‘ಬ್ಯಾಚುಲರ್ ಪಾರ್ಟಿ’ (Bachelor Party) ಕಾಪಿರೈಟ್ ಉಲ್ಲಂಘನೆ ಆರೋಪದಲ್ಲಿ ಸಿಲುಕಿರುವ ನಟ ರಕ್ಷಿತ್ ಶೆಟ್ಟಿ (Rakshit Shetty) ಇಂದು (ಆ.2) ಯಶವಂತಪುರ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಸಿ, ಕೋರ್ಟ್‌ನಲ್ಲಿ ಫೈಟ್ ಮಾಡ್ತೀನಿ, ನ್ಯಾಯಾಲಯದಲ್ಲಿ ನೋಡಿಕೊಳ್ಳೋಣ ಎಂದು ಮಾತನಾಡಿದ್ದಾರೆ.
Advertisement
ರಕ್ಷಿತ್ ಶೆಟ್ಟಿ ಮಾತನಾಡಿ, ಕಾಪಿರೈಟ್ ಬಗ್ಗೆ ಇಂಡಸ್ಟ್ರಿಯಲ್ಲಿ ನಾಲೆಡ್ಜೇ ಇಲ್ಲ. ನನ್ನ ಪ್ರಕಾರ, ಕಾಪಿರೈಟ್ ಉಲ್ಲಂಘನೆ ಅಲ್ಲ. ಈ ಸಿನಿಮಾಗೂ ಮುನ್ನ ಆ ಹಾಡುಗಳನ್ನು ಬಳಸಲು ಅನುಮತಿಗಾಗಿ ಎಂಆರ್‌ಟಿ ಮ್ಯೂಸಿಕ್ ಸಂಸ್ಥೆ ಅವರ ಬಳಿ ಮಾತನಾಡಿದಾಗ, ಹೆಚ್ಚಿನ ಮೊತ್ತ ಕೇಳಿದ್ದರು. ಅಷ್ಟು ದೊಡ್ಡ ಅಮೌಂಟ್ ಕೊಡೋಕೆ ನಮಗೆ ಸರಿ ಎನಿಸಲಿಲ್ಲ. ಆಮೇಲೆ ಅವರು ಹೇಳ್ತೀವಿ ಅಂತ ಆ ಮಾತುಕತೆ ಅಲ್ಲೇ ನಿಂತು ಹೋಯಿತು. ಈ ಸಿನಿಮಾದ ರಿಲೀಸ್ ನಂತರ ಅವರು ಕೇಸ್ ಹಾಕಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ:ವಯನಾಡು ಭೂಕುಸಿತ ದುರಂತ: ಆರ್ಥಿಕ ನೆರವು ನೀಡಿದ ರಶ್ಮಿಕಾ, ಸೂರ್ಯ, ಮಮ್ಮುಟ್ಟಿ
Advertisement
Advertisement
ಮೊದಲಿಗೆ ಇದು ಕಾಪಿರೈಟ್ ಉಲ್ಲಂಘನೆ ಅಲ್ಲ. ಕನ್ನಡದ ಹಾಡನ್ನು ಕನ್ನಡ ಚಿತ್ರದಲ್ಲಿ ಬಳಕೆ ಮಾಡುವಂತೆಯೇ ಇಲ್ವಾ ಎಂದು ನಟ ಪ್ರಶ್ನಿಸಿದ್ದಾರೆ. ಕೊಟ್ಟಿರುವ ಕಂಪ್ಲೆಂಟ್‌ಗೆ ನಾನು ಕೂಡ ಕೋರ್ಟ್‌ನಲ್ಲಿ ಫೈಟ್ ಮಾಡ್ತೀನಿ ಎಂದಿದ್ದಾರೆ. ಸಾಂಧರ್ಬಿಕವಾಗಿ ಹಾಡು ಬಳಕೆಯಾಗಿದೆ ಅಷ್ಟೆ. ಕಾಪಿರೈಟ್ ಆಕ್ಟ್ ಏನು ಹೇಳುತ್ತೆ ಎಂಬುದನ್ನು ಕೋರ್ಟ್‌ನಲ್ಲಿ ನೋಡೋಣ. ನ್ಯಾಯಾಲಯ ತೀರ್ಮಾನ ಮಾಡಲಿ. ಈ ಬಗ್ಗೆ ನಮಗೂ ಅರ್ಥವಾಗಲಿ ಯಾವುದೂ ಬಳಸಬೇಕು ಯಾವುದು ಬಳಸಬಾರದು ಅಂತ. ನಮ್ಮ ಪ್ರಕಾರ, ಇದು ಸರಿ ಅಂತಾ ವಾದ ಮಾಡ್ತೀನಿ ಎಂದು ರಕ್ಷಿತ್ ಶೆಟ್ಟಿ ಮಾತನಾಡಿದ್ದಾರೆ.
Advertisement
ಇನ್ನೂ ಈ ಹಿಂದೆ ‘ಕಿರಿಕ್ ಪಾರ್ಟಿ’ ಸಿನಿಮಾ ವಿಚಾರದಲ್ಲೂ ಕಾಪಿರೈಟ್ ಆರೋಪ ಬಂದಾಗ, ನಮ್ಮ ಕಡೆ ಸರಿಯಿದೆ ಅಂತ ಕೋರ್ಟ್‌ನಿಂದ ತೀರ್ಪು ಬಂದಿತ್ತು. ಆ ಬಳಿಕ ಹೊರಗೆ ಸಂಧಾನ ಮಾತುಕತೆಯಾಗಿತ್ತು ಎಂದು ರಕ್ಷಿತ್ ಹೇಳಿದ್ದಾರೆ.
ಅಂದಹಾಗೆ, ಜುಲೈ 15ರಂದು ರಕ್ಷಿತ್ ಶೆಟ್ಟಿ ವಿರುದ್ಧ ಎಂಆರ್‌ಟಿ ಮ್ಯೂಸಿಕ್ ಪಾಲುದಾರರಾಗಿರುವ ನವೀನ್ ಕುಮಾರ್ ದೂರು ನೀಡಿದ್ದರು. ನ್ಯಾಯ ಎಲ್ಲಿದೆ ಚಿತ್ರದ `ನ್ಯಾಯ ಎಲ್ಲಿದೆ’ ಹಾಡು ಮತ್ತು ಗಾಳಿ ಮಾತು ಚಿತ್ರದ ‘ಒಮ್ಮೆ ನಿನ್ನನ್ನು’ ಅನಧಿಕೃತವಾಗಿ ಹಾಡು ಬಳಕೆ ಮಾಡಿದ ಆರೋಪದಲ್ಲಿ ಪರಮ್ವಾ ಸ್ಟುಡಿಯೋಸ್ ಮತ್ತು ರಕ್ಷಿತ್ ಶೆಟ್ಟಿ ವಿರುದ್ಧ ದೂರು ದಾಖಲಾಗಿತ್ತು.