ಕನ್ನಡದ ‘ಬಿಗ್ ಬಾಸ್ ಸೀಸನ್ 11’ರ ಕಾರ್ಯಕ್ರಮ ಅಂತ್ಯವಾಗಲು ಕೆಲವೇ ದಿನಗಳು ಬಾಕಿಯಿವೆ. ಇತ್ತ ಹಿಂದಿ ‘ಬಿಗ್ ಬಾಸ್’ ಸೀಸನ್ 18 (Bigg Boss Hindi 18) ಕೂಡ ಸದ್ದು ಮಾಡುತ್ತಿದೆ. ಸಲ್ಮಾನ್ ಖಾನ್ (Salman Khan) ನಿರೂಪಣೆಯ ಈ ಕಾರ್ಯಕ್ರಮಕ್ಕೆ ರಾಮ್ ಚರಣ್ ಮತ್ತು ಕಿಯಾರಾ ಅತಿಥಿಯಾಗಿ ಭಾಗವಹಿಸಿದ್ದಾರೆ. ಈ ವೇಳೆ, ನಿಮ್ಮ ಸಿನಿಮಾ ನೋಡಲು ಕಾಯುತ್ತೀದ್ದೇವೆ ಎಂದು ಸಲ್ಮಾನ್‌ರನ್ನು ರಾಮ್ ಚರಣ್ ಹಾಡಿ ಹೊಗಳಿದ್ದಾರೆ.
View this post on Instagram
Advertisement
ರಾಮ್ ಚರಣ್ (Ram Charan) ಮತ್ತು ಕಿಯಾರಾ ಅಡ್ವಾಣಿ (Kiara Advani) ‘ಗೇಮ್ ಚೇಂಜರ್’ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಿಮಿತ್ತ ಹಿಂದಿ ಬಿಗ್ ಬಾಸ್‌ಗೂ ಅತಿಥಿಗಳಾಗಿ ಆಗಮಿಸಿದ್ದಾರೆ. ಈ ವೇಳೆ ರಾಮ್ ಚರಣ್ ಮಾತನಾಡಿ, ಸಲ್ಮಾನ್ ಭಾಯ್ ನಿಮ್ಮ ಸಿನಿಮಾ ನೋಡಿ ಬಹಳ ಸಮಯ ಆಯಿತು. ನಿಮ್ಮಲಿರುವ ಸಿಖಂದರ್ ಅನ್ನು ನೋಡಲು ಕಾಯುತ್ತಿದ್ದೇವೆ ಎಂದರು. ಆಗ ಕಿಯಾರಾ ಕೂಡ ‘ಸಿಖಂದರ್’ ಚಿತ್ರದ ಟೀಸರ್ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
Advertisement
View this post on Instagram
Advertisement
ಅಂದಹಾಗೆ, ‘ಸಿಖಂದರ್’ ಸಿನಿಮಾದಲ್ಲಿ ಸಲ್ಮಾನ್ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್ ಯೋಧನ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಎ.ಆರ್ ಮುರುಗದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಮುಂದಿನ ವರ್ಷ ಈದ್ ಹಬ್ಬದಂದು ಸಿನಿಮಾ ರಿಲೀಸ್ ಆಗಲಿದೆ.