ಬೆಳಗ್ಗೆಯಷ್ಟೇ ಉಡುಪಿಯಲ್ಲಿ ಮತದಾನ ಮಾಡಿರುವ ರಕ್ಷಿತ್ ಶೆಟ್ಟಿ (Rakshit Shetty) , ಇಂದು ರಾತ್ರಿ ಅಮೆರಿಕಾದ (America) ವಿಮಾನ ಏರಲಿದ್ದಾರೆ. ಮತದಾನ ಮಾಡುವುದಕ್ಕಾಗಿಯೇ ಕಾಯುತ್ತಿದ್ದ ಅವರು, ಮತದಾನದ ಕರ್ತವ್ಯ ಮುಗಿಸಿ ಇಂದು ಯುಎಸ್.ಎಗೆ ಪಯಣ ಬೆಳೆಸುತ್ತಿದ್ದಾರೆ. ಈ ಮಾಹಿತಿಯನ್ನು ಸ್ವತಃ ಅವರೇ ಹಂಚಿಕೊಂಡಿದ್ದಾರೆ.
Advertisement
777 ಚಾರ್ಲಿ ನಂತರ ರಕ್ಷಿತ್ ಮತ್ತ್ಯಾವ ಸಿನಿಮಾದಲ್ಲಿ ತೊಡಗಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಸಹಜವಾಗಿಯೇ ಅವರ ಅಭಿಮಾನಿಗಳಲ್ಲಿತ್ತು. ಅದಕ್ಕೂ ಅವರು ಉತ್ತರಿಸಿದ್ದಾರೆ. ಇದೀಗ ರಿಚರ್ಡ್ ಆಂಟೋನಿ (Richard Antony) ಸಿನಿಮಾವನ್ನು ಕೈಗೆತ್ತಿಕೊಂಡಿದ್ದು, ಈ ಸಿನಿಮಾದ ಸ್ಕ್ರಿಪ್ಟ್ (Script)ಮಾಡಲು ಅವರು ಅಮೆರಿಕಾಗೆ ತೆರಳಲಿದ್ದಾರೆ. ಇದನ್ನೂ ಓದಿ:ರಾಣಾ ದಗ್ಗುಭಾಟಿ ಪತ್ನಿ ಪ್ರೆಗ್ನೆಂಟ್? ಮಿಹಿಕಾ ಬಜಾಜ್ ಪ್ರತಿಕ್ರಿಯೆ
Advertisement
Advertisement
ಈಗಾಗಲೇ ಸ್ಕ್ರಿಪ್ಟ್ ಬರೆಯಲು ತೊಡಗಿಕೊಂಡಿರುವ ರಕ್ಷಿತ್, ಅದರ ಅಂತಿಮ ಹಂತದ ಸ್ಕ್ರಿಪ್ಟ್ ಗಾಗಿ ಅಮೆರಿಕಾದಲ್ಲಿ ಕೆಲಸ ಮಾಡುತ್ತಾರಂತೆ. ಅಮೆರಿಕಾಗೆ ಹೋಗಲು ತಮ್ಮದೇ ಆದ ಕಾರಣವನ್ನು ನೀಡಿದ್ದಾರೆ ರಕ್ಷಿತ್. ಅಲ್ಲಿ ಹಗಲು ಇದ್ದರೆ, ಇಲ್ಲಿ ರಾತ್ರಿ ಇರುತ್ತದೆ. ಇಲ್ಲಿ ರಾತ್ರಿಯಾದರೆ ಅಲ್ಲಿ ಹಗಲು. ಫೋನ್ ತೊಂದರೆ ಇರುವುದಿಲ್ಲ. ಹಾಗಾಗಿ ಅಮೆರಿಕಾ ಆಯ್ಕೆ ಮಾಡಿಕೊಂಡಿದ್ದೇನೆ ಎಂದಿದ್ದಾರೆ.
Advertisement
ರಿಚರ್ಡ್ ಆಂಟೋನಿ ಸಿನಿಮಾಗೆ ಅವರೇ ನಟ ಹಾಗೂ ನಿರ್ದೇಶಕ. ಇದು ಅವರದ್ದೇ ಉಳಿದವರು ಕಂಡಂತೆ ಪ್ರೀಕ್ವೆಲ್ ಸಿನಿಮಾವಾಗಿದೆ. ಹೀಗಾಗಿ ಹೆಚ್ಚು ಚಿತ್ರದ ಮೇಲೆ ಫೋಕಸ್ ಮಾಡಿದ್ದಾರಂತೆ ರಕ್ಷಿತ್. ಸದ್ಯ ಅವರು ಸಪ್ತ ಸಾಗರದಾಚೆ ಸಿನಿಮಾದ ಸಂಪೂರ್ಣ ಶೂಟಿಂಗ್ ಮುಗಿಸಿದ್ದು, ಈ ಸಿನಿಮಾವನ್ನು ಹೇಮಂತ್ ರಾವ್ ನಿರ್ದೇಶನ ಮಾಡಿದ್ದಾರೆ.