ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಹೀರೋ ರಮೇಶ್ ಅರವಿಂದ್ (Ramesh Aravind) ಅವರಿಗೆ ಇಂದು (ಸೆ.10) ಹುಟ್ಟುಹಬ್ಬದ ಸಂಭ್ರಮವಾಗಿದ್ದು, ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ‘ಶಿವಾಜಿ ಸುರತ್ಕಲ್ 2’ (Shivaji Surthkal 2) ಸಿನಿಮಾದ ನಂತರ ನಟ ರಮೇಶ್ ಅವರ ಮುಂದಿನ ಸಿನಿಮಾ ಯಾವುದು? ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಇದನ್ನೂ ಓದಿ:ಸಮುದ್ರ ತೀರದಲ್ಲಿ ಯಶ್ ಫ್ಯಾಮಿಲಿ- ಪುತ್ರಿ ಜೊತೆ ರಾಧಿಕಾ ತುಂಟಾಟ
ರಮೇಶ್ ಅರವಿಂದ್ (Ramesh Aravind) ಅವರು ಇದೀಗ ಮತ್ತೆ ನಿರ್ದೇಶಕ ಆಕಾಶ್ ಶ್ರೀವತ್ಸ ಜೊತೆ ಕೈಜೋಡಿಸಿದ್ದಾರೆ. ಹುಟ್ಟುಹಬ್ಬದ ಶುಭ ಸಂದರ್ಭದಲ್ಲಿ ‘ದೈಜಿ’ ಎಂಬ ಸಿನಿಮಾ ಅನೌನ್ಸ್ ಮಾಡಿದ್ದಾರೆ. ‘ದೈಜಿ’ (Daiji Film) ಚಿತ್ರಕ್ಕೆ ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ರವಿ ಕಶ್ಯಪ್ ನಿರ್ಮಾಣ ಮಾಡುತ್ತಿದ್ದಾರೆ. ರಮೇಶ್ ಅರವಿಂದ್- ಆಕಾಶ ಶ್ರೀವತ್ಸ ಅವರ ಹಿಟ್ ಕಾಂಬಿನೇಷನ್ ಮತ್ತೊಮ್ಮೆ ಒಂದಾಗುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಸಿನಿಮಾದ ಮೊದಲ ಪೋಸ್ಟರ್ ಗಮನ ಸೆಳೆಯುತ್ತಿದೆ. ರಮೇಶ್ ಅವರ ಲುಕ್ ಭಿನ್ನವಾಗಿ ಮೂಡಿ ಬಂದಿದೆ.
View this post on Instagram
‘ದೈಜಿ’ ಎಂಬುದಕ್ಕೆ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ರೀತಿಯ ಅರ್ಥಗಳಿವೆ. ಕೊಂಕಣಿ ಭಾಷೆಯಲ್ಲಿ ದೈಜಿ ಎಂದರೆ ರಕ್ತ ಸಂಬಂಧ. ಜಪಾನ್‌ನಲ್ಲಿ ದೈಜಿ ಎಂದರೆ ಬಹಳ ಕಾಳಜಿ ವಹಿಸಬೇಕಾದ ವಿಚಾರ ಎಂಬ ಅರ್ಥ ನೀಡುತ್ತದೆ.
ಶಿವಾಜಿ ಸುರತ್ಕಲ್ ಪಾರ್ಟ್ 1 & 2 ಮರ್ಡರ್ ಮಿಸ್ಟರಿ ಸುತ್ತ ಕಥೆಯಿತ್ತು. ಆದರೆ ‘ದೈಜಿ’ ಸಿನಿಮಾ ಅದಕ್ಕಿಂತ ವಿಭಿನ್ನವಾಗಿದ್ದು, ಹಾರರ್ ಮತ್ತು ಮಿಸ್ಟರಿ ಶೈಲಿಯಲ್ಲಿ ಮೂಡಿ ಬರಲಿದೆ.