ಚಿತ್ರರಂಗದಲ್ಲಿ ಮಹಿಳೆಯ ಮೇಲಾಗುವ ದೌರ್ಜನ್ಯ ತಡೆಯಲು ಸಮಿತಿ ರಚನೆಯಾಗಬೇಕು ಎಂದು ಸಿಎಂಗೆ ಮನವಿ ಸಲ್ಲಿಸಿರುವ ಬಗ್ಗೆ ರಕ್ಷಿತ್ ಶೆಟ್ಟಿ (Rakshit Shetty) ರಿಯಾಕ್ಷ್ ಮಾಡಿದ್ದಾರೆ. ಕನ್ನಡದಲ್ಲೂ ಕೇರಳದ ಹೇಮಾ ಸಮಿತಿ ರೀತಿ ವರದಿ ಬೇಕು ಎಂದು ನಟ ಮಾತನಾಡಿದ್ದಾರೆ. ಇದನ್ನೂ ಓದಿ:ಕಾರು ಆಕ್ಸಿಡೆಂಟ್ ಬಗ್ಗೆ ನಿರ್ದೇಶಕ ನಾಗಶೇಖರ್ ಹೇಳೋದೇನು?
ಹೇಮಾ ಸಮಿತಿ ರೀತಿ ನಮ್ಮಲ್ಲೂ ಒಂದು ಕಮಿಟಿ ರಚನೆ ಆಗಬೇಕು ಎಂಬುದು ಒಳ್ಳೆಯ ಉದ್ದೇಶ. ನಾವು ಕೂಡ ಅದಕ್ಕೆ ಸಹಿ ಹಾಕುತ್ತೇವೆ. ಸಹಿ ಹಾಕಿದ ಮೇಲೆ ನಾನು ಮತ್ತೆ ಗುಹೆಯಲ್ಲಿ ಹೋಗಿ ಕುಳಿತುಕೊಂಡು ಸಿನಿಮಾ ಮಾಡಿದರೆ ಅದಕ್ಕೆ ಅರ್ಥ ಇರುವುದಿಲ್ಲ. ಒಮ್ಮೆ ಸಹಿ ಮಾಡಿದ ಮೇಲೆ ಅದರ ಹಿಂದಿರುವ ಕೆಲಸವನ್ನು ಕೂಡ ನಾನು ಮಾಡಬೇಕು ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
ಅಂದಹಾಗೆ, ಸೆ.5ರಂದು ನಟ ಚೇತನ್ ನೇತೃತ್ವದಲ್ಲಿ ‘ಫೈರ್ ಸಂಸ್ಥೆ’ ಮೂಲಕ ಸ್ಯಾಂಡಲ್‌ವುಡ್‌ನಲ್ಲೂ ಹೇಮಾ ಕಮಿಟಿಯಂತೆ ಸಮಿತಿ ರಚಿಸಬೇಕು ಎಂದು ಸಿಎಂಗೆ ಮನವಿ ಮಾಡಿದ್ದಾರೆ. ಚೇತನ್ ಜೊತೆ ಶೃತಿ ಹರಿಹರನ್, ನೀತು ಶೆಟ್ಟಿ ಸಾಥ್ ನೀಡಿದರು. ಈ ಮನವಿ ಪತ್ರಕ್ಕೆ ಸುದೀಪ್, ಆಶಿಕಾ ರಂಗನಾಥ್, ಮಾನ್ವಿತಾ ಕಾಮತ್ ಸೇರಿದಂತೆ 153 ಮಂದಿ ಸಹಿ ಹಾಕಿದ್ದಾರೆ.