ಮಗಳು ರಾಹಾ ಸಾಕ್ಷಿಯಾಗಿದ್ದಾಳೆ.