ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ಉಡುಪಿಯ ಕಾಪು ಹೊಸ ಮಾರಿಗುಡಿಗೆ (Kapu Marigudi Temple) ಭೇಟಿ ನೀಡಿದ್ದಾರೆ. ಮಾರಿಯಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:‘ಜೈಲರ್ 2’ ಸಿನಿಮಾ ಶೂಟಿಂಗ್ ಪ್ರಾರಂಭ- ತಲೈವಾ ಭಾಗಿ
ತಾಯಿ ಜೊತೆ ಕಾಪು ಹೊಸ ಮಾರಿಗುಡಿಗೆ ರಕ್ಷಿತ್ ಭೇಟಿ ನೀಡಿದ್ದಾರೆ. ಈ ವೇಳೆ, ರಕ್ಷಿತ್ ಶೆಟ್ಟಿಗೆ ಆಡಳಿತ ಮಂಡಳಿಯಿಂದ ಗೌರವಿಸಲಾಯಿತು. ಇದನ್ನೂ ಓದಿ:ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಸ್ಟಾರ್ ಹೋಟೆಲ್ ಮಾಲೀಕನ ಮೊಮ್ಮಗ ಅರೆಸ್ಟ್
ಇನ್ನೂ ಇತ್ತೀಚೆಗೆ ಕಾಪು ಮಾರಿಗುಡಿಗೆ ಶಿಲ್ಪಾ ಶೆಟ್ಟಿ, ಕಂಗನಾ ರಣಾವತ್, ಸೂರ್ಯ ಕುಮಾರ್ ಯಾದವ್, ಪೂಜಾ ಹೆಗ್ಡೆ ಸೇರಿದಂತೆ ಅನೇಕರು ಭೇಟಿ ನೀಡಿದ್ದರು.
ಅಂದಹಾಗೆ, ರಕ್ಷಿತ್ ‘ರಿಚರ್ಡ್ ಆ್ಯಂಟನಿ’ ಸಿನಿಮಾ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆಯಿಂದ ಹೊಸಬರಿಗೆ ಅವಕಾಶ ನೀಡುತ್ತಿದ್ದಾರೆ. ನಿರ್ಮಾಣದತ್ತ ಕೂಡ ನಟ ಬ್ಯುಸಿಯಾಗಿದ್ದಾರೆ.